ಸಬ್ಸಿಡಿಯೇತರ ಎಲ್’ಪಿಜಿ ದರ ಏರಿಕೆ

0
368

 
ರಾಷ್ಟ್ರೀಯ ಪ್ರತಿನಿಧಿ ವರದಿ
ನಿನ್ನೆ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹೆಚ್ಚಿಸಿದ ಬಳಿಕ ಸಬ್ಸಿಡಿಯೇತರ ಎಲ್’ಪಿಜಿ ಯ ದರವನ್ನು ಏರಿಸಲಾಗಿದೆ.
 
 
 
ಸರ್ಕಾರ ಸಬ್ಸಿಡಿ ರಹಿತ ಎಲ್’ಪಿಜಿ ಸಿಲಿಂಡರ್ ಬೆಲೆಯು ರೂ.21 ಹೆಚ್ಚಳ ಮಾಡಿದೆ. ಕಳೆದ ತಿಂಗಳು ಸಬ್ಸಿಡಿಯೇತರ ಎಲ್’ಪಿಜಿ ಸಿಲಿಂಡರ್ ದರದಲ್ಲಿ ರೂ.18 ಏರಿಕೆಯಾಗಿತ್ತು.
 
 
ಇತ್ತ ಜೆಟ್ ಇಂಧನದ ದರವನ್ನೂ ಶೇಕಡ 9.2ರಷ್ಟು ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರ ಆದೇಶದ ಮೆರೆಗೆ ಜೆಟ್ ಇಂಧನ ಬೆಲೆಯನ್ನು ಹೆಚ್ಚಿಸಲಾಗಿದೆ.
 
ನಿನ್ನೆ ಪೆಟ್ರೋಲ್ ದರವನ್ನು ರೂ.2.58 ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆಯನ್ನು ರೂ.2.26 ಪ್ರತಿ ಲೀಟರ್ ಏರಿಸುವ ಮೂಲಕ ಸರ್ಕಾರ ಕಳೆದ ಒಂದು ತಿಂಗಳಿನಲ್ಲಿ ಎರಡನೇ ಬಾರಿ ಇಂಧನ ದರಗಳನ್ನು ಹೆಚ್ಚಿಸಿದೆ.

LEAVE A REPLY

Please enter your comment!
Please enter your name here