ಸಮಾಲೋಚನಾ ಸಭೆ

0
396

ನಮ್ಮ ಪ್ರತಿನಿಧಿ ವರದಿ
ಸರಕಾರಿ ಪ್ರಾಥಮಿಕ ಶಾಲೆಗಳನ್ನು ಕಡೆಗಣಿಸಿ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನವು ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯುವ ಹಕ್ಕಿನ ಉಲ್ಲಂಘನೆಯಾಗಿ ನಡೆಯುತ್ತಿರುವುದು ಹಾಗು ಈ ಕಾಯಿದೆಯ ಹೆಸರಿನಲ್ಲಿ ಖಾಸಗಿ ಶಾಲೆಗಳ ಬಲವರ್ಧನೆಯ ಧೋರಣೆಗಳನ್ನು ಖಂಡಿಸುವ ಸಲುವಾಗಿ ಇತ್ತೀಚೆಗೆ ಸರಕಾರಿ ಶಾಲೆಗಳನ್ನು ಬಲವರ್ಧನೆ ಗೊಳಿಸುವಲ್ಲಿ ಸರಕಾರವನ್ನು ಒತ್ತಾಯಿಸುವ ಸಲುವಾಗಿ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ,ದ.ಕ (ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ದ.ಕ ಜಿಲ್ಲಾ ಘಟಕ) ಹಾಗು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ (ರಿ) ದ.ಕ)ಮತ್ತು ಶ್ಯೆಕ್ಷಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನಾ ಸಭೆಯು ಪಡಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
 
 
 
ಈ ಸಭೆಯಲ್ಲಿ ಶಿಕ್ಷಣ ಹಕ್ಕು ಕಾಯಿದೆಯ 12 (1)(ಸಿ) ಪ್ರಕಾರ 25% ಮೀಸಲಾತಿಯಡಿಯಲ್ಲಿ ಮಕ್ಕಳನ್ನು ನೋಂದಾಯಿಸಿದ ಖಾಸಗಿ ಶಾ ಲೆಗಳಿಗೆ ರಾಜ್ಯ ಸರಜಕಾರ 500 ಕೋಟಿಗಿಂತಲೂ ಹೆಚ್ಚು ಅನುದಾನವನ್ನು ನಿಗದಿ ಪಡಿಸಿರುವ ಬಗ್ಗೆ , ಕಾಯಿದೆ ಪ್ರಕಾರ 6 ರಿಮದ 8 ನೆ ತರಗತಿಗಳಿಗೆ ವಿಷಯವಾರು ಶಿಕ್ಷಕರನ್ನು ನೀಡದೆ ಕಾಯಿದೆಯ ಅಧ್ಯಾಯ 5 ರ ಸೆಕ್ಷನ್ 29 ನ್ನು ತೀರಾ ನಿರ್ಲಕ್ಷಿಸಿದ ಬಗ್ಗೆ , ಖಾಸಗಿ ಶಾಲೆಗಳಲ್ಲಿ ತರಭೇತಿ ಹೊಂದದ ಶಿಕ್ಷಕರ ಸೇವೆಯನ್ನು ಶಿಕ್ಷಕ ಶಿಕ್ಷಣ ತರಭೇತಿಯನ್ನು ಪಡೆಯಲು ಸಮಯಾವಕಾಶ ಇನ್ನೂ 2 ವರ್ಷಗಳ ಕಾಲ ಮುಂದುವರಿಸಿರುವ ಸರಕಾರದ ನಿರ್ಧಾರವನ್ನು ವಿರೋಧಿಸಿ ಮತ್ತು ಶಾಲಾ ಆಡಳಿತ ಮಂಡಳಿಗೆ ಕ್ಲಪ್ತ ಸಮಯದಲ್ಲಿ ಯವುದೇ ತರಬೇತಿಗಳನ್ನು ನೀಡದೆ ಸಮುದಾಯದ ಸಮರ್ಪಕ ಬಳಕೆಯನ್ನು ಶಾಲಾಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಲು ಅಡೆತಡೆತಯಾಗಿರುವ ಬಗ್ಗೆ ಹಾಗು ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪ್ರತಿ ವರ್ಷ 50,000 ದಿಂದ 1 ಲಕ್ಷದವರೆಗೆ ಶಾಲಾನುದನವನ್ನು ಹೆಚ್ಚಿಸಿ ಸರಕಾರಿ ಶಾಲೆಗಳನ್ನು ಮಗುಸ್ನೇಹಿಯಾಗಿ ಪರಿವರ್ತಿಸುವ ಕುರಿತು, ಹಲವಾರು ವಿಚಾರಗಳಲ್ಲಿ ಚರ್ಚೆಗಳು ನಡೆಯಿತು.
 
 
 
ಈ ಮೇಲಿನ ಎಲ್ಲಾ ತಾರತಮ್ಯಗಳನ್ನು ನಿವಾರಿಸಿ ಎಲ್ಲಾ ಶಾಲೆಗಳಲ್ಲಿ ಮಕ್ಕಳು ಸಮಾನ ಶಾಲಾ ಶಿಕ್ಷಣವನ್ನು ಪಡೆಯುವಲ್ಲಿ ಸರಕಾರವು ಅತಿ ತುರ್ತಾಗಿ .ಪ್ರತಿ ಶಾಲೆಗಳಿಗೂ ತರಗತಿಗೊಂದು ಶಿಕ್ಷಕರನ್ನು ನೇಮಕ ಮಾಡುವುದು. ಹಾಗೂ 6 ರಿಂದ 8 ನೆ ತರಗತಿ ವರೆಗೆ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಆರ್.ಟಿ.ಇ ಕಾಯಿದೆ ಪ್ರಕಾರ ವಿಷಯವಾದು ಶಿಕ್ಷಕರ ನೆಮಕ ಮಾಡುವಲ್ಲಿ ಸರಕಾರವನ್ನು ದ.ಕ ಜಿಲ್ಲೆಯ ಸುಮಾರು 900 ಕ್ಕೂ ಹೆಚ್ಚು ಇರುವ ಸರಕಾರಿ ಶಾಲೆಗಳ ಮಕ್ಕಳ ಹೆತ್ತವರ ಪರವಾಗಿ , ಹಾಗು ಮಕ್ಕಳ ಪರವಾಗಿ ಈ ಶಾಲೆಗಳ ಎಸ್.ಡಿ.ಎಂ.ಸಿ ಸದಸ್ಯರುಗಳ ಪರವಾಗಿ ಸರಕಾರವನ್ನು ಒತ್ತಯಿಸುವುದಾಗಿ ತೀರ್ಮಾನಿಸಲಯಿತು. ಅದಕ್ಕಾಗಿ ದ.ಕ ಹಾಗು ಉಡುಪಿ ಜಿಲ್ಲೆಯಾದ್ಯಂತ ಗ್ರಾಮ ಮಟ್ಟದಿಂದ ಹಿಡಿದು ಜಿಲ್ಲೆಯ ವಿವಿಧ ವಿಧಾನ ಸಭಾ ಹಾಗು ಲೋಕ ಸದಸ್ಯರುಗಲೊಂದಿಗೆ ಹಾಗು ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ಭೇಟಿ ಮಾಡಿ ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಯಿಸುವಂತೆ ನಿರ್ಧರಿಸಿ ದಿನಾಂಕ 29.4.2017 ರಂದು ಈ ಆಂದೋಲನಕ್ಕೆ ಚಾಲನೆ ನೀಡಿ ಜಿಲ್ಲೆಯ ಗ್ರಾಮ ಪಂಚಾಯತ್ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಮೂಲಕ ಗ್ರಾಮ ಮಟ್ಟದಿಂದಲೇ ಆಂದೋಲನ ಕ್ಯೆಗೊಂಡು 15.3.2017 ರಂದು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಭೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸುವಂತೆ ಮನವಿ ಮಾಡುವುದಾಗಿ ತೀರ್ಮಾನಿಸಲಾಯಿತು. ಈ ಬೇಡಿಕೆಗಳನ್ನು ಸರಕಾರವು ಪೂರ್ರೆಸದೆ ಇದ್ದಲ್ಲಿ ಬೇಡಿಕೆ ಈಡೇರಿಸುವ ತನಕನ ರಾಜ್ಯ ಮಟ್ಟದ ಸಮನ್ವಯ ವೇದಿಕೆಯ ಸಹಯೋಗದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಮುಂದುವರಿಸುವುದಾಗಿ ಸಭೆಯಲ್ಲಿ ನಿರ್ಣಯ ಕ್ಯೆಗೊಳ್ಳಲಾಯಿತು.
 
 
 
ಹಾಗು ಈ ಪ್ರಕ್ರಿಯೆಯನ್ನು ಗ್ರಾಮ ಮಟ್ಟದಿಂದಲೆ ಬಲಿಷ್ಟಗೊಳಿಸಲು ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸಮಾಲೋಚನಾ ಸಭೆ ನಡೆಸಿ ಜನ ಸಂಘಟನೆ ಹಾಗು ಗ್ರಾಮ ಹಾಗು ತಾಲೂಕು ಹಾಗು ಜಿಲ್ಲಾ ಮಟ್ಟದ ಕಾರ್ಯಗಳಿಗೆ ಯೋಜನೆ ರೂಪಿಸಲು ನಿರ್ಧರಿಸಲಾಯಿತು.
ಅದರಂತೆ ಏಪ್ರಿಲ್ 1 ರಂದು ಬಂಟ್ವಾಳ , 3 ರಂದು ಬೆಳ್ತಂಗಡಿ, 4 ರಂದು ಸುಳ್ಯ, 6 ರಂದು ಪುತ್ತಊರು ಹಾಗು 19 ರಂದು ಮಂಗಳುರು ತಾಲುಕುಗಳಲ್ಲಿ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರಗಳು , ತಾಲೂಕು ಎಸೆ.ಡಿ.ಎಂ.ಸಿ ಸಮನ್ವಯ ವೇದಿಕೆ ಹಾಗು ಶಿಕ್ಷಣಾಸಕ್ತರ ಸಮಲೋಚನಾ ಸಭೆಗಳನ್ನು ನಡೆಸಲು ನಿರ್ಧರಿಸಲಾಯಿತು.
 
 
 
ಈ ಕಾರ್ಯಾಗಾರದಲ್ಲಿ ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜಾ, ಶಿಕ್ಷಣ ಸಂಪನ್ಮೂಲ ಕೇಣಂದ್ರಗಳ ಒಕ್ಕೂಟದ ಅಧ್ಯಕ್ಷ ಶ್ರೀಧರ್ ರಾವ್, ಮಾಜಿ ಅಧ್ಯಕ್ಷ ಎಸ್.ಎಂ.ಅಬೂಬಕ್ಕರ್ , ಎಸ್.ಡಿ.ಎಂ.ಸಿ ಜಿಲ್ಲಾಧ್ಯಕ್ಷ ಇಸ್ಮಾಯಿಲ್, ಬೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಾಗಾರ ನಡೆಸಿಕೊಟ್ಟರು. ತಾಲೂಕು ಎಸ್.ಡ.ಎಂ.ಸಿ ಸಮನ್ವಯ ವೇದಿಕೆಯ ತಾಲೂಕು ಅಧ್ಯಕ್ಷರು, ಸದಸ್ಯರು , ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಅದ್ಯಕ್ಷರು , ಸದಸ್ಯರು, ಶಿಕ್ಷಣಾಸಕ್ತರು ಭಾಗವಹಿಸಿದ್ದ ಈ ಕಾರ್ಯಾಗಾರದಲ್ಲಿ ದುರ್ಗಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಪಡಿ ಸಂಸ್ಥೆಯ ಸಂಯೋಜಕರಾದ ಕಸ್ತೂರಿ ಬೊಳುವಾರು, ದೀಕ್ಷಿತ್ ರವರು ಸಹಕರಿಸಿದರು.

LEAVE A REPLY

Please enter your comment!
Please enter your name here