ಸಮನ್ಸ್ ಜಾರಿ

0
261

ಮೈಸೂರು ಪ್ರತಿನಿಧಿ ವರದಿ
ಚುನಾವಣೆ ಸಂದರ್ಭದಲ್ಲಿ ಸುಳ್ಳು ಅಫಿಡವಿಟ್ಟು ಸಲ್ಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಡಿಸೆಂಬರ್ 21ರಂದು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅವರಿಗೆ ಗುಂಡ್ಲುಪೇಟೆ ಜೆಎಂಎಫ್ ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
 
 
2013ರ ವಿಧಾನಸಭೆ ಚುನಾವಣೆ ವೇಳೆ ಮಹದೇವ್ ಪ್ರಸಾದ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ಟಿನಲ್ಲಿ ಗುಂಡ್ಲುಪೇಟೆ ತಾಲ್ಲೂಕು ಅರೆಪುರ ಗ್ರಾಮದಲ್ಲಿ ಹೊಂದಿರುವ 3.22 ಎಕರೆ ಜಮೀನಿನ ವಿವರವನ್ನು ಘೋಷಿಸಿರಲಿಲ್ಲ ಎಂಬ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.
 
 
 
ಬಿಜೆಪಿ ನಾಯಕ ಎಲ್.ಸುರೇಶ್ 2013 ನವೆಂಬರ್ ನಲ್ಲಿ ಕೇಸು ದಾಖಲಿಸಿದ್ದರು. 2014ರಲ್ಲಿ ಸ್ಥಳೀಯ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದಾಗ ಸಚಿವರು 2016ರಲ್ಲಿ ಹೈಕೋರ್ಟ್ ನಿಂದ ಅದಕ್ಕೆ ತಡೆ ತಂದಿದ್ದರು. ಪೊಲೀಸರು ಎರಡು ವರ್ಷಗಳವರೆಗೆ ಅವರಿಗೆ ಸಮನ್ಸ್ ಜಾರಿ ಮಾಡಿರಲಿಲ್ಲ. ನಂತರ ದೂರುದಾರ ಸುರೇಶ್ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದರು. ಇದೀಗ ನ್ಯಾಯಾಲಯ ಎರಡನೇ ಬಾರಿಗೆ ಸಮನ್ಸ್ ಜಾರಿ ಮಾಡಿದ್ದು ಮಹದೇವ್ ಪ್ರಸಾದ್ ಅವರಿಗೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

LEAVE A REPLY

Please enter your comment!
Please enter your name here