ಸಮತೋಲನ ಆಹಾರದ ಮಹತ್ವ

0
795

ವರದಿ: ಸುನೀಲ್ ಬೇಕಲ್
ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ,ಧರ್ಮಸ್ಥಳದಲ್ಲಿಆರೋಗ್ಯ ಮತ್ತು ಸ್ವಚ್ಚತೆಯನ್ನುಕಾಪಾಡುವ ಸಲುವಾಗಿ ಸಮತೋಲನ ಆಹಾರದ ಮಹತ್ವ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
 
 
ಈ ಕಾರ್ಯಕ್ರಮಕ್ಕೆ ಎಸ್.ಡಿ.ಎಂ ಕಾಲೇಜಿನಗೃಹ ವಿಭಾಗದ ಉಪನ್ಯಾಸಕಿಯಾದ ಶೋಭಾ ಇವರು ಆಗಮಿಸಿದ್ದರು. ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಟಮಿನ್ಯುಕ್ತಆಹಾರದಿಂದರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಜೊತೆಗೆ ಪೋಷಕಾಂಶಗಳ ಕೊರತೆಯನ್ನು ಹೇಗೆ ಹೋಗಲಾಡಿಸಬಹುದು ಹಾಗೂ ಸಮತೋಲನ ಆಹಾರವು ಮನುಷ್ಯನ ಬೆಳವಣಿಗೆಗೆ ಹೇಗೆ ಸಹಕಾರಿಯಾಗುತ್ತದೆಎಂದು ನುಡಿದರು.
 
 
ಅರ್ಪಿತ ನಿರೂಪಿಸಿದ ಪ್ರಸ್ತುತಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪರಿಮಳಾ ಎಂ.ವಿರವರು ಅತಿಥಿಗಳನ್ನು ಸ್ವಾಗತಿಸಿ ಸಭಾಸದರಿಗೆ ಪರಿಚಯಿಸಿ ಕಾರ್ಯಕ್ರಮದ ಬಳಿಕ ಧನ್ಯವಾದ ಸಮರ್ಪಿಸಿದರು. ಈ ಕಾರ್ಯಕ್ರಮವು ಆರೋಗ್ಯ ಮತ್ತು ಸ್ವಚ್ಚತೆ ಸಂಘದ ವತಿಯಿಂದ ಆಯೋಜಿಸಲಾಗಿತ್ತು. ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here