ಸರಬಾನಂದ ಸೋನೋವಾಲ್ ಅಸ್ಸಾಂನ ಮುಖ್ಯಮಂತ್ರಿ?

0
149

ಪೊಲಿಟಿಕಲ್ ಬ್ಯುರೋ ವಾರ್ತೆ.ಕಾಂ
ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಸರಬಾನಂದ ಸೋನೋವಾಲ್ ಅಸ್ಸಾಂನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸುವುದು ನಿಶ್ಚಿತ.ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತ ಸಾಧಿಸಿದೆ. ಬಿಜೆಪಿ 74 ಹೆಚ್ಚು ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ. ಕೇಸರೀ ಪಾಳಯ ಅಧಿಕಾರದ ಗದ್ದುಗೆಗೇರುವುದಲ್ಲದೆ ಕಾಂಗ್ರೆಸ್ ಹೀನಾಯ ಸೋಲನ್ನನುಭವಿಸುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ಚುನಾವಣಾ ಇಕ್ವೇಷನ್ ಇಲ್ಲಿ ವರ್ಕ್ ಔಟ್ ಆಗಿದ್ದು ನಿಜ. ಚುನಾವಣೆಗೆ ಮುನ್ನ ಸರ್ಬಾನಂದ್ ಅವರನ್ನು ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು.
ದಶಕಗಳಿಂದ ರಾಜಕೀಯದಲ್ಲಿರುವ ಸರ್ಬಾನಂದ್ ಸೋನೋವಾಲ್ ಸದ್ಯ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2001ರಲ್ಲಿ ಶಾಸಕರಾಗಿದ್ದು, 2004ರಲ್ಲಿ ಸಂಸದರಾಗಿ ಚುನಾಯಿತರಾಗಿದ್ದರು. 2012ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here