ಸಮಾರೋಪಗೊಂಡ ವಾಲಿಬಾಲ್ ಪಂದ್ಯಾವಳಿ

0
329

 
ವರದಿ: ಸುಕೃತ
ಫೋಟೋ: ಛಾಯಾ ವಿ ಆರ್
ಉಜಿರೆಯ ಶ್ರೀ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟವು ಶನಿವಾರ ಸಮಾರೋಪಗೊಂಡಿತು.
 
 
ಪಂದ್ಯಾಟದಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣೆಯ ಜೊತೆಗೆ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಪ್ರೊ ಎಸ್ ಪ್ರಭಾಕರ್ ಅವರು ಪ್ರಶಸ್ತಿ ವಿತರಿಸಿದರು.
 
 
ಬಾಲಕಿಯರ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ಉತ್ತರ ವಲಯದ ತಂಡದ ಮೇಘನ(ಉತ್ತಮ ಅಟ್ಯಾಕರ್), ಮಂಗಳೂರು ತಂಡದ ಸಾಲಿಯತ್(ಉತ್ತಮ ಆಲ್ರೌಂಡರ್), ಮಂಗಳೂರು ತಂಡದ ಯಶೋದ(ಉತ್ತಮ ಸೆಟರ್), ಮಂಗಳೂರು ತಂಡದ ಸಕ್ಕೂಬಾಯಿ(ಉತ್ತಮ ಲಿಬ್ರೊ), ಬಾಲಕರ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ಮಂಗಳೂರು ತಂಡದ ಶಿವಪ್ರಸಾದ್(ಉತ್ತಮ ಅಟ್ಯಾಕರ್), ಉಡುಪಿ ಜಿಲ್ಲಾ ತಂಡದ ದೀಕ್ಷಿತ್ ಶೆಟ್ಟಿ(ಉತ್ತಮ ಆಲ್ರೌಂಡರ್), ಮಂಗಳೂರು ತಂಡದ ಗಗನ್ ಪೂಜಾರಿ(ಉತ್ತಮ ಸೆಟರ್) ಹಾಗೂ ಉಡುಪಿ ತಂಡದ ಮೊಹಮ್ಮದ್ ಹಯಾಜ್(ಉತ್ತಮ ಲಿಬ್ರೊ) ಪ್ರಶಸ್ತಿ ಪಡೆದುಕೊಂಡಿದ್ದಾರೆ.
 
 
ಪ್ರಶಸ್ತಿ ವಿತರಿಸಿ ಮಾತನಾಡಿದ ಪ್ರೊ ಎಸ್.ಪ್ರಭಾಕರ್, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಸಂಯೋಜಕರಾದ ಶಶಿಧರ ಮಾಣಿ, ಹಿರಿಯ ಕ್ರೀಡಾಪಟು ಪ್ರೇಮನಾಥ್ ಶೆಟ್ಟಿ, ಎಸ್ ಸಿ ಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದಿನೇಶ್ ಚೌಟ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾಧ್ಯಾಪಕರಾದ ಕುಮಾರ್ ಹೆಗ್ಡೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here