ಸಲೀಂ-ಸುಲೇಮಾನ್ ಜೋಡಿ ಪ್ರೇಕ್ಷಕರ ರಂಜಿಸಲು ಸಜ್ಜು

0
241

ಮಂಗಳೂರು ಪ್ರತಿನಿಧಿ ವರದಿ
ಮಂಗಳೂರಿನಲ್ಲಿ ಮೊದಲ ಬಾರಿಗೆ ಇಂಪೀರಿಯಲ್ ಬ್ಲೂ ಸೂಪರ್ಹಿಟ್ ನೈಟ್ಸ್ ಸೀಸನ್ – 3
ಇಂಪೀರಿಯಲ್ ಬ್ಲೂ ಸೂಪರ್ಹಿಟ್ ನೈಟ್ಸ್ ನ ಮೂರನೇ ಆವೃತ್ತಿಯು ಮುಂದುವರಿದಿದ್ದು, ಬಹುನಗರಗಲ್ಲಿ ಸಭಿಕರನ್ನು ರಂಜಿಸುತಿದೆ. ಈಗ ಈ ಸಂಗೀತ ಕಾರ್ಯಕ್ರಮ ಇದೇ ಮೊದಲ ಬಾರಿಗೆ ಮಂಗಳೂರು ತಲುಪಿದೆ. ವಿದ್ಯುತ್ ಸಂಚಲನದ ಅನುಭವ ನೀಡುವ ಕಾರ್ಯಕ್ರಮ ಆಸ್ವಾಧಿಸಲು ಸಭಿಕರು ಸಜ್ಜಾಗಿದ್ದು, ಹೆಸರಾಂತ ಗಾಯಕ, ಸಂಗೀತ ನಿರ್ದೇಶಕರಾದ ಸಲೀಂ -ಸುಲೇಮಾನ್ ಅವರು ತಮ್ಮ ಅಭಿಮಾನಿ ಸಭಿಕರನ್ನು ಜನಪ್ರಿಯ ಗೀತೆಗಳೊಂದಿಗೆ ರಂಜಿಸಲಿದ್ದಾರೆ. ಆವೃತ್ತಿಯ ಈ ಹಿಂದಿನ ಕಾರ್ಯಕ್ರಮಗಳು ಸಾಕಷ್ಟು ಯಶಸ್ವಿಯಾಗಿವೆ. ಮನರಂಜನೆಯ ಮುಂದಿನ ಹಂತವನ್ನು ತಲುಪಿದೆ.
 
 
 
ಹೆಚ್ಚು ರಂಜನೆಯನ್ನು ಒದಗಿಸುವಂತೆ ಈ ಕಾರ್ಯಕ್ರಮವನ್ನು ರೂಪಿಸಿದ್ದು, ಇಂಪೀರಿಯಲ್ ಬ್ಲೂ ಸೂಪರ್ಹಿಟ್ ನೈಟ್ಸ್ ಸೀಸನ್ 3 ಸಭಿಕರನ್ನು ಹೆಚ್ಚಿನ ಉತ್ಸಾಹದಿಂದ ಪುಟಿಯುವಂತೆ ಮಾಡಲಿದೆ.
ಈ ವರ್ಷ ಸಲೀಂ-ಸುಲೇಮಾನ್ ಜೋಡಿಯು ಕೆಲ ಜನಪ್ರಿಯ ಗೀತೆಗಳಾದ ಆಯೇ ಖುದಾ, ಹೌಲೇ, ಹೌಲೇ, ಶುಕ್ರನ್ ಅಲ್ಲಾ, ಐನವೀ.. ಐನವೀ ಮತ್ತು ಬಾಂಗ್ ಬಾಂಗ್ ಗೀತೆಯನ್ನು ಪ್ರಸ್ತುತಪಡಿಸಲಿದೆ. ಕಾರ್ಯಕ್ರಮದ ಅಂತ್ಯದವರೆಗೂ ಸಭಿಕರ ಮೆಚ್ಚಿನ ಗೀತೆಗಳನ್ನು ಪ್ರಸ್ತುಪಡಿಸಲಾಗುತ್ತದೆ.
 
 
 
ಇಂಪಿರೀಯಲ್ ಬ್ಲೂ ಸೂಪರ್ ಹಿಟ್ ನೈಟ್ಸ್ ನ ಈ ಅವೃತ್ತಿಯನ್ನು ಕುರಿತು ಮಾತನಾಡಿದ ಪರ್ನಾಡ್ ರಿಕಾಡ್ ಇಂಡಿಯಾದ ಉಪಾಧ್ಯಕ್ಷ, ಮಾರ್ಕೆಟಿಂಗ್ ಜಗಬೀರ್ ಸಿಂಗ್ ಸಿಧು ಅವರು, `ಮೊದಲ ಎರಡು ಆವೃತ್ತಿಗೆ ಸಭಿಕರು ನೀಡಿದ ಪ್ರೋತ್ಸಾಹದಿಂದ ನಾವು ಉತ್ಸುಕರಾಗಿದ್ದೇವೆ. ಈ ಆವೃತ್ತಿಯಲ್ಲಿ ಇನ್ನೂ ಹೆಚ್ಚಿನ ರಂಜನೆ ನೀಡಲು ನಾವು ಬದ್ಧರಾಗಿದ್ದೇವೆ. ಈ ವೇದಿಕೆಯನ್ನು ಅತ್ಯುತ್ತಮ ಪ್ರತಿಭೆಗಳು ಒಂದುಗೂಡುವಂತೆ ರೂಪಿಸಲಾಗಿದೆ. ಈ ವರ್ಷ ಸಲೀಂ-ಸುಲೇಮಾನ್ ಜೋಡಿ ನೇತೃತ್ವದ ತಂಡ ಬಹುನಗರಗಳ್ಲಿ ಪ್ರವಾಸ ಕೈಗೊಂಡಿದೆ’ ಎಂದರು.
 
 
 
ಸಭಿಕರ ಉತ್ಸಾಹ ಕುರಿತು ಮಾತನಾಡಿದ ಸಲೀಂ ಮರ್ಚಂಟ್ ಅವರು, `ನಾವು ಇಂಪಿರಿಂಲ್ ಬ್ಲೂ ಸೂಪರ್ಹಿಟ್ ನೈಟ್ಸ್ ಮೂರನೇ ಆವೃತ್ತಿಯ ಭಾಗವಾಗಲು ಸಂತಸ ಪಡುತೇವೆ. ಇದೊಂದು ಅವಿಸ್ಮರಣೀಐ ವೇದಿಕೆ. ದೇಶಾದ್ಯಂತ ಅಭಿಮಾನಿಗಳ ಜತೆಗೂಡಲು ನೆರವಾಗಲಿದೆ. ಪ್ರತಿ ನಗರದಲ್ಲಿ ನಾವು ಸಭಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದ್ದೇವೆ. ಮಂಗಳೂರಿನ ಸಭಿಕರನ್ನು ರಂಜಿಸಲು ಸಜ್ಜಾಗಿದ್ದೇವೆ’ ಎಂದು ಹೇಳಿದರು.

LEAVE A REPLY

Please enter your comment!
Please enter your name here