ಸಮಾಲೋಚನೆ-ವಿವಿಧ ಸಮಿತಿಗಳ ರಚನಾ ಸಭೆ

0
129

 
ವರದಿ-ಚಿತ್ರ: ಶ್ಯಾಮ್ ಪ್ರಸಾದ್, ಬದಿಯಡ್ಕ
ತುಳು ಭಾಷೆ,ಸಂಸ್ಕೃತಿ ಉಳಿಯಬೇಕಾದರೆ ನಿರಂತರ ಜಾಗೃತಿಯ ಯೋಜನಾಬದ್ದ ಚಟುವಟಿಕೆಗಳ ಅಗತ್ಯವಿದೆ. ವಿಶ್ವದಾತ್ಯಂತ ವ್ಯಾಪಿಸಿರುವ ತುಳುವರನ್ನು ಒಗ್ಗೂಡಿಸಿ ಆಯನೊಗಳನ್ನು ಸಂಘಟಿಸುವುದರಿಂದ ಯುವ ಸಮೂಹ ಸಹಿತ ಒಟ್ಟು ಸಮಾಜಕ್ಕೆ ತುಳು ಭಾಷೆಯ ಬಗ್ಗೆ ಅಭಿಮಾನ ಮೂಡಿ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆಯೆಂದು ಒಡಿಯೂರು ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಹಾರೈಸಿದರು.
 
badiyadka_sabhe1
 
ಬದಿಯಡ್ಕದ ತುಳು ಆಯನೊ ಕೂಟದ ನೇತೃತ್ವದಲ್ಲಿ ಡಿ.9 ರಿಂದ 13ರ ವರೆಗೆ ಬದಿಯಡ್ಕದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿರುವ ವಿಶ್ವ ತುಳುವೆರೆ ಆಯನೊದ ಪೂರ್ವಭಾವಿಯಗಿ ಭಾನುವಾರ ಅಪರಾಹ್ನ ಬದಿಯಡ್ಕದ ಗುರುಸದನದಲ್ಲಿ ನಡೆದ ಸಮಾಲೋಚನೆ-ವಿವಿಧ ಸಮಿತಿಗಳ ರಚನಾ ಸಭೆಯಲ್ಲಿ ಅವರು ದಿವ್ಯ ಉಪಸ್ಥಿತರಿದ್ದು,ಮಾರ್ಗದರ್ಶನ ನೀಡಿ ಮಾತನಾಡುತ್ತಿದ್ದರು.
 
 
ವಿವಿಧ ಭಾಷೆಗಳನ್ನಾಡುತ್ತಿರುವ ಹರಿದು ಹಂಚಾಗಿರುವ ತುಳು ನಾಡಿನ ಎಲ್ಲಾ ವರ್ಗಗಳೂ ಮೂಲತಃ ತುಳುವರಾಗಿದ್ದು, ಸಾಂಸ್ಕೃತಿಕ ಏಕತೆ ಪ್ರಾಚೀನ ಶ್ರೀಮಂತಿಕೆಯ ಸಂಕೇತವಾಗಿದೆ. ಇಂದಿನ ವ್ಯವಸ್ಥೆಗೆ ಒಗ್ಗಿಕೊಂಡು ಕಾಲಮಾನಕ್ಕನುಸಿರಿಸಿ ವಿಶ್ವದ ನಾನಾಕಡೆ ವಾಸಿಸುವ ಕರಾವಳಿಯ ಜನರು ತಮ್ಮ ಮಾತೃಭಾಷೆಯ ಸಂಕೇತವಾಗಿ ತುಳುವನ್ನು ಇಷ್ಟಪಡುತ್ತಿರುವುದು ವಿವಿಧತೆಯಲ್ಲೂ ಏಕತೆಯ ಸೂಚಿಸುವ ದೃಷ್ಟಾಂತವೆಂದು ತಿಳಿಸಿದ ಅವರು ವಿಶ್ವ ತುಳುವೆರೆ ಆಯನೊ ಭಾಷೆಗೆ ಸರಕಾರದ ಸರ್ವ ಮಾನ್ಯತೆ ದೊರಕಿಸುವಲ್ಲಿ ಯಶಸ್ವಿಯಾಗಿ ಮೂಡಿಬರಲೆಂದು ತಿಳಿಸಿದರು.
 
 
 
ಮಾಯಿಪ್ಪಾಡಿ ಜಯಚಂದ್ರವರ್ಮ ರಾಜ,ಕನ್ಯಾನ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶಶಿಕಾಂತಮಣಿ ಸ್ವಾಮೀಜಿ,ಕಾಣಿಯೂರು ಮಠದ ಮಹಾಬಲ ಸ್ವಾಮೀಜಿ,ಬೇಳ ಶೋಕಮಾತಾ ಇಗರ್ಜಿಯ ಧರ್ಮಗುರು, ಕಾಸರಗೋಡು ವಲಯ ಧರ್ಮಾಧ್ಯಕ್ಷ ಫಾ.ವಿನ್ಸೆಂಟ್ ಡಿಸೋಜಾ, ಧರ್ಮದರ್ಶಿ ಗಣೇಶ ಉಳ್ಳೋಡಿ ಉಪಸ್ಥಿತರಿದ್ದು ಮಾತನಾಡಿದರು.
 
 
 
ವಿಶ್ವ ತುಳುವೆರೆ ಆಯನೊ ಸಮಿತಿಯ ಗೌರವಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಸದಸ್ಯ ಅಡ್ವ.ಕೆ.ಶ್ರೀಕಾಂತ್, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಕರ್ನಾಟಕ ತುಳು ಅಕಾಡೆಮಿಯ ರಿಜಿಸ್ಟಾರ್ ಚಂದ್ರಹಾಸ ರೈ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ,ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಎ.ಸಿ.ಭಂಡಾರಿ, ವಿಜಯಲಕ್ಷ್ಮೀ ಶೆಟ್ಟಿ, ಕರ್ನಾಟಕ ಬ್ಯಾರಿ ಅಕಾಡೆಮಿಯ ಆಯಿಷಾ ಎ.ಎ.,ಸಾಹಿತಿ ಮೊಹಮ್ಮದ್ ಬಡ್ಡೂರ್, ಯುಎಇ ನಮ್ಮ ತುಳು ಸಂಸ್ಥೆಯ ಸುಧಾಕರ ಆಳ್ವ,ಸತೀಶ ಪಣಿಕ್ಕರ್,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಡಿಎಂಕೆ ಕುಲಾಲ್, ಕರ್ನಾಟಕ ವಕ್ಪ್ ಮಂಡಳಿಯ ಮಾಜಿ ಸದಸ್ಯ ಡಾ.ಮುನೀರ್ ಬಾವಾ ಹಾಜಿ, ಕಾಂತಿ ಶೆಟ್ಟಿ ಬೆಂಗಳೂರು, ಕೇರಳ ಜಾನಪದ ಅಕಾಡೆಮಿಯ ಡಾ.ಜಯರಾಜ್ ಮಾಸ್ಟರ್, ಅಝೀಂ ಮಣಿಮುಂಡ, ಮೂಲ್ಕಿ ಕರುಣಾಕರ ಶೆಟ್ಟಿ,ಸರಪಾಡಿ ಅಶೋಕ ಶೆಟ್ಟಿ, ಶ್ರೀನಿವಾಸ್ ಮಂಕುಡೆ, ಡಾ.ನವೀನ್ ಕುಮಾರ್ ಮರಿಕೆ, ಅಡೂರು ಉಮೇಶ್ ನಾಯಕ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ, ಒಡಿಯೂರು ಕ್ಷೇತ್ರ ಗ್ರಾಮ ವಿಕಾಸ ಟ್ರಸ್ಟ್ ನ ತಾರಾನಾಥ ಕೊಟ್ಟಾರಿ, ತುಳುನಾಡ ರಕ್ಷಣಾವೇದಿಕೆಯ ಯೋಗೀಶ್ ಶೆಟ್ಟಿ ಜಪ್ಪು, ಕುಡ್ಲ ಪತ್ರಿಕೆಯ ಎಸ್ ಆರ್ ಬಂಡಿಮಾರ್, ಶಂಕರ ರೈ ಮಾಸ್ಟರ್ ಪುತ್ತಿಗೆ, ಪತ್ರಕರ್ತ ಮಲಾರು ಜಯರಾಮ ರೈ, ರಾಮಪ್ಪ ಮಂಜೇಶ್ವರ, ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್, ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ, ಹರೀಶ್ ನಾರಂಪಾಡಿ ಮೊದಲಾದವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
 
 
ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಧರ್ಮಪಾಲ್ ಯು.ದೇವಾಡಿಗ ಮುಂಬೈ, ಅಧ್ಯಕ್ಷರಾಗಿ ಸರ್ವೋತ್ತಮ ಶೆಟ್ಟಿ ದುಬೈ,ಪ್ರಧಾನ ಕಾರ್ಯದರ್ಶಿಯಾಗಿ ಡಾ.ರಾಜೇಶ್ ಆಳ್ವ ಬದಿಯಡ್ಕ, ಖಜಾಂಜಿಯಾಗಿ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ರನ್ನು ಆರಿಸಲಾಯಿತು.
ಬದಿಯಡ್ಕದ ಸಹಕಾರಿ ಕಾಲೇಜು ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ತುಳುವೆರೆ ಆಯನೊ ಸಮಿತಿ ಸಂಚಾಲಕ ಡಾ.ರಾಜೇಶ್ ಆಳ್ವ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಸ್ವರೂಪದ ಬಗ್ಗೆ ಮಾಹಿತಿ ನೀಡಿದರು.ಯನೊ ಸಮಿತಿ ಅಧ್ಯಕ್ಷ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಸ್ವಾಗತಿಸಿ, ಶ್ರೀನಿವಾಸ ಆಳ್ವ ಕಳತ್ತೂರು ವಂದಿಸಿದರು. ಹರ್ಷ ರೈ ಪುತ್ರಕಳ, ನಿರಂಜನ ರೈ ಪೆರಡಾಲ, ಗೋಪಾಲಕೃಷ್ಣ ವಾಂತಿಚ್ಚಾಲು ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.

LEAVE A REPLY

Please enter your comment!
Please enter your name here