ಸರ್ವರ್ ಡೌನ್-ಪ್ರಯಾಣಿಕರು ಕಂಗಾಲು

0
3032

ನಮ್ಮ ಪ್ರತಿನಿಧಿ ವರದಿ

ನವದೆಹಲಿ
ಪ್ರತಿಷ್ಠಿತ ಏರ್ ಇಂಡಿಯಾದ ಎಸ್.ಐ.ಟಿ.ಎ ಸರ್ವರ್ ಡೌನ್ ಆದ ಕಾರಣದಿಂದಾಗಿ ಏರ್ ಇಂಡಿಯಾದ ಎಲ್ಲಾ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಮಾನ ಹಾರಟದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಶನಿವಾರ ಮುಂಜಾನೆ 3.30ರ ಸುಮಾರಿಗೆ ಸರ್ವರ್ ಡೌನ್ ಆಯಿತು. ಇದರಿಂದಾಗಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಕಾಯುವಂತಾಯಿತು. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವ ದೃಶ್ಯ ಕಂಡು ಬಂತು. ತಾಂತ್ರಿಕ ತೊಂದರೆಯಿಂದಾದ ಸಮಸ್ಯೆಯ ಬಗ್ಗೆ ಸಂಸ್ಥೆ ಕ್ಷಮೆಯಾಚಿಸಿದ್ದಲ್ಲದೆ ಶೀಘ್ರ ಸಮಸ್ಯೆಗೆ ಪರಹಾರ ನೀಡುವುದಾಗಿ ಹೇಳಿದೆ.

LEAVE A REPLY

Please enter your comment!
Please enter your name here