ಸಮವಸರಣ ಪೂಜೆ

0
159

 
ವರದಿ: ಸುನೀಲ್ ಬೇಕಲ್
ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಮಂಗಳವಾರ ಭಗವಾನ್ಶ್ರೀಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಿತು. ಕ್ಷುಲ್ಲಕ ನಿರ್ವಾಣ ಸಾಗರ್ಜಿ ಉಪಸ್ಥಿತರಿದ್ದರು.
 
 
ಧರ್ಮಸ್ಥಳದ ಸರಳಾ, ಸೌಮ್ಯ, ಸಾವಿತ್ರಿ, ಮಂಜುಳಾ ಮತ್ತು ಅಭಿಜ್ಞಾಜಿನ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಬಾಹುಬಲಿ ಸೇವಾ ಸಮಿತಿಯ ಶ್ರಾವಕ-ಶ್ರಾವಕಿಯರು ಸಹಕರಿಸಿದರು.ಕಾರ್ಕಳದ ಬಾಹುಬಲಿ ಶ್ರಾವಿಕಾಶ್ರಮದ ವಿದ್ಯಾರ್ಥಿನಿಯ ರಜಿನ ಭಕ್ತಿಗೀತೆಗಳ ಗಾಯನದೊಂದಿಗೆ ಅಷ್ಟವಿಧಾರ್ಚನೆ ಪೂಜೆ ನಡೆಯಿತು.
 
 
ಹೋರ್ನಾಡಿನ ಜಯಶ್ರೀ ಧರಣೇಂದ್ರಜೈನ್ ಮತ್ತು ಬಳಗದವರಿಂದ ಪೂಜಾ ಮಂತ್ರ ಪಠಣ ಹಾಗೂ ಭಕ್ತಿಗೀತೆಗಳ ಗಾಯನ ನಡೆಯಿತು.
ಪಾಕತಜ್ಞರಾದ ಸುಲ್ಕೇರಿಯಜಯಣ್ಣ ಮತ್ತು ಅಳದಂಗಡಿಯ ಶಶಿಧರಕೊಂಬ ಅವರನ್ನು ಸನ್ಮಾನಿಸಲಾಯಿತು.
 
 
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಮತ್ತು ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು. ಬಿ. ಸೋಮಶೇಖರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here