ಸರ್ಕಾರದ ನಿರ್ಧಾರಕ್ಕೆ ಮಾಜಿ ಪ್ರಧಾನಿ ಟೀಕೆ

0
203

 
ನವದೆಹಲಿ ಪ್ರತಿನಿಧಿ ವರದಿ
ರಾಜ್ಯಸಭೆಯಲ್ಲಿ ನೋಟ್ ಬ್ಯಾನ್ ಚರ್ಚೆ ಶುರುವಾಗಿದೆ. ನೋಟು ಬ್ಯಾನ್ ಚರ್ಚೆಗೆ ಸಭಾಪತಿ ಹಮೀದ್ ಅನ್ಸಾರಿ ಅವಕಾಶ ನೀಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೋಟ್ ಬ್ಯಾನ್ ಸಂಬಂಧ ಚರ್ಚೆ ಆರಂಭಿಸಿದ್ದಾರೆ.
 
ನೋಟುಗಳ ಬ್ಯಾನ್ ನಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಾಗಿದೆ. ಈಗ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಡಾ.ಮನಮೋಹನ್ ನೋಟುಗಳ ಬ್ಯಾನ್ ನಿರ್ಧಾರಕ್ಕೆ ಕಿಡಿಕಾರಿದ್ದಾರೆ.
 
 
 
ನೋಟುಗಳ ಬ್ಯಾನ್ ಉದ್ದೇಶದ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ಆದರೆ ಅದನ್ನು ಜಾರಿಗೆ ತಂದ ರೀತಿ ಬಗ್ಗೆ ನಮ್ಮ ಆಕ್ಷೇಪವಿದೆ. ನೋಟುಗಳ ಬ್ಯಾನ್ ನಿರ್ಧಾರದಿಂದ ಬಹಳ ಅನಾನುಕೂಲವಾಗಿದೆ. ದೇಶದ ಬಡವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನೋಟು ಬದಲಾವಣೆಗೆ 50 ದಿನಗಳ ಕಾಲಾವಕಾಶ ಕಡಿಮೆಯಾಗಿದೆ. ಪರಿಸ್ಥಿತಿ ನಿರ್ವಹಣೆ ಮಾಡದಿದ್ದರಿಂದಲೇ ಜನರಿಗೆ ತೊಂದರೆಯಾಗಿದೆ ಎಂದಿದ್ದಾರೆ.
 
 
 
ಇದೊಂದು ಕಾನೂನು ಬದ್ಧ ಪ್ರಮಾದ, ಸಂಘಟಿತ ಲೂಟಿಯಾಗಿದೆ. ನೋಟು ಬ್ಯಾನ್ ನಿಂದ ಜೆಡಿಪಿ ದರ ಶೇ.2ರಷ್ಟು ಇಳಿಯುತ್ತದೆ. ಸಣ್ಣ ಕೈಗಾರಿಕೆಗಳು, ರೈತರಿಗೆ ತುಂಬಾನೇ ಹೊಡೆತ ಬಿದ್ದಿದೆ ಎಂದು ಡಾ.ಮನಮೋಹನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here