ಸರ್ಕಾರಕ್ಕೆ ರಾಜ್ಯಪಾಲರ ಟಾಂಗ್

0
287

ಬೆಂಗಳೂರು ಪ್ರತಿನಿಧಿ ವರದಿ
ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ರಾಜ್ಯಪಾಲ ಮತ್ತೊಮ್ಮೆ ಟಾಂಗ್ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಟಾಂಗ್ ನೀಡಿದ್ದಾರೆ.
 
 
ಸರ್ಕಾರದ ಮಹತ್ವದ ವಿಧೇಯಕವನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಈ ವಿಧೇಯಕ ಯಾವುದೇ ಚರ್ಚೆಯಾಗದೇ ಅಂಗೀಕಾರವಾಗಿತ್ತು. ಬಿಲ್ ತಿರಸ್ಕಾರದಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
 
 
ರಿಯಲ್ ಎಸ್ಟೇಟ್ ಬಿಲ್ಗ ಗೆ ರಾಜ್ಯಪಾಲರು ಅಂಕಿತ ಹಾಕಲಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕ-2016 ರಿಯಲ್ ಎಸ್ಟೇಟ್ ಉದ್ದಿಮೆ ಪರ ಬಿಲ್ ಎಂಬ ಆರೋಪ ವ್ಯಕ್ತವಾಗಿದೆ.
 
 
ವಿಧೇಯಕ ಅಂಗೀಕರಿಸದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಕೋರಿದ್ದರು. ರಾಜ್ಯಪಾಲರಿಗೆ ಶೆಟ್ಟರ್ ಈ ಬಗ್ಗೆ ಪತ್ರ ಬರೆದಿದ್ದರು. ವಿಧೇಯಕಕ್ಕೆ ರಾಜ್ಯದ ಪರಿಸರ ಪ್ರೇಮಿಗಳಿಂದಲೂ ಆಕ್ಷೇಪ ವ್ಯಕ್ತವಾಗತ್ತು. ಬಿಲ್ ಜಾರಿಯಾದರೆ ಪರಿಸರಕ್ಕೆ ಕೊಡಲಿಯೇಟು ಸಾಧ್ಯತೆಯಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ.
 
 
ತಿದ್ದುಪಡಿಗೂ ಮೊದಲು ವಿಧೇಯಕದಲ್ಲಿ ಪ್ರಮುಖಾಂಶಗಳು ಇದ್ದವು. ಹೊಸ ಲೇಔಟ್ ಗಳಿಗೆ ಶೇ.25ರಷ್ಟು ಸ್ಥಳ ನಿಗದಿಯಾಗಬೇಕು. ಪಾರ್ಕ್, ಆಟದ ಮೈದಾನಗಳಿಗೆ ಶೇ.15ರಷ್ಟು ಸ್ಥಳ ಮೀಸಲು, ನಾಗರಿಕ ಸೌಲಭ್ಯಗಳಿಗೆ ಶೇ.10ರಷ್ಟು ಜಾಗ ಮೀಸಲಿರಬೇಕು. ಆದರೆ ಬಿಲ್ ತಿದ್ದುಪಡಿಯ ಬಳಿಕ ಜಾಗದ ಪ್ರಮಾಣ ಕಡಿತವಾಗಿದೆ.
ನಾಗರಿಕ ಸೌಲಭ್ಯಗಳಿಗೆ ಶೇ. 85ರಷ್ಟು ಭೂಮಿ ಇದ್ದರೆ ಸಾಕು. ಪಾರ್ಕ್, ಆಟದ ಮೈದಾನಗಳಿಗೆ ಶೇ.10ಕ್ಕೆ ಇಳಿಸಿತ್ತು. ಸರ್ಕಾರದ ಮಾನದಂಡದಂತೆ ಶೇ.10ರಷ್ಟು ಜಾಗ ಖೋತಾ ಆಗಿದೆ.

LEAVE A REPLY

Please enter your comment!
Please enter your name here