ಸಮಾರೋಪ ಸಮಾರಂಭ

0
452

 
ವರದಿ/ಚಿತ್ರ: ಸುನೀಲ್ ಬೇಕಲ್
ಬೆಂಗಳೂರಿನಲ್ಲಿರುವ ರುಡ್ ಸೆಟ್ ನ್ಯಾಷನಲ್ ಆಕಾಡಮಿ ಅಯೋಜಿಸಿದ್ದ 64 ನೇ ತಂಡದ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಧರ್ಮಸ್ಥಳದಲ್ಲಿ ನೆರವೇರಿತು.
 
 
ಈ ಕಾರ್ಯಕ್ರಮದಲ್ಲಿ ರುಡ್ ಸೆಟ್ ನೇಷನಲ್ ಎಕಾಡಮಿ ಯ ಅಧ್ಯಕ್ಷರು ಮತ್ತು ರುಡ್ ಸೆಟ್ ಸಂಸ್ಥೆಗಳ ಅಧ್ಯಕ್ಷರೂ ಆದ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಮಾಣ ಪತ್ರಗಳನ್ನು ವಿತರಿಸಿ ಆರ್ಶೀವಚನ ನೀಡುತ್ತಾ ರುಡ್ ಸೆಟ್ ಸಂಸ್ಥೆಯ ಹುಟ್ಟು ಮತ್ತು ಅದರ ಬೆಳವಣಿಗೆಯ ಜೊತೆಗೆ ಕೇಂದ್ರ ಸರಕಾರ ರುಡ್ ಸೆಟ್ ಸಂಸ್ಥೆಯನ್ನು ಅನುಕರಣೀಯ ಮಾದರಿ ಎಂದು ಗುರುತಿಸಿ ಇಂದು ಬ್ಯಾಂಕುಗಳ ಸಹಯೋಗದೊಂದಿಗೆ ಸುಮಾರು 600 ಸ್ವ ಉದ್ಯೋಗ ಕೇಂದ್ರಗಳನ್ನು ತೆರೆದಿದೆ ಎಂದು ರುಡ್ ಸೆಟ್ ಸಂಸ್ಥೆಗಳ ಯಶೋಗಾತೆಯನ್ನು ವಿವರಿಸಿದರು.
 
 
 
ತರಬೇತಿಯ ಕುರಿತು ಅನಿಸಿಕೆಗಳನ್ನು ಕೇಳಿ ತರಬೇತುದಾರರ ಜವಾಬ್ದಾರಿಗಳನ್ನು ಮನವರಿಕೆ ಮಾಡಿದರು ಮತ್ತು ಅವಕಾಶಗಳನ್ನು ಸೃಷ್ಟಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ವೇದಿಕೆಯಲ್ಲಿ ಹೇಮಾವತಿ ವಿ ಹೆಗ್ಗಡೆ, ರುಡ್ ಸೆಟ್ ಕೇಂದ್ರಕಛೇರಿಯ ಅಧಿಕಾರಿಗಳಾದ ಟಿ.ಪಿ ಜಗದೀಶ ಮೂರ್ತಿ, ಅರುಣ ವಿ.ಜೆ ಹಾಗು ಅಕಾಡೆಮಿಯ ನಿರ್ದೇಶಕ ಗಂಗಾದರ ಮೂರ್ತಿ ಉಪಸ್ಥಿತರಿದ್ದರು.
 
 
ಈ ಕಾರ್ಯಕ್ರಮದಲ್ಲಿ ದೇಶದಾದ್ಯಂತ ವಿವಿಧ ರಾಜ್ಯಗಳ ವಿವಿಧ ಬ್ಯಾಂಕುಗಳಿಂದ ಪ್ರಾಯೋಜಿಸಲ್ಪಟ್ಟ ಆರ್ ಸೆ ಟಿ ಸಂಸ್ಥೆಗಳ 16 ನಿರ್ದೇಶಕರು ಮತ್ತು 23 ಉಪನ್ಯಾಸಕರುಗಳು ಬಾಗವಹಿಸಿದ್ದರು. ರುಡ್ ಸೆಟ್ ನ್ಯಾಷನಲ್ ಅಕಾಡೆಮಿಯ ಡೈರೆಕ್ಟರ್ ಜನ್ರಲ್ ಎನ್. ಎಮ್. ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

LEAVE A REPLY

Please enter your comment!
Please enter your name here