ಪ್ರಮುಖ ಸುದ್ದಿರಾಜ್ಯವಾರ್ತೆ

ಸರಣಿ ಅಪಘಾತ: ಇಬ್ಬರ ಸಾವು

 
ಕೋಲಾರ ಪ್ರತಿನಿಧಿ ವರದಿ
ಸರಣಿ ಅಪಘಾತದಲ್ಲಿ ಇಬ್ಬರು ದುರ್ಮರಣ ಹೊಂದಿದ್ದ ಘಟನೆ ಕೋಲಾರ ತಾಲೂಕಿನ ಚೆಲುವನಹಳ್ಳಿ ಗೇಟ್ ಬಳಿ ಸಂಭವಿಸಿದೆ.  ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ರಸ್ತೆ ಬದಿ ನಿಲ್ಲಿಸಿದ್ದ ಲಾರಿ, ಕ್ಯಾಂಟರ್ ಗೆ ಕಾರು ಡಿಕ್ಕಿಹೊಡೆದಿದೆ.
 
 
ಕಾರಿನಲ್ಲಿದ್ದ ರಾಜೇಂದ್ರ(38), ರಾಜೇಶ್ ಶೆಟ್ಟಿ(49) ಮೃತ ದುರ್ದೈವಿಗಳಾಗಿದ್ದಾರೆ. ಮಂದಾರ್ ಪ್ರಕಾಶ್, ಶುಭಾಶ್ ಚಂದೆ, ಅಜಯ್ ಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಿರುಪತಿಯಿಂದ ಬೆಂಗಳೂರಿಗೆ ಕಾರು ಅಪಘಾತವಾಗಿದೆ.
 
 
ಮೃತ ದುರ್ದೈವಿಗಳು ಮಹಾರಾಷ್ಟ್ರದ ಪುಣೆ ಮೂಲದವರಾಗಿದ್ದಾರೆ. ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here