ಸರಣಿ ಗೆದ್ದ ಭಾರತ

0
275

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಟೆಸ್ಸ್ ಸರಣಿ ಜಯ ಸಿಕ್ಕಿದೆ.ಐದು ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ 3-0 ಯಿಂದ ಮುನ್ನಡೆ ದೊರಕಿದೆ.
 
 
 
ಮುಂಬೈನಲ್ಲಿ ನಡೆದ ಭಾರತ-ಇಂಗ್ಲೆಂಡ್ 4ನೇ ಟೆಸ್ಸ್ ಭಾರತಕ್ಕೆ ಇನ್ನಿಂಗ್ಸ್ ಮತ್ತು 36 ರನ್ ಗಳ ಜಯ ಲಭಿಸಿದೆ. ಇನ್ನೂ ಒಂದು ಟೆಸ್ಟ್ ಇರುವಂತೆಯೇ ಭಾರತ ಸರಣಿ ಗೆದ್ದಿದೆ.
 
 
ಭಾರತದ ಪರ ಆರ್ ಅಶ್ವಿನ್ 6 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 400 ರನ್ ಗೆ ಆಲೌಟ್ ಆಗಿದೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 631 ರನ್ ಗೆ ಆಲೌಟ್ ಆಗಿದೆ. ಇಂಗ್ಲೆಂಡ್ 2ನೇ ಇನ್ನಿಂಗ್ಸ್ ನಲ್ಲಿ 195 ರನ್ ಗಳಿಗೆ ಆಲೌಟ್ ಆಗಿದೆ. ಇದರಿಂದ ಭಾರತ ಇನ್ನಿಂಗ್ಸ್ ಮತ್ತು 36 ರನ್ ಗಳ ಜಯದೊಂದಿಗೆ ಸರಣಿ ಕೈವಶ ಮಾಡಿಕೊಂಡಿದೆ.
 
 
5 ಪಂದ್ಯಗಳ ಟೆಸ್ಸ್ ಸರಣಿಯನ್ನು ಟೀಂ ಇಂಡಿಯಾ ತನ್ನ ಮಡಿಲಿಗೆ ಹಾಕಿಕೊಂಡಿದೆ.

LEAVE A REPLY

Please enter your comment!
Please enter your name here