ಸಮರ್ಥ ನಿರ್ವಹಣೆಗೆ ಸಹಾಯಕವಾಗುವ ವೈಯಕ್ತಿಕ ಅಂಶಗಳು

0
394

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಮುಂದುವರಿದ ಭಾಗ…
ಯಶಸ್ವೀ ನಿರ್ವಹಣೆಯ ಮೇಲೆ ಅನೇಕ ಅಂಶಗಳು ಪ್ರಭಾವವನ್ನು ಬೀರುತ್ತದೆ. ಆದರೆ ಕೊನೆಗೂ ಎಲ್ಲಕ್ಕಿಂತ ಮುಖ್ಯವಾದ್ದು ವ್ಯಕ್ತಿಯ ವೈಯಕ್ತಿಕ ದಕ್ಷತೆಯೇ. ನಿರ್ವಹಣೆಯನ್ನು ಸಮರ್ಥವಾಗಿ ನಡೆಸಲು ಸಹಾಯಕವಾಗುವ ವೈಯಕ್ತಿಕ ಅಂಶಗಳನ್ನು ಚರ್ಚಿಸೋಣ:
ಇಚ್ಛಾಶಕ್ತಿ:
ಯಾವುದೇ ಒಂದು ಕಾರ್ಯದ ಯಶಶ್ವೀ ನಿರ್ವಹಣೆಯನ್ನು ಆ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಯ ವೈಯಕ್ತಿಕ ಇಚ್ಛಾಶಕ್ತಿಯು ನಿರ್ಧರಿಸುತ್ತದೆ. ನಿರ್ದಿಷ್ಟ ಕಾರ್ಯದಲ್ಲಿ ಪ್ರಬಲ ಇಚ್ಛಾಶಕ್ತಿಯನ್ನು ಹೊಂದಿರುವ ವ್ಯಕ್ತಿಗೆ ನಿರ್ವಹಣೆಯಲ್ಲಿ ಬರುವ ನಿರ್ವಹಣೆಯಲ್ಲಿ ಬರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುಬ ಸಾಮರ್ಥ್ಯವು ಅಂತರ್ಗತವಾಗಿಯೇ ಇರುತ್ತದೆ. ಆಗ ನಿರ್ವಹಣಾ ದಕ್ಷತೆಯನ್ನು ಸಾಧಿಸುವುದು ಸುಲಭವಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ಎಲ್ಲ ವಿದ್ಯಾರ್ಥಿಗಳಿಗೂ ತಮ್ಮ ಪರೀಕ್ಷಾ ಫಲಿತಾಂಶವು ಅತ್ಯತ್ತಮವಾಗಿರಬೇಕೆಂಬ ಅಪೇಕ್ಷೆ ಇರುತ್ತದೆ. ಎಲ್ಲ ಶಿಕ್ಷಕರಿಗೂ ತಮ್ಮ ಮಕ್ಕಳು ಅತ್ಯುತ್ತಮ ಫಲಿತಾಂಶವನ್ನೇ ತರಬೇಕೆಂಬ ಅಪೇಕ್ಷೆಯೂ ಇರುತ್ತದೆ. ಆದರೆ ಇದು ಕೇವಲ ಅಪೇಕ್ಷೆಯಾಗಿರುತ್ತದೆಯೂ ಅಥವಾ ಒಂದು ಧ್ಯೇಯವಾಗಿ ಇರುತ್ತದೆಯೋ ಎನ್ನುವುದೇ ನಿರ್ವಹಣೆಯ ಯಶಸ್ಸನ್ನು ನಿರ್ಧರಿಸುವ ಸಂಗತಿಯಾಗಿರುತ್ತದೆ. ಒಂದು ಧ್ಯೇಯವಾಗಿ ಈ ಅಪೇಕ್ಷೆಯು ಬಂದಿದ್ದರೆ ನಿರ್ದಿಷ್ಟ ಉದ್ದೇಶವನ್ನು ಸಾಧಿಸುವ ಆತ್ಮವಿಶ್ವಾಸ ಮತ್ತು ಪ್ರಬಲ ಇಚ್ಛಾಶಕ್ತಿ ಇರುತ್ತದೆ. ಆಗ ಆ ಧ್ಯೇಯಕ್ಕಾಗಿ ಉಳಿದ ಅನೇಕ ಹಿತಕಾರಿ ಅಂಶಗಳನ್ನು ತ್ಯಜಿಸಿ ತೊಡಗಿಸಿಕೊಳ್ಳಲು ಬೇಕಾದ ಮಾನಸಿಕ ಸಿದ್ಧತೆ ಇರುತ್ತದೆ. ಇಂತಹ ಇಚ್ಛಾಶಕ್ತಿಯೇ ಪ್ರಬಲ ಪ್ರೋತ್ಸಾಹವಾಗಿ ನಿರ್ವಹಣೆಯನ್ನು ಯಶಸ್ವೀ ರೀತಿಯಲ್ಲಿ ಮಾರ್ಗದರ್ಶಿಸುತ್ತದೆ.
 
ಆಸಕ್ತಿ:
ವ್ಯಕ್ತಿಯ ಇಚ್ಛಾಶಕ್ತಿಯನ್ನು ರೂಪಿಸುವುದರಲ್ಲಿ ವೈಯಕ್ತಿಕ ಆಸಕ್ತಿಯು ಬಹಳ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ. ನಿರ್ದಿಷ್ಠ ಕಾರ್ಯದಲ್ಲಿ ಆಸಕ್ತಿ ಇದ್ದರೆ ಬಹುಬೇಗ ಇಚ್ಛಾಶಕ್ತಿಯು ಮೂಡಿಬರುತ್ತದೆ. ಉದಾಹರಣೆಗೆ ಹೇಳುವುದಾದರೆ ಮೂಲಭೂತವಾಗಿಯೇ ವಿಜ್ಞಾನದಲ್ಲಿ ಆಸಕ್ತಿ ಇದ್ದು ವಿಜ್ಞಾನ ವಿಷಯವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಯು ಹಠ ಹಿಡಿದು ಪ್ರಯೋಗವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾನೆ/ಳೆ. ಆದರೆ ಯಾರದೋ ಒತ್ತಾಯಕ್ಕೆ ವಿಜ್ಞಾನ ವಿಷಯವನ್ನು ತೆಗೆದುಕೊಂಡು ಪ್ರಯೋಗ ಮಾಡಲು ಹೊರಟವರಲ್ಲಿ ಈ ರೀತಿಯ ನಿರ್ವಹಣಾ ದಕ್ಷತೆಯ ಇರುವುದು ಸಾಧ್ಯವಿಲ್ಲ. ಅಂದರೆ ವೈಯಕ್ತಿಕ ಆಸಕ್ತಿಯು ಸಮರ್ಥ ನಿರ್ವಹಣೆಗೆ ಸಹಾಯವಾಗುತ್ತದೆ.
 
ಮುಂದುವರಿಯುವುದು
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here