ಸಮಾವೇಶ

0
288

ನಮ್ಮ ಪ್ರತಿನಿಧಿ ವರದಿ
ಕನ್ನಡ ಸಾಹಿತ್ಯ ಪರಿಷತ್ತು ತಮಿಳುನಾಡು ಘಟಕವು ಚೆನ್ನೈನಲ್ಲಿ ಮಾ.4 ಹಾಗೂ 05 ಮಾರ್ಚ್ 2017 ರಂದು ಎರಡು ದಿನಗಳ ಕಾಲ ಆಯೋಜಿಸಿದ್ದ ತಮಿಳುನಾಡು ಕನ್ನಡಿಗರ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಸಾಂಸ್ಕೃತಿಕ ಸಮಾವೇಶವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಉದ್ಘಾಟಿಸಿದರು.
 
 
 
ಹಿರಿಯ ಸಾಹಿತಿಗಳಾದ ಪ್ರೊ. ದೊಡ್ಡರಂಗೇಗೌಡರು ಸಮ್ಮೇಳನ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ತಮಿಳಿನ ಪ್ರಸಿದ್ಧ ಕವಿ ಡಾ. ಪದ್ಮಶ್ರೀ ವೈರಮುತ್ತು, ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಧ್ಯಾಪಕರಾದ ಡಾ. ಶಿವಕುಮಾರ ಚಲ್ಯ, ತಮಿಳುನಾಡು ಗಡಿನಾಡ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ತಮಿಳ್‍ ಸೆಲ್ವಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಾಯಣ್ಣ ಅವರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
 
 
 
ತಮಿಳುನಾಡಿನ ಕನ್ನಡಿಗರು, ಸಾಹಿತ್ಯಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಎರಡೂ ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here