ಸಫಾರಿಗೆ ಮಿನಿ ವಾಹನಗಳಿಗೆ ತಡೆ ನೀಡಲು ಚಿಂತನೆ

0
247

ಬೆಂಗಳೂರು ಪ್ರತಿನಿಧಿ ವರದಿ
ಬನ್ನೇರುಘಟ್ಟದಲ್ಲಿ ಸಫಾರಿ ವೇಳೆ ಸಿಂಹ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಸಫಾರಿಗೆ ತೆರಳುತ್ತಿದ್ದ ಮಿನಿ ವಾಹನಗಳಿಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸಂತೋಷ್ ಕುಮಾರ್ ಹೇಳಿದ್ದಾರೆ.
 
 
 
ಮಿನಿವಾಹನಗಳಿಗೆ ಮೆಶ್ ಅಳವಡಿಸುವ ಕಾರ್ಯ ನಡೆದಿದೆ. ಸಣ್ಣ ವಾಹನಗಳ ಮೇಲೆ ಪ್ರಾಣಿಗಳ ದಾಳಿ ಸುಲಭ ಹಿನ್ನೆಲೆಯಲ್ಲಿ ಮಿನಿ ವಾಹನಗಳ ಸಫಾರಿಗೆ ಶಾಶ್ವತ ತಡೆಗೂ ಚಿಂತಿಸಲಾಗಿದೆ. ಈ ಸಂಬಂಧ ಸರ್ಕಾರದ ಜತೆ ಪತ್ರ ವ್ಯವಹಾರ ನಡೆದಿದೆ.
 
 
 
ಮೊನ್ನೆ ನಡೆದ ಘಟನೆಯಲ್ಲಿ ಅಧಿಕಾರಿಗಳು ಡ್ರೈವರ್ ರಮೇಶ್ ಮೇಲೆ ತಪ್ಪು ಹೊರಿಸಿದ್ದಾರೆ. ಇದರಿಂದ ಸಫಾರಿ ಡ್ಯೂಟಿಯಿಂದ ಡ್ರೈವರ್ ನ್ನು ಸ್ಥಳಾಂತರ ಮಾಡಲಾಗಿದೆ. ರಮೇಶ್ ನನ್ನು ರಾತ್ರಿ ಪಾಳಿಗೆ ವರ್ಗಾಯಿಸಲಾಗಿದೆ.
 
 
 
ಅರಣ್ಯ ಅಧಿಕಾರಿಗಳು ವಾಹನಗಳಲ್ಲಿ ಮೆಷ್ ಅಳವಡಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಆದರೆ ಶಿಕ್ಷ ಸಿಕ್ಕಿದ್ದು ಮಾತ್ರ ವಾಹನ ಡ್ರೈವರ್ ಗೆ.

LEAVE A REPLY

Please enter your comment!
Please enter your name here