ಸರ್ವೋತ್ತಮ ಸೇವಾ ಪ್ರಶಸ್ತಿ

0
298

ವರದಿ: ಸುನೀಲ್ ಬೇಕಲ್
ಧರ್ಮಸ್ಥಳದಲ್ಲಿ ಪಶು ವೈದ್ಯಕೀಯಆಸ್ಪತ್ರೆಯಲ್ಲಿ ಪಶುಸಂಗೋಪನಾಧಿಕಾರಿಯಾಗಿಕಾರ್ಯ ನಿರ್ವಹಿಸುತ್ತಿರುವ ಕೆ.ಜಯಕೀರ್ತಿ ಜೈನ್ರಿಗೆ ರಾಜ್ಯ ಸರ್ಕಾರ ನೀಡಿ ಗೌರವಿಸಿದರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಅವರದಕ್ಷ ಹಾಗೂ ಪ್ರಾಮಾಣಿಕ ಸೇವೆಗೆ ಸಂದಗೌರವವಾಗಿದೆಎಂದು ಧರ್ಮಸ್ಥಳದ ಧಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಬೀಡಿನಲ್ಲಿ ಜಯಕೀರ್ತಿ ಜೈನ್ರ ಬಗ್ಗೆ ಪ್ರಕಟಿಸಿದ ಅಭಿನಂದನಾಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
 
 
ಅವರ ಸೇವೆ, ಸಾಧನೆಇತರರಿಗೂಆದರ್ಶ ಹಾಗೂ ಅನುಕರಣೀಯವಾಗಿದೆ.ಸಾರ್ವಜನಿಕ ಸೇವೆಯಿಂದ ಆತ್ಮತೃಪ್ತಿಯೊಂದಿಗೆ ಪುಣ್ಯ ಸಂಚಯವಾಗುತ್ತದೆ ಎಂದು ಅವರು ಹೇಳಿದರು.
ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿಸಿ ಆರ್.ನರೇಂದ್ರ, ವಿಜಯಕುಮಾರ್, ಹೊನ್ನಪ್ಪಗೌಡ, ಮೋಹನದಾಸ್ಜಯರಾಜಜೈನ್, ಡಾ.ಯತೀಶ್, ವತ್ಸಲಾಜ್ಯೋತಿರಾಜ್, ಪುಷ್ಪರಾಜ ಶೆಟ್ಟಿ, ಜಯಕೀರ್ತಿಜೈನ್, ಶಕುಂತಳಾ ಜೆ.ಜೈನ್, ಅತಿಶಯಜೈನ್, ದೇವಿಪ್ರಸಾದ್ ಕಾನತ್ತೂರು, ಸಾಹಿತಿ ರಾಮಕೃಷ್ಣ ಶಾಸ್ತ್ರಿ, ಧರನೇಂದ್ರಕುಮಾರ್, ಚಂದ್ರಶೇಖರ್ ಹಾಗೂ ಸಿದ್ದೇಶ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here