ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!

0
252

 
ನವದೆಹಲಿ ಪ್ರತಿನಿಧಿ ವರದಿ
ಕೊನೆಗೂ ಸರ್ಕಾರಿ ನೌಕರರ ಪ್ರಯತ್ನಕ್ಕೆ ಫಲ ದೊರಕಿದೆ. ಕೇಂದ್ರ ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ. ಇದರಿಂದ 47 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು 52 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಆ.1ರಿಂದ ಏಳನೇ ವೇತನ ಆಯೋಗದ ಶಿಫಾರಸು ಜಾರಿಗೆ ಬರಲಿದೆ ಎನ್ನಲಾಗಿದೆ.
 
 
 
ಆಯೋಗದ ಶಿಫಾರಸಿನ ಪ್ರಕಾರ ಮಾಸಿಕ ಕನಿಷ್ಠ ಮೂಲವೇತನ 18,000 ರೂ., ಗರಿಷ್ಠ ವೇತನ 2.25 ಲಕ್ಷ ರೂ. ನಿಗದಿಪಡಿಸಬೇಕು. ವಾರ್ಷಿಕ ಶೇ. 3ರ ವೇತನ ಹೆಚ್ಚಳ ಮತ್ತು ಪಿಂಚಣಿಯಲ್ಲಿ ಶೇ. 24 ಏರಿಕೆ ಮಾಡಬೇಕು.
 
 
 
ಶೇ. 30ರ ವೇತನ ಹೆಚ್ಚಳಕ್ಕೆ, ಭತ್ಯೆ ಮತ್ತು ಮುಂಗಡವನ್ನು ದ್ವಿಗುಣ ಗೊಳಿಸಲು ಸಮಿತಿ ಶಿಫಾರಸು ಮಾಡಿದೆ ಎನ್ನಲಾಗಿದೆ. ಏಳನೇ ವೇತನ ಆಯೋಗವು ಗರಿಷ್ಠ ಮೂಲವೇತನವನ್ನು 2,50,000 ರೂ. ಮತ್ತು ಕನಿಷ್ಠ ಮೂಲವೇತನವನ್ನು 18,000 ರೂ.ಗೆ ನಿಗದಿಪಡಿಸುವಂತೆ ಶಿಫಾರಸು ಮಾಡಿತ್ತು. ಶೇ. 30 ವೇತನ ಹೆಚ್ಚಳದಿಂದ ಗರಿಷ್ಠ ಮಾಸಿಕ ಸಂಬಳ 3,25,000 ರೂ. ಮತ್ತು ಕನಿಷ್ಠ ಮಾಸಿಕ ವೇತನ 23,400 ರೂ. ಆಗಲಿದೆ.
 
 
 
ಏಳನೇ ವೇತನ ಆಯೋಗದ ಶಿಫಾರಸು 2016ರ ಜನವರಿಯಿಂದಲೇ ಜಾರಿಗೆ ಬರಬೇಕಿತ್ತು. ಆದರೆ, 2016-17ನೇ ಹಣಕಾಸು ವರ್ಷದ ವಿತ್ತೀಯ ಕೊರತೆ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲು ಸರ್ಕಾರ ನಿರ್ಧರಿಸಿತ್ತು.

LEAVE A REPLY

Please enter your comment!
Please enter your name here