ಸರ್ಕಾರಿ ಕಾಲೇಜುಗಳು ಬಲಗೊಳ್ಳಬೇಕು

0
623

 
ಉಡುಪಿ ಪ್ರತಿನಿಧಿ ವರದಿ
ಶ್ರೀಮಂತರಿಗಾಗಿ ದುಬಾರಿ ಬೆಲೆಗೆ ಶಿಕ್ಷಣವನ್ನು ಮಾರಲು ಕುಳಿತ ವ್ಯಾಪಾರಿ ತಾಣಗಳಾಗದೆ, ಬಡವರ ಮಕ್ಕಳ ಕನಸುಗಳಿಗೆ ಜೀವತುಂಬುವ ಮಾನವಸೇವೆಯಲ್ಲಿ ನಿರತವಾಗಿರುವ ಸರ್ಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಿಗೆ ಸರಿದೊರೆಯಾಗಿ ಬೆಳೆಯುವ ಮೂಲಕ ಸಮಾಜದ ಕಟ್ಟಕಡೆಯ ಸಾಮಾನ್ಯನಿಗೂ ತಲೆಯೆತ್ತಿ ನಡೆಯುವ ಸಮಬಾಳಿನ ಬದುಕು ಸಾಧ್ಯವಾಗಬೇಕು. ಹೀಗೆ ಸಾಮಾನ್ಯರ ಮಕ್ಕಳ ಸಾಧನೆಯ ಅಂಗಳಗಳಾಗಿ ಸರ್ಕಾರಿ ಕಾಲೇಜುಗಳನ್ನು ಮತ್ತಷ್ಟು ಬಲಗೊಳಿಸುವುದು ನಮ್ಮ ಸರ್ಕಾರದ ಹೆಬ್ಬಯಕೆಗಳಲ್ಲೊಂದು ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಮೋದ್ ಮಧ್ವರಾಜ್ ಅವರು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಸಮಾರಂಭದ ತಮ್ಮ ಅಧ್ಯಕೀಯ ಭಾಷಣದಲ್ಲಿ ಹೇಳಿದರು.
 
 

ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸುರೇಂದ್ರ ರಾವ್ ಅವರು ಶೈಕ್ಷಣಿಕ ಕೇಂದ್ರಗಳನ್ನು ಪ್ರಶ್ನಾತ್ಮಕ ಮನೋಭಾವದ ಮುಕ್ತಚಿಂತನೆಯ ಬಯಲಾಗದಂತೆ ತಡೆಯುವ ಯಾವ ಪ್ರಯತ್ನವೂ ದೇಶ ಮತ್ತು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಪರಿಣಾಮವನ್ನು ಉಂಟುಮಾಡುವುದಿಲ್ಲ ಎಂದರು.

ಉಡುಪಿ ನಗರಸಭೆಯ ಅಧ್ಯಕ್ಷ ಯುವರಾಜ್ ಪಿ. ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ವಾರ್ಷಿಕ ವರದಿ ವಾಚಿಸಿದರು, ಕಾಲೇಜು ಅಭಿವೃದ್ಧಿ ಸಮಿತಿಯ ಖಜಾಂಚಿ ದಯಾನಂದ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕರುಗಳಾದ ಡಾ. ಜಯಪ್ರಕಾಶ ಶೆಟ್ಟಿ, ಪ್ರೊ. ತಿಮ್ಮಣ್ಣ ಜಿ. ಭಟ್, ಸಾಂಸ್ಕೃತಿಕ ವಿಭಾಗದ ಸಂಚಾಲಕರುಗಳಾದ ಪ್ರೊ. ವಿನೀತಾ ತಂತ್ರಿ, ಪ್ರೊ. ರಾಘವ ನಾಯ್ಕ, ವಿದ್ಯಾರ್ಥಿ ನಾಯಕರುಗಳಾದ ಮಂಜುನಾಥ ಹಾಗೂ ದ್ಯಾಮಣ್ಣ ಮತ್ತಿತರರು ಉಪಸ್ಥಿತರಿದ್ದರು. ಪ್ರೊ. ರಾಧಾಕೃಷ್ಣ ಹಾಗೂ ಡಾ. ದುಗ್ಗಪ್ಪ ಕಜೆಕಾರ್ ನಿರೂಪಿಸಿದರು.

ಈ ಸಂದರ್ಭದಲ್ಲಿ ಬಿ.ಎಸ್ಸಿ. ಮತ್ತು ಬಿ.ಸಿ.ಎ. ವ್ಯಾಸಾಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 18 ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಡಿವೈಸ್ ಬೋಧನಾ ಸಲಕರಣೆಗಳ ಖರೀದಿಗಾಗಿ ಕರ್ನಾಟಕ ಸರಕಾರವು ಮಂಜೂರು ಮಾಡಿದ 3,35,748 ರೂಪಾಯಿ ಮೊತ್ತದ ಚೆಕ್ಕನ್ನು ಶಾಸಕರು ವಿತರಿಸಿದರು ಮತ್ತು ರ್ಯಾಂಕ್ ವಿಜೇತ ಹಾಗೂ ಅತ್ಯುತ್ತಮ ಔಟ್ಗೋಯಿಂಗ್ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.(ಫೋಟೋ ಲಗತ್ತಿಸಿದೆ)

LEAVE A REPLY

Please enter your comment!
Please enter your name here