ಸಭೆ

0
332

 
ಮಂಗಳೂರು ಪ್ರತಿನಿಧಿ ವರದಿ
ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪದಾಧಿಕಾರಿಗಳ ಸಭೆಯು ಮಂಗಳವಾರ ಪಕ್ಷದ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯದ ಕಂಪನ್ನು ಜಾಗೃತಿಗೊಳಿಸುವ, ಹರಡಿಸುವ ದೃಷ್ಟಿಯಿಂದ ಈ ಬಾರಿಯ 70ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
 
ಸ್ವಾತಂತ್ರ್ಯದ ರಾಷ್ಟ್ರೀಯ ಹಬ್ಬವನ್ನು ಸಂಭ್ರಮ, ಸಡಗರಗಳಿಂದ ಆಚರಿಸಿ, ಸ್ವಾತಂತ್ರ್ಯಕ್ಕಾಗಿ ದುಡಿದ ಹಾಗೂ ಪ್ರಾಣಾರ್ಪಣೆಗೈದ ಎಲ್ಲಾ ಹುತಾತ್ಮ ಸೇನಾನಿಗಳಿಗೆ ಗೌರವ ಸೂಚಿಸುತ್ತಾ, ಅವರ ತ್ಯಾಗವನ್ನು ಸ್ಮರಿಸುತ್ತಾ ತ್ರಿವರ್ಣ ರಾಷ್ಟ್ರಧ್ವಜ ಯಾತ್ರೆಯನ್ನು ಆಚರಿಸಬೇಕೆಂದು ಪ್ರಧಾನಮಂತ್ರಿಗಳ ಆಶಯವಾಗಿದೆ. ಸಮಾಜದ ಎಲ್ಲಾ ವರ್ಗದ ಬಂಧುಗಳು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಿ ನಡೆಸಬೇಕೆಂದು ಅಪೇಕ್ಷೆ ಪಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಿಲ್ಲೆಯಲ್ಲಿ ಆಯೋಜಿಸಬೇಕೆಂದು ಈ ಸಭೆಯಲ್ಲಿ ನಿರ್ಣಯಿಸಲಾಯಿತು.
 
 
ಕಾರ್ಯಕ್ರಮಗಳು :-
1. ಆಗಸ್ಟ್ 15ರಂದು ಪಕ್ಷದ ಕಾರ್ಯಾಲಯದಲ್ಲಿ ಬೆಳಿಗ್ಗೆ ರಾಷ್ಟ್ರ ಧ್ವಜಾರೋಹಣ. ಸಾಯಂಕಾಲ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಯುವ ಮೋರ್ಚಾ ನೇತ್ರತ್ವದಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ.
2. ಆಗಸ್ಟ್ 18ರಂದು ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಸೈನಿಕರು, ಮಾಜಿಸೈನಿಕರು ಮತ್ತು ಪೂರ್ವಾಂಚಲ ಬಂದುಗಳೊಡನೆ ರಕ್ಷಾಬಂಧನ ಕಾರ್ಯಕ್ರಮ.
3.ಆಗಸ್ಟ್ 16 ರಿಂದ 23 ಪ್ರತೀ ಶಕ್ತಿಕೇಂದ್ರ ಮಟ್ಟದಲ್ಲಿ ಬೈಕ್ ರ್ಯಾಲಿಯ ಮೂಲಕ ತ್ರಿವರ್ಣ ರಾಷ್ಟ ಧ್ವಜ ಯಾತ್ರೆ ಹಮ್ಮಿಕೊಳ್ಳಲಾಗಿದೆ.
4. ಆಗಸ್ಟ್ 21ರಂದು ಪಕ್ಷದ ಜಿಲ್ಲಾ ಕೇಂದ್ರಗಳಲ್ಲಿ ಸ್ವಾತಂತ್ಯಕ್ಕೋಸ್ಕರ ಪ್ರಾಣಾರ್ಪಣೆಗೈದ ಹೋರಾಟಗಾರರನ್ನು ನೆನಪು ಮಾಡುವ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪಾರ್ಟಿಯ ರಾಷ್ಟೀಯ ಅಧ್ಯಕ್ಷರು ಅಥವಾ ಕೇಂದ್ರ ಮಂತ್ರಿಯವರು ಭಾಗವಹಿಸುವ ಸಾಧ್ಯತೆಯಿದೆ.
5. ಆಗಸ್ಟ್ 21ರಂದು ಖಾದಿ ಕ್ಷೇತ್ರದಲ್ಲಿ ದುಡಿಯುವ ಕೈಗಳಿಗೆ ಕೆಲಸ ಮತ್ತು ಭದ್ರತೆಯ ದೃಷ್ಟಿಯಿಂದ ಉತ್ತೇಜನವನ್ನು ಕೊಡಲು ಖಾದಿ ತಬ್ಬಿಕೊಳ್ಳಿ ಎಂಬ ಸ್ವದೇಶಿ ಕಲ್ಪನೆಗೆ ಒತ್ತುಕೊಡುವ ಕಾರ್ಯಕ್ರಮ.
6. ಅಗಸ್ಟ್ 21: ಪಾರ್ಟಿಯ ಎಲ್ಲಾ ಗ್ರಾಮ ಪಂಚಾಯತ್ ಮತ್ತು ಮತಗಟ್ಟೆ ಸಮಿತಿಗಳಲ್ಲಿ ಪ್ರತಿಯೊಬ್ಬ ಕಾರ್ಯಕರ್ತ ಒಂದೊಂದು ಸಸಿಯನ್ನು ನೆಡುವ ಮೂಲಕ ಗಿಡ ನೆಡಿ ಕಾರ್ಯಕ್ರಮ.
ಸ್ವಾತಂತ್ರೋತ್ಸವವು ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ಇಡೀ ವರ್ಷ ಹಬ್ಬದ ವಾತಾವರಣ ಮತ್ತು ಸ್ವಾತಂತ್ರ್ಯದ ಹೋರಾಟವನ್ನು ನೆನಪಿಸುವ, ಜಾಗೃತಿಗೊಳಿಸುವ ಮತ್ತು ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ವಾತಾವರಣ ನಿರ್ಮಾಣವಾಗುವುದಕ್ಕೆ, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಜನತೆ ಭಾಗವಹಿಸಿ ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸೋಣ ಎಂದು ಜಿಲ್ಲಾ ವಕ್ತಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here