ಸಮಯದ ಸದುಪಯೋಗವಾದಾಗ ಬದುಕು ಶಾಶ್ವತ : ಪ್ರಮೀಳಾ ರಾವ್

0
485

 
ವರದಿ: ರಂಜಿತ್ ಮಡಂತ್ಯಾರು
ಜಗತ್ತಿನ ಜೀವರಾಶಿಗಳಲ್ಲಿ ಮಾನವ ಶ್ರೇಷ್ಠ ಬುದ್ದಿವಂತ ಜೀವಿ, ಇಂತಹ ಜನ್ಮ ಸಿಕ್ಕಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ, ಮನುಷ್ಯನ ಜೀವನದಲ್ಲಿ ಹುಟ್ಟು ಮೊದಲ ಪಾತ್ರವಾದರೆ, ಸಾವು ಕೊನೆಯ ಪಾತ್ರ, ನಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ಪೂರಕವಾದ ಒಳ್ಳೆಯ ಕೆಲಸಗಳನ್ನು ಮಾಡಬೇಕು, ಸಮಯದ ಸದುಪಯೋಗವಾದಾಗ ನಮ್ಮ ಬದುಕು ಶಾಶ್ವತವಾಗುತ್ತದೆ, ಎಂದು ಮಂಗಳೂರು ಕೆನರಾ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ರಾವ್ ಅವರು ತಿಳಿಸಿದರು.
 
 
 
ಅವರು ವಿಶ್ವ ಹಿಂದೂ ಪರಿಷತ್, ಕುಕ್ಕಳ ಘಟಕದ ವತಿಯಿಂದ ನಡೆದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು. ಧರ್ಮ ಜಾಗೃತಿಯೊಂದಿಗೆ ಕಲೆ, ಸಾಹಿತ್ಯ, ಸಂಸ್ಕೃತಿ ಸಂರಕ್ಷಣೆ ಮತ್ತು ಉದ್ದೀಪನಕ್ಕೆ ವಿಶ್ವ ಹಿಂದೂ ಪರಿಷತ್ತಿನ ಕೊಡುಗೆ ಅಮೂಲ್ಯವಾಗಿದೆ, ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳಲ್ಲಿ ಸಾಮೂಜಿಕ ಶೈಕ್ಷಣಿಕ ಮತ್ತು ಧಾರ್ಮಿಕ ಕಾಳಜಿ ಅಡಕವಾಗಿದೆ ಎಂದು ಹೇಳಿದರು.
 
 
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ವಿಶ್ವ ಹಿಂದೂ ಪರಿಷತ್ ನ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯಾ, ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷರಾದ ಹರೀಶ್ ಪೂಂಜ, ತಾಲೂಕು ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷರಾದ ಸಂಪತ್.ಬಿ.ಸುವರ್ಣ, ತಾಲೂಕು ಬಿ.ಜೆ.ಪಿ ಯುವ ಮೋರ್ಚಾ ಕಾರ್ಯದರ್ಶಿ ರೋಹಿತ್ ಪೂಜಾರಿ ಪುಂಜಾಲಕಟ್ಟೆ, ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೋಪಾಲಕೃಷ್ಣ.ಕೆ., ಮಡಂತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಶೈಲೇಶ್ ಪುಳಿಮಜಲು, ಪ್ರಗತಿಪರ ಕೃಷಿಕ ರವಿ ಪೂಜಾರಿ ಮಾನಿಂಜ, ಮಂಜಲಪಲ್ಕೆ, ಜೈ ಹನುಮಾನ್ ಭಜನಾ ಮಂದಿರದ ಅಧ್ಯಕ್ಷರಾದ ವಿಶ್ವನಾಥ್ ಹಟ್ಟತ್ತೋಡಿ, ಕುಕ್ಕಳ ವಿಶ್ವ ಹಿಂದೂ ಪರಿಷತ್ ಘಟಕದ ಅಧ್ಯಕ್ಷರಾದ ಪ್ರಕಾಶ್ ಅನಿಲಡೆ, ಗೌರವ ಅಧ್ಯಕ್ಷರಾದ ಕೇಶವ ಪೂಜಾರಿ ಅಲೆಕ್ಕಿ, ಹಾಗೂ ರತ್ನಕರ ಪಿ.ಎಂ. ಅವರು ಉಪಸ್ಥಿತರಿದ್ದರು. ಪ್ರಭಾಕರ್ ಪಿ.ಎಂ ಅವರು ಸ್ವಾಗತಿಸಿ, ನಿರೂಪನೆ ಗೈದರು, ಕಿಶೋರ್ ಅವರು ವಂದಿಸಿದರು.

LEAVE A REPLY

Please enter your comment!
Please enter your name here