ಉದ್ಯೋಗಪ್ರಮುಖ ಸುದ್ದಿವಾರ್ತೆ

ಸರಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿ : ಸಂದರ್ಶನ

ಮ0ಗಳೂರು ಉದ್ಯೋಗ ವಾರ್ತೆ
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಅಧೀನದಲ್ಲಿ ಬರುವ ತಾಲೂಕು ಮಟ್ಟದ ಆಸ್ಪತ್ರೆಗಳು/ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ತಜ್ಞರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
 
ವೈದ್ಯರನ್ನು ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಅಥವಾ ಖಾಯಂ ವೈದ್ಯರು ನೇಮಕಾತಿಗೊಳ್ಳುವ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಜನವರಿ 9 ರಂದು ಅಪರಾಹ್ನ 2-30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಅಧಿಕಾರಿ ಕಚೇರಿ ಮಂಗಳೂರು ಇಲ್ಲಿ ನೇರ ಸಂದರ್ಶನ ನಡೆಯಲಿದೆ. ಪ್ರಥಮ ಆದ್ಯತೆ ತಜ್ಞ ವೈದ್ಯರುಗಳಿಗೆ ,ದ್ವಿತೀಯ ಆದ್ಯತೆ ತಜ್ಞ ವೈದ್ಯರು ಲಭ್ಯವಿಲ್ಲದಿದ್ದಲ್ಲಿ ಖಾಲಿ ಇರುವ ತಜ್ಞರ ಹುದ್ದೆಗಳಿಗೆ ಎಂಬಿಬಿಎಸ್ ವೈದ್ಯರನ್ನು ನೇಮಿಸಲಾಗುವುದು.
 
 
 
ಖಾಲಿ ಹುದ್ದೆಗಳ ಸಂಖ್ಯೆ/ವಿವರ : ತಾಲೂಕು ಆಸ್ಪತ್ರೆ ಬಂಟ್ವಾಳ-ಅರವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರು , ತಾಲೂಕು ಆಸ್ಪತ್ರೆ ಬೆಳ್ತಂಗಡಿ- ಅರವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರು , ತಾಲೂಕು ಆಸ್ಪತ್ರೆ ಪುತ್ತೂರು – ರೇಡಿಯಾಲಜಿಸ್ಟ್ ಮತ್ತು ಫಿಜಿಷಿಯನ್, ತಾಲೂಕು ಆಸ್ಪತ್ರೆ ಸುಳ್ಯ – ಎಲುಬು ಮತ್ತು ಕೀಲು ತಜ್ಞರು ಮತ್ತು ಕಣ್ಣಿನ ತಜ್ಞರು, ಪ್ರಾಥಮಿಕ ಆರೋಗ್ಯ ಕೇಂದ್ರ ವಾಮದಪದವು- ಹಿರಿಯ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಉಪ್ಪಿನಂಗಡಿ- ಹಿರಿಯ ವೈದ್ಯಾಧಿಕಾರಿ.
 
 
ವೇತನ : ಎಂಬಿಬಿಎಸ್. ರೂ.40,000. ಸರಕಾರದ ನಿಯಮಾವಳಿಯಂತೆ. ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ತಜ್ಞತೆ/ಎಂಬಿಬಿಎಸ್ ಎಲ್ಲಾ ವರ್ಷದ ಅಂಕಪಟ್ಟಿಗಳು, ಪದವಿ ಪ್ರಮಾಣ ಪತ್ರ, ಕೆಎಂಸಿ ರಿಜಿಸ್ಟ್ರೇಶನ್, ಂಣಣemಠಿಣ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರಗಳನ್ನು ಮತ್ತು ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು.
ಅಭ್ಯರ್ಥಿಗಳು ಸಾ.ವರ್ಗ- 35 ವರ್ಷ, ಇತರ ಹಿಂದುಳಿದ ವರ್ಗಗಳಿಗೆ 38 ವರ್ಷ, ಪ.ಜಾ./ಪ.ಪಂ ಅಭ್ಯರ್ಥಿಗಳು 40 ವರ್ಷ ಮೀರಿರಬಾರದು. ಈ ನೇಮಕಾತಿಯನ್ನು ರೋಸ್ಟರ್ ಮತ್ತು ಮೆರಿಟ್ ನಿಯಮಗಳನ್ನು ಅನುಸರಿಸಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 0824/2423672 ಸಂಪರ್ಕಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here