ಸಲ್ಮಾನ್ ಗೆ ಮತ್ತೆ ಸಂಕಷ್ಟ

0
369

ರಾಷ್ಟ್ರೀಯ ಪ್ರತಿನಿಧಿ ವರದಿ
ಬಾಲಿವುಡ್ ನ ಮುನ್ನಾಬಾಯಿಗೆ ಮತ್ತೆ ಸಂಕಷ್ಟ ಎದುರಾಗಿದೆ. ರಾಜಸ್ಥಾನ ಸರ್ಕಾರ ಸುಪ್ರೀಂಕೋರ್ಟ್ ಮೊರೆಹೋಗಿದೆ. 1998ರ ಕೃಷ್ಣಮೃಗ ಬೇಟೆ ಪ್ರಕರಣದ ಶೀಘ್ರವಿಚಾರಣೆಗೆ ಸರ್ಕಾರ ಮನವಿ ಮಾಡಿದೆ. ಆದರೆ ರಾಜಸ್ಥಾನ ಹೈಕೋರ್ಟ್ ಪ್ರಕರಣವನ್ನು ಖುಲಾಸೆಗೊಳಿಸಿತ್ತು. ಈಗ ಸರ್ಕಾರ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆಹೋಗಿದೆ.
 
 
ಈ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆದಿಲ್ಲ ಎಂದು ರಾಜಸ್ಥಾನ ಸರ್ಕಾರ ಸುಪ್ರೀಂಗೆ ಮನವಿ ಮಾಡಿದ್ದು, ಖಾನ್ ರನ್ನು ಕೂಡಲೇ ಜೈಲಿಗೆ ತೆರಳುವಂತೆ ಆದೇಶಿಸಬೇಕು ಎಂದು ರಾಜಸ್ಥಾನ ಸರ್ಕಾರ ಹೇಳಿದೆ.  ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದವು. ಎರಡು ಪ್ರಕರಣಗಳಲ್ಲಿ ಒಟ್ಟು 6 ವರ್ಷಗಳ ಜೈಲು ಶಿಕ್ಷೆಯಿದೆ. ಆದರೆ ಈ 2 ಪ್ರಕರಣಗಳು ‘ಬೆನಿಫಿಟ್ ಆಫ್ ಡೌಟ್’ ಅಡಿಯಲ್ಲಿ ಖುಲಾಸೆಯಾಗಿತ್ತು.
 
 
ಆದರೆ ಈ ತೀರ್ಪನ್ನು ಪ್ರಶ್ನಿಸಿ ರಾಜಸ್ಥಾನ ಸರ್ಕಾರ ವಿಶೇಷ ರಜೆ ಅರ್ಜಿ(ಎಸ್ ಎಲ್ಪಿ) ಹಾಕಿದ್ದು, ದೀಪಾವಳಿ ರಜೆ ಬಳಿಕ ವಿಚಾರಣೆ ಬರುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here