ಸಮಾಜ ಹೇಳುತ್ತಿದೆ ʻಧನ್ಯವಾದ್‌ ಜವನೆರ್‌ ಬೆದ್ರʼ

0
382

ಹರೀಶ್‌ ಕೆ.ಆದೂರು

ಮೂಡುಬಿದಿರೆ: ಹೌದು ಇಂದು ಸಮಾಜ ಎದ್ದು ನಿಂತು ಹೇಳುತ್ತಿದೆ ʻಧನ್ಯವಾದ್‌ ಜವನೆರ್‌ ಬೆದ್ರʼ. ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂ ವಿನಂತಿ ಮಾಡಿದ ದಿನದಿಂದ ತೊಡಗಿ ಲಾಕ್‌ ಡೌನ್‌ ಸೇರಿದಂತೆ ಇಂದಿನ ತನಕವೂ ಪ್ರಧಾನಿಯವರ ʻಮಾತೇ ಶಾಸನʼ ಎಂಬಂತೆ ಕಾರ್ಯ ನಿರ್ವಹಿಸುತ್ತಿದೆ ಅಮರ್‌ ಕೋಟೆ ನೇತೃತ್ವದ ಜವನೆರ್‌ ಬೆದ್ರ ಸಂಘಟನೆ. ಸಮಾಜದಲ್ಲಿ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮೂಡುಬಿದಿರೆಯ ಪ್ರತಿಯೊಂದು ಅಂಗಡಿಗಳ ಮುಂದೆ ಶಾಶ್ವತ ವೃತ್ತ ರಚನೆ, ಅಶಕ್ತರ ಮನೆ ಬಾಗಲಿಗೆ ಅವಶ್ಯ ವಸ್ತು ತಲುಪಿಸುವ ಕಾರ್ಯ, ಸಮಸ್ಯೆಯಲ್ಲಿದ್ದವರಿಗೆ ಸೂಕ್ತ ಔಷಧೋಪಚಾರ ಹೀಗೆ ಪ್ರತಿಯೊಂದು ಕೆಲಸವನ್ನು ಅತ್ಯಂತ ಮುತುವರ್ಜಿಯಿಂದ ನಡೆಸುತ್ತಾ ಬಂದಿದೆ.
ಲಾಕ್‌ ಡೌನ್‌ ಸಂದರ್ಭ ಸಮಾಜದಲ್ಲಿರುವ ನೈಜ ಅಶಕ್ತರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಅಕ್ಕಿ ಸಹಿತ ದಿನಸಿಗಳನ್ನು ತಲುಪಿಸಿ ಅವರ ಆಶೀರ್ವಾದ ಪಡೆಯುತ್ತಿದೆ ಈ ಸಂಘಟನೆ. ಎಂದೂ ಪ್ರಚಾರಕ್ಕಾಗಿ ಕಾರ್ಯ ಮಾಡದೆ ಈ ತನಕ ಮೂಡುಬಿದಿರೆ ನಗರವೂ ಸೇರಿದಂತೆ ಆಸುಪಾಸಿನ ೫೦೦ ಮನೆಗಳಿಗೆ ಅವಶ್ಯ ವಸ್ತುಗಳನ್ನು ಉಚಿತವಾಗಿ ದಾನಿಗಳ ನೆರವಿನೊಂದಿಗೆ ನೀಡಿದ್ದು ಈ ಸಂಘಟನೆಯ ಸಾಧನೆಯನ್ನು ಎತ್ತಿ ಹಿಡಿಯುವಂತೆ ಮಾಡಿದೆ.

ಪ್ರಾಣಿಗಳಿಗೆ ಆಹಾರನೀಡುವ ಮಾನವೀಯ ಕಾರ್ಯ

ಲಾಕ್‌ ಡೌನ್‌ ಹಿನ್ನಲೆಯಲ್ಲಿ ಹೊಟೇಲ್‌,ಕ್ಯಾಂಟೀನ್‌ ಗಳು ಕಾರ್ಯನಿರ್ವಹಿಸುತ್ತಿಲ್ಲ. ಬೀದಿ ನಾಯಿಗಳಿಗೆ ಆಹಾರ ದಕ್ಕುತ್ತಿಲ್ಲ…ಅವುಗಳು ಹಸಿವಿನಿಂದ ನರಳುತ್ತಿರುವುದನ್ನು ಈ ಸಂಘಟನೆ ಗುರುತಿಸಿ ಮೂಡುಬಿದಿರೆಯ ಸುಮಾರು ೬೦ ಬೀದಿ ನಾಯಿ, ಪ್ರಾಣಿಗಳಿಗೆ ದಿನನಿತ್ಯ ಆಹಾರ ನೀಡುವ ಕಾರ್ಯ ಈ ಸಂಘಟನೆಯಿಂದಾಗುತ್ತಿದೆ.

ಸಂಘಟನೆಯ ಸಂಸ್ಥಾಪಕ ಅಮರ್‌ ಕೋಟೆ ನೇತೃತ್ವದಲ್ಲಿ , ಶುಭಕರ ಪೂಜಾರಿ,ಲೋಕೇಶ್‌,ಶಿವಪ್ರಸಾದ್‌,ರಾಜೇಶ್‌ ಕೆಲ್ಲಪುತ್ತಿಗೆ, ಮಧುಸೂದನ್‌,ನವೀನ್‌ ಕುಮಾರ್‌, ಅನಿಲ್‌ ಎಂ.ಸಿ, ರಂಜಿತ್‌ ಶೆಟ್ಟಿ, ಚಂದ್ರಶೇಖರ್‌, ನಾರಾಯಣ ಪದುಮಲೆ ಮೊದಲಾದ ಕಾರ್ಯಕರ್ತರು ಅಹರ್ನಿಶಿ ದುಡಿಯುತ್ತಿದ್ದಾರೆ.

Advertisement

ಸಮಾಜಮುಖೀ ಚಿಂತನೆಯ ಜವನೆರ್‌ ಬೆದ್ರ ಸಂಘಟನೆಯ ಈ ಕಾರ್ಯ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here