ಸನ್ಮಾನ

0
283

ಮ0ಗಳೂರು ಪ್ರತಿನಿಧಿ ವರದಿ
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿನ ಹಳೆ ವಿದ್ಯಾರ್ಥಿ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿ. ರಮಾನಾಥ ರೈಯವರನ್ನು ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥೊ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.
 
 
 
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ.ಎ. ಗಣ್ಯರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು. ಸಂಘದ ಅಧ್ಯಕ್ಷರಾಗಿರುವ ಬಿ. ಧರ್ಮಣ ನಾಯ್ಕ್ ಅಧ್ಯಕ್ಷ್ಷತೆ ವಹಿಸಿದ್ದರು. ಜತೆ ಕಾರ್ಯದರ್ಶಿ ಶಶಿಧರ ಶೆಟ್ಟಿಂ ಸನ್ಮಾನಿತರ ಗುಣಗಾನಗೈದರು. ಸಂಘದ ಕಾರ್ಯದರ್ಶಿ ಲೋಹಿದಾಸ್ ಮತ್ತು ಖಚಾಂಚಿ ರಾಮಮೋಹನ್ ರೈಯವರು ಕ್ರಮವಾಗಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳನ್ನು ಮಂಡಿಸಿದರು. ಲೋಹಿದಾಸ್ ವಂದಿಸಿದರು.
 
 
 
ಸಂಘದ ಉಪಾಧ್ಯಕ್ಷರಾಗಿರುವ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಶ್ರೀನಿವಾಸ ನಾಯಕ್ ಮತ್ತು ಶುಭೋದಯ ಕೂಡ್ಲು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here