ಸರಕಾರಕ್ಕೆ ಜನತೆಯ ಸ್ವಾಸ್ತ್ಯ ಬೇಡವಾಯ್ತೇ…?

0
799

ರಾಜ್ಯ ಸರ್ಕಾರಕ್ಕೆ ಜನರ ಸ್ವಾಸ್ತ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲವೇ? ತಮ್ಮ ಅಧಿಕಾರದ ಆಸೆಗೆ ಕುರ್ಚಿಗಾಗಿ ಈ ರೀತಿಯ ಆಟ ಆಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಅಧಿಕಾರ ತಮ್ಮ ಮಂತ್ರಿ ಪಟ್ಟ ಉಳಿಸಿಕೊಳ್ಳುವದಷ್ಟೇ ಈಗಿನ ರಾಜ್ಯ ಸರ್ಕಾರಕ್ಕೆ ಬೇಕಾಗುವಂತಾಗಿದೆಯೇ? ಮೈತ್ರಿ ಸರಕಾರ ಅದರ ಪಾಲುದಾರರೆಲ್ಲರೂ ಕೇವಲ ಅಧಿಕಾರದ ಆಸೆಗೆ ಕಸರತ್ತು ಮಾಡುತ್ತಿದೆಯೇ ಹೊರತಾಗಿ ಜನತೆಯ ಬಗೆಗೆ ಕಿಂಚಿತ್ತೂ ಕಾಳಜಿ ತೋರಿಸುತ್ತಿಲ್ಲ. ನಾಚಿಗೆಯಾಗಬೇಕು.
ಮುಖ್ಯಮಂತ್ರಿಗೆ ನಿಜವಾದ ರಾಜ್ಯದ ಬಗೆಗಿನ ಕಾಳಜಿ ಇದ್ದರೆ ಸರಕಾರ ನಡೆಸುವ , ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ನೈಜ ಕಾಳಜಿಯಿದ್ದದ್ದೇ ಆದಲ್ಲಿ ಇಂತಹ ಆಟಾಟೋಪಗಳನ್ನು ತಕ್ಷಣ ನಿಲ್ಲಿಸಬೇಕು. ವಿಶ್ವಾಸ ಮತ ಯಾಚನೆ ಮಾಡಿ ಮೈತ್ರಿ ಗಟ್ಟಿಯಾಗಿದೆ ಎಂಬುದನ್ನು ಸಾಬೀತು ಪಡಿಸಲಿ. ವೃಥಾ ಕಾಲ ಹರಣ ಮಾಡದೆ, ರಾಜ್ಯದ ಜನತೆಯ ಸಮಸ್ಯೆಯನ್ನು ಆಲಿಸುವಂತಹ ಕಾರ್ಯ ಮಾಡುವಂತಾಗಲಿ. ಜನತೆ ನಿಮ್ಮನ್ನು ಆರಿಸಿ ಕಳುಹಿಸಿದ್ದು ಜನತೆಯ ಸಮಸ್ಯೆಗೆ ಸ್ಪಂದಿಸುವ, ಉತ್ತಮ ಆಡಳಿತ ನೀಡುವ ವ್ಯವಸ್ಥೆ ಆಗಬೇಕೆಂಬುದೇ ಹೊರತು ರೆಸಾರ್ಟ್‌ ಗಳಲ್ಲಿ ಕುಳಿತು ಜನತೆಯ ಕೈಗೂ ಸಿಗದೆ ನಿಮ್ಮ ದಾಹ ತೀರಿಸಿಕೊಳ್ಳುವುದಕ್ಕೆ ಅಲ್ಲ ಎಂಬುದನ್ನು ಪ್ರತಿಯೊಂದು ಪಕ್ಷ, ಜನಪ್ರತಿನಿಧಿಗಳು ಅರಿಯಬೇಕಾಗಿದೆ.
ಮಾನ್ಯ ಮುಖ್ಯಮಂತ್ರಿಗಳೇ, ಸಮ್ಮಿಶ್ರ ಸರ್ಕಾರದ ಅಷ್ಟೂ ಜನಪ್ರತಿನಿಧಿಗಳೇ ಹಾಗೂ ವಿಪಕ್ಷದ ಸರ್ವ ಸದಸ್ಯರೇ ನಿಮಗೆ ಜನತೆಯ ಬಗೆಗೆ ನೈಜ ಕಾಳಜಿಯಿದ್ದರೆ, ತಮ್ಮ ತಮ್ಮ ಕ್ಷೇತ್ರಗಳತ್ತ ಗಮನ ಹರಿಸಿ. ಅಧಿಕಾರ, ಕುರ್ಚಿಯೇ ಅಭಿವೃದ್ಧಿಗೆ ಮುಖ್ಯವಲ್ಲ ಎಂಬುದನ್ನು ಅರಿತುಕೊಳ್ಳಿ.

LEAVE A REPLY

Please enter your comment!
Please enter your name here