ಸಪ್ತಪದಿ ತುಳಿದ ರೆಡ್ಡಿ ಪುತ್ರಿ

0
273

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದ್ರಲೋಕವೇ ಧರೆಗಿಳಿದಿದೆ. ಗಣಿಧಣಿ ಜನಾರ್ಧನ ರೆಡ್ಡಿ ಪುತ್ರಿ ಬ್ರಹ್ಮಣಿಯ ವಿವಾಹ ಮಹೋತ್ಸವ ವಿಜೃಂಭಣೆಯಿಂದ ನಡೆದಿದೆ. ಅದ್ಧೂರಿ ವೇದಿಕೆಯಲ್ಲಿ ಬ್ರಹ್ಮಣಿ-ರಾಜೀವ್ ಮದುವೆ ನಡೆದಿದೆ.ಕಲ್ಯಾಣ ಮಂಟಪದಲ್ಲಿ ಅರ್ಚಕರಿಂದ ಮಂತ್ರ ಘೋಷಗಳ ಉದ್ಘಾರ ನಡೆದಿದೆ.
 
 
ರೆಡ್ಡಿ ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆದಿದೆ. 9.30ರಿಂದ 10.30ರ ಧನುರ್ ಲಗ್ನ ಮುಹೂರ್ತದಲ್ಲಿ ಮಾಂಗಲ್ಯಧಾರಣೆಯಾಗಿದೆ. 8 ಅರ್ಚಕರಿಂದ ವಿವಾಹ ವಿಧಿವಿಧಾನ ನಡೆದಿದೆ. ಬೆಳಗ್ಗೆ 10.30ಯಿಂದ ವೇದಿಕೆಯಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ನೂತನ ಜೋಡಿಗಳಿಗೆ ಮಧ್ಯಾಹ್ನದವರೆಗೂ ಆರತಕ್ಷತೆ ನಡೆಯಲಿದೆ. ಮಧ್ಯಾಹ್ನ 3.30ರ ನಂತರ ಬಳ್ಳಾರಿಗೆ ನವದಂಪತಿಗಳು ಪಯಣ ಬೆಳಸಲಿದ್ದಾರೆ.
 
 
ಮೊದಲು ವಧು ಬ್ರಹಮಣಿಯಿಂದ ದೇವಿ, ಶ್ರೀನಿವಾಸನ ಪೂಜೆ ನಡೆದಿದೆ. 30ಕ್ಕೂ ಹೆಚ್ಚು ಧರ್ಮಗುರುಗಳು ನವವಧು-ವರರಿಗೆ ಆಶೀರ್ವಚನ ನೀಡಿದ್ದಾರೆ.
ಸಾವಿರ ಮಂದಿಗೆ ವಿಶೇಷ ಭಾರೀ ಭೋಜನ ವ್ಯವಸ್ಥೆ ಮಾಡಲಾಗಿದೆ. ದಕ್ಷಿಣಭಾರತ-ಉತ್ತರಕರ್ನಾಟಕ ಶೈಲಿಯ ಅಡುಗೆ ರುಚಿ ನೀಡಲಿದೆ. ಊಟದ ಮೆನುವಿನಲ್ಲಿ 16 ಬಗೆಯ ಸ್ವೀಟ್ಸ್ ಗಳಿವೆ. 60 ಬೆಳಗ್ಗೆ 10.30ರಿಂದಲೇ ಭೋಜನ ವ್ಯವಸ್ಥೆ ಮಾಡಲಾಗಿದೆ.ವಿಐಪಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ.
 
 
 
ರೆಡ್ಡಿ ಪುತ್ರಿಯ ವಿವಾಹ ಮಹೋತ್ಸವಕ್ಕೆ ನಟ ಶರತ್ ಬಾಬು, ನಟ ರವಿಚಂದ್ರನ್, ಸಚಿವ ಡಿ ಕೆ ಶಿವಕುಮಾರ್, ತೆಲುಗು ಹಾಸ್ಯನಟ ಬ್ರಹ್ಮಾ ನಂದಂ, ತಮಿಳು ನಟ ವಿಶಾಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೇರಿ ಗಣ್ಯಾತಿಗಣ್ಯರು ಆಗಮಿಸಿ ನವದಂಪತಿಗೆ ಆಶೀರ್ವಾದ ನೀಡಿದ್ದಾರೆ.

LEAVE A REPLY

Please enter your comment!
Please enter your name here