ಸಮಗ್ರ ಚಾಂಪಿಯನ್ ಶಿಪ್

0
169

ಉಜಿರೆ ಪ್ರತಿನಿಧಿ ವರದಿ
ದಿವಂಗತ ರೆವರೆಂಡ್ ಫಾದರ್ ಡಿಕ್ರಝ‍್ ರ ಸ್ಮರಣಾರ್ಥ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇಲ್ಲಿ ನಡೆದ ವಿಜ್ಞಾನೋತ್ಸವ-2016 ಸ್ಪರ್ಧೆಗಳಲ್ಲಿ ಶ್ರೀ.ಧ.ಮಂ ಪದವಿ ಕಾಲೇಜು ಸಮಗ್ರ ಚಾಂಪಿಯನ್ ಶಿಪ್ ನ್ನು ಪಡೆದುಕೊಂಡಿದೆ.
 
 
 
ಗಣಿತ ಉಪನ್ಯಾಸನ ಸ್ಪರ್ಧೆಯಲ್ಲಿ ಪ್ರಣಮ್ಯ ಪ್ರಥಮ ಸ್ಥಾನ, ಕವನ ಸ್ಪರ್ಧೆಯಲ್ಲಿ ಶ್ರಾವ್ಯ ಪ್ರಥಮ ಸ್ಥಾನ, ವಿಜ್ಙಾನ ಮಾದರಿ ರಚನೆ ಸ್ಪರ್ಧೆಯಲ್ಲಿ ಜೋಸ್ಟಮ್ ಹಾಗೂ ನಮೃತಾ ತಂಡ ದ್ವಿತೀಯ, ಕೊಲಾಜ್ ಮೇಕಿಂಗ್ ಸ್ಪರ್ಧೆಯಲ್ಲಿ ಅಕ್ಷತಾ ಹಾಗೂ ಸಹನಾ ತಂಡ ದ್ವಿತೀಯ ಹಾಗೂ ಐಸ್ ಬ್ರೇಕರ್ ಸ್ಪರ್ಧೆಯಲ್ಲಿ ಶ್ರೇಯಸ್,ವಿಜೇತಾ, ಸಭ್ಯ, ನಿಖಿತಾ, ನಮೃತಾ, ಸಹನ, ಅಕ್ಷತಾ, ಪ್ರಣಮ್ಯ, ಶ್ರಾವ್ಯ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರು.
 
 
 
ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟ ವಿವಿಧ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.

LEAVE A REPLY

Please enter your comment!
Please enter your name here