ಸಮೀಕ್ಷೆಯಲ್ಲಿ ದಲಿತರು ಮೇಲುಗೈ

0
337

ಬೆಂಗಳೂರು ಪ್ರತಿನಿಧಿ ವರದಿ
2015ನೇ ಸಾಲಿನ ಹಿಂದುಳಿದ ವರ್ಗಗಳ ಆಯೋಗದ ಮೂಲಕ ರಾಜ್ಯ ಸರ್ಕಾರ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಕಾರ ದಲಿತ ಸಮುದಾಯದವರು ನಂ.1 ಸ್ಥಾನದಲ್ಲಿದ್ದಾರೆ.
 
ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಲಿಂಗಾಯತ, ಒಕ್ಕಲಿಗ ಮತ್ತು ಕುರುಬ ಸಮುದಾಯದವರು ಇದ್ದಾರೆ. ಆದರೆ ಈ ವರದಿಯನ್ನು ಸರ್ಕಾರ ತಳ್ಳಿ ಹಾಕಿದ್ದು, ಇನ್ನೂ ಸಮೀಕ್ಷೆ ಕಾರ್ಯ ಮುಗಿದಿಲ್ಲ ಎಂದಿದೆ.
 
ಮಾಹಿತಿ ಪ್ರಕಾರ ಸುಮಾರು 180 ಉಪಜಾತಿಗಳನ್ನು ಒಳಗೊಂಡ ಪರಿಶಿಷ್ಟ ಜಾತಿ ಜನಸಂಖ‍್ಯೆ 1.08 ಕೋಟಿ, 42ಕ್ಕೂ ಹೆಚ್ಚು ಉಪಜಾತಿಗಳನ್ನು ಹೊಂದಿದ ಲಿಂಗಾಯತರ ಸಂಖ್ಯ 59 ಲ್ಷ, 10ಕ್ಕೂ ಹೆಚ್ಚು ಉಪಜಾತಿಗಳನ್ನು ಒಳಗೊಂಡ ಒಕ್ಕಲಿಗರ ಸಂಖ್ಯೆ 49 ಲಕ್ಷ, ಕುರುಬರು 43.50 ಲಕ್ಷ, 105 ಉಪಜಾತಿಗಳನ್ನು ಒಳಗೊಂಡ ಪರಿಶಿಷ್ಟ ಪಂಗಡದವರು 42 ಲಕ್ಷ, ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ನಾಯಕ ಸಮುದಾಯದವರು 33 ಲಕ್ಷ, ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದವರು 33 ಲಕ್ಷ, ಬ್ರಾಹ್ಮಣರು 13ಲಕ್ಷ, ಈಡಿಗ ಸಮುದಾಯದವರು 14 ಲಕ್ಷ, ಬೇಡ, ಜಂಗಮರು 3 ಲಕ್ಷದಷ್ಟಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here