ಸಮಾರೋಪ ಸಮಾರಂಭ

0
399

 
ನಮ್ಮ ಪ್ರತಿನಿಧಿ ವರದಿ
ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಇದರ ಆಶ್ರಯದಲ್ಲಿ ಎಡನೀರಿನಲ್ಲಿ ಐದು ದಿನಗಳ ಕಾಲ ನಡೆದ ಕನ್ನಡ ಸಂಸ್ಕೃತಿ ಶಿಬಿರವು ಸಮಾರೋಪ ಸಮಾರಂಭದೊಂದಿಗೆ ಸಂಪನ್ನಗೊಂಡಿತು.
 
udupamoole1
 
 
ಎಂಭತ್ತು ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ ನಿರ್ಮಲ್ ಕುಮಾರ್ ವಿಜ್ಞಾನ ಹಾಗೂ ನೆನಪು ಶಕ್ತಿಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಮಾಡಿಸಿದರು. ಶಿವರಾಮ್ ಕಲ್ಮಡ್ಕ ಮುಖವಾಡ ತಯಾರಿಕೆ , ಪ್ರಸನ್ನ ಐವರ್ನಾಡು ಚಿತ್ರಕಲೆ , ಮಂಜುಳಾ ಸುಬ್ರಹ್ಮಣ್ಯ ರಂಗ ಗೀತೆಗಳು ಹಾಗೂ ಅಭಿನಯ , ಪ್ರವೀಣ್ ಸೀತಂಗೋಳಿ ಮಕ್ಕಳನ್ನು ಚುರುಕುಗೊಳಿಸಲು ಹಲವು ರೀತಿಯ ಚಟುವಟಿಕೆಗಳನ್ನು ನಡೆಸಿದರು.
 
 
 
ಶಿಬಿರ ಅದ್ಭುತವಾದ ಯಶಸ್ಸನು ಕಂಡಿತು. ಮಕ್ಕಳು ಹಾಗೂ ಪೋಷಕರಿಂದ ಉತ್ತಮ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೇರಳ ರಾಜ್ಯ ಕನ್ನಡ ಅಧ್ಯಾಪಕ ಸಂಘದ ಕೇಂದ್ರಾಧ್ಯಕ್ಷರಾದ ಯಂ.ವಿ.ಮಹಾಲಿಂಗೇಶ್ವರ ಭಟ್ ” ಕನ್ನಡದ ಸಂಸ್ಕೃತಿ ಬಹಳ ದಾತ್ತ – ಉನ್ನತವಾದದ್ದು . ನಮ್ಮ ಮಕ್ಕಳಿಗೆ ಆ ಸಂಸ್ಕೃತಿಯನ್ನು ಎಳವೆಯಲ್ಲೇ ಕಲಿಸಿದರೆ ಮಾತ್ರ ಸಂಸ್ಕಾರ ಬೆಳೆಯಲು ಸಾಧ್ಯ . ಗಡಿನಾಡಾದ ಕಾಸರಗೋಡಿನಲ್ಲಿ ಕನ್ನಡ ಉಳಿವಿಗಾಗಿ ಇಂತಹ ಶಿಬಿರಗಳು ಬೇಕು. ಕಂಪ್ಯೂಟರ್ , ಮೊಬೈಲ್ ಗೀಳು ಅಂಟಿಸಿಕೊಳ್ಳುವ ಈ ಕಾಲದಲ್ಲಿ ಇಂತಹ ಶಿಬಿರಗಳು ಅಗತ್ಯವಾಗಿ ನಡೆಯಬೇಕು ” ಎಂದು ನುಡಿದರು.
 
 
ಮುಖ್ಯ ಅಭ್ಯಾಗತರಾಗಿದ್ದ ಲೇಖಕಿ ಪ್ರಸನ್ನಾ ವಿ. ಚೆಕ್ಕೆಮನೆ ” ಉತ್ತಮ ಉದ್ದೇಶಗಳೊಂದಿಗೆ ಶಿಬಿರಗಳನ್ನೂ , ಇನ್ನೂ ಹತ್ತು ಹಲವು ಕಾರ್ಯಗಳನ್ನೂ ನಡೆಸುತ್ತಿರುವ ಭೂಮಿಕಾ ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳು ಶ್ಲಾಘನೀಯ ಹಾಗೂ ಇತರರಿಗೆ ಮಾದರಿ. ಪ್ರತಿಷ್ಥಾನದ ನೇತತ್ವದಲ್ಲಿ ಇಂತಹ ಹಲವಾರು ಕಾರ್ಯಗಳು ನಡೆದು ಬರಲಿ ” ಎಂದು ಹಾರೈಸಿದರು.
 
 
 
ಪ್ರತಿಷ್ಠಾನದ ಕೋಶಾಧಿಕಾರಿ ರಾಘವೇಂದ್ರ ಭಟ್ ಉಡುಪುಮೂಲೆ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಕ್ಷೆ ಅನುಪಮಾ ರಾಘವೇಂದ್ರ ವಂದಿಸಿದರು.

LEAVE A REPLY

Please enter your comment!
Please enter your name here