ಸಮಾರೋಪ ಸಮಾರಂಭ

0
344

 
ಬೆಂಗಳೂರು ಪ್ರತಿನಿಧಿ ವರದಿ
ಮಕ್ಕಳಲ್ಲಿ ಕಲ್ಮಷ ಇರುವುದಿಲ್ಲ,ಮಕ್ಕಳ ಮನಸ್ಸು ಶುಭ್ರವಾದ ಬಿಳಿಹಾಳೆ ಇದ್ದಂತೆ, ಆ ನಿಷ್ಕಲ್ಮಷತೆಯೇ ದೇವರು. ಇಂದು ಪ್ರಪಂಚದಲ್ಲಿ ನಿಷ್ಕಲ್ಮಷತೆಯೋಂದನ್ನು ಹೊರತುಪಡಿಸಿ ಉಳಿದೆಲ್ಲವೂ ಸಿಗುತ್ತದೆ. ಸಂಸ್ಕಾರ ನೀಡುವ ಇಂತಹ ಶಿಬಿರಗಳಮೂಲಕ ನಿಷ್ಕಲ್ಮಷತೆಯನ್ನು ಉಳಿಸಿ ಬೆಳೆಸಬೇಕು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
 
mata vasantha shibira
 
ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ವಸಂತ ವಾತ್ಸಲ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಹೊಂದಾಣಿಕೆ, ಪ್ರೀತಿ-ವಿಶ್ವಾಸ,ಹಂಚಿ ತಿನ್ನುವ ಗುಣಗಳು ಇಂಥಾ ಶಿಬಿರಗಳಿಂದ ಬರುತ್ತದೆ.ಇದು ಜೀವನದ ಪಾಠವನ್ನು ಕಲಿಸುತ್ತದೆ. ಹೊಂದಾಣಿಕೆ ಹಾಗು ಪರಸ್ಪರ ಪ್ರೀತಿ ವಿಶ್ವಾಸಗಳ ಕೊರತೆಯಿಂದಾಗಿ ಇಂದು ಪ್ರಪಂಚದಲ್ಲಿ ಅನರ್ಥಗಳನ್ನು ನೋಡುತ್ತಿದ್ದೇವೆ. ಪ್ರೀತಿ, ಶಾಂತಿ, ಧರ್ಮ ಎಲ್ಲರಲ್ಲಿ ತುಂಬಲಿ, ಅವು ನಮ್ಮನ್ನಾಳುವಂತಾಗಲಿ ಎಂದು ಆಶಿಸಿದರು.
 
 
 
ಎಲ್ಲರಲ್ಲಿ, ಎಲ್ಲಕಡೆ ಒಳಿತನ್ನು, ದೇವರನ್ನು ಕಾಣಿರಿ ಎಂಬ ಕಿವಿಮಾತನ್ನು ಹೇಳಿದ ಶ್ರೀಗಳು, ಶ್ರೀಮಠದ ಸಾಮಾಜಿಕ ಜಾಲತಾನದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಆಶೀರ್ವದಿಸಿದರು.ರಾಮರಕ್ಷಾ ಸ್ತೋತ್ರ ಸಮರ್ಪಣೆ ನೆರವೇರಿತು.ಶಿಬಿರದಲ್ಲಿ ನುರಾರು ಮಕ್ಕಳು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು. ಮಧ್ಯಾಹ್ನ ಕುಮಾರಿ ಆದಿತಿ ಕೊಂಕೋಡಿ ಇವರಿಂದ ಕಲಾಮುಕುಲದ ಸಂಯೋಜನೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸಂಪನ್ನವಾಯಿತು.

LEAVE A REPLY

Please enter your comment!
Please enter your name here