ಸಮಿತಿ ಸಭೆ

0
302

 
ಬೆಂಗಳೂರು/ಉಜಿರೆ ಪ್ರತಿನಿಧಿ ವರದಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟಿನ ಸಲಹಾ ಸಮಿತಿ ಸದಸ್ಯರ ಸಭೆಯು, ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ನಡೆಯಿತು.
 
ಸಭೆಯಲ್ಲಿ ಧರ್ಮೊತ್ಥಾನ ಟ್ರಸ್ಟಿನ ಕಾರ್ಯಕ್ಷೇತ್ರದ ವಿವರಗಳನ್ನು ಅವಲೋಕಿಸಿ, ಜೀರ್ಣೊದ್ಧಾರಗೊಂಡಿರುವ ಸ್ಮಾರಕಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಗಳು ಹಾಗೂ ಕಟ್ಟಡ ನಿರ್ವಹಣೆಯ ನಿಟ್ಟಿನಲ್ಲಿ ಸ್ಥಳೀಯರನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವ ಬಗ್ಗೆ ಸದಸ್ಯರಿಂದ ಸಲಹೆಗಳನ್ನು ಪಡೆಯಲಾಯಿತು.
 
ಸಭೆಯ ಚರ್ಚೆಯಲ್ಲಿ ಈ ಕೆಳಗಿನ ಸದಸ್ಯರು ಭಾಗವಹಿಸಿದರು:
ಡಾ. ಸಿ.ಎಸ್.ಕೇದಾರ್, ಭಾ.ಆ.ಸೇ, ನಿವೃತ್ತ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಕರ್ನಾಟಕ ಸರ್ಕಾರ, ಡಾ. ಚೂಡಾಮಣಿ ನಂದಗೋಪಾಲ್, ಇತಿಹಾಸ ತಜ್ಞರು, ಡಾ. ಜಿ. ಅಶ್ವತನಾರಾಯಣ, ನಿವೃತ್ತ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ, ಕರ್ನಾಟಕ ಸರ್ಕಾರ, ಡಾ. ನಾಡೋಜ ಹಂ.ಪ. ನಾಗರಾಜಯ್ಯ, ಸಾಹಿತಿಗಳು ಹಾಗೂ ಜಿನಧರ್ಮವಿದ್ವನ್ಮಣಿಗಳು, ವಿಶ್ವೇಶ್ವರಭಟ್, ಪ್ರಧಾನ ಸಂಪಾದಕರು, ಸುವರ್ಣ ವಾಹಿನಿ, ಡಾ. ಎ.ಎಸ್.ಹಲಕಟ್ಟಿ, ನಿವೃತ್ತ ನಿರ್ದೇಶಕರು, ಭಾರತೀಯ ಪುರಾತತ್ವ ಸರ್ವೆಕ್ಷಣಾಲಯ, ಭಾರತ ಸರ್ಕಾರ, ಡಾ. ಎನ್.ಎಸ್.ರಂಗರಾಜು, ನಿವೃತ್ತ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ, ಡಾ. ಶತಾವದಾನಿ ಆರ್.ಗಣೇಶ್, ಅವಧಾನ ಕಲಾಪ್ರವೀಣರು ಹಾಗೂ ಬಹುಭಾಷಾಪಂಡಿತರು ನಿರ್ದೇಶಕರಾದ ಹರಿರಾಮ ಶೆಟ್ಟಿಯವರಿಂದ ಸ್ವಾಗತ ಹಾಗೂ ಕಾರ್ಯದರ್ಶಿ ಎ.ವಿ.ಶೆಟ್ಟಿಯವರಿಂದ ಟ್ರಸ್ಟಿನ ಪ್ರಗತಿಯ ವಿವರಗಳನ್ನು ಸಭೆಯ ಮುಂದಿಡಲಾಯಿತು.

LEAVE A REPLY

Please enter your comment!
Please enter your name here