ಸದ್ಯದಲ್ಲೇ ಚಿನ್ನಮ್ಮ ಯುಗ ಶುರು!

0
471

ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡಿನಲ್ಲಿ ‘ಅಮ್ಮ’ ಯುಗದ ನಂತರ ‘ಚಿನ್ನಮ್ಮ’ ಯುಗ ಶುರುವಾಗುತ್ತಿದೆ. ತಮಿಳುನಾಡಿನ ಮುಖ್ಯಮಂತ್ರಿ ಪಟ್ಟ ಚಿಕ್ಕಮ್ಮಗೆ ಸಿಗಲಿದೆ. ಸಿಎಂ ಆಗಿ ದಿವಂಗತ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಫೆ.8 ಅಥವಾ 9ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಪಕ್ಷದ ಎಲ್ಲಾ ಶಾಸಕರಿಗೆ ಸಭೆ ಕರೆದಿದ್ದಾರೆ.
 
 
 
ಈಗಾಗಲೇ ಸಿಎಂ ಆಗಿರುವ ಪನ್ನೀರ್ ಸೆಲ್ವಂಗೆ ರಾಜೀನಾಮೆ ನೀಡಲು ಪಕ್ಷದಿಂದ ಸೂಚನೆ ಬಂದಿದೆ. ತಮಿಳುನಾಡಿನ ಹಲವು ಪತ್ರಿಕೆಗಳಲ್ಲಿ ಸಿಎಂ ಬದಲಾವಣೆ ಬಗ್ಗೆ ವರದಿಯಾಗಿದೆ.  ಜಯಲಲಿತಾ ಸಮಾಧಿ ಎದುರೇ ತಮಿಳುನಾಡಿನ ಸಿಎಂ ಆಗಿ ಚಿನ್ನಮ್ಮ ರನ್ನು ಆಯ್ಕೆ ಮಾಡಲಾಗಿದೆ.
 
ಈಗಾಗಲೇ ಶಶಿಕಲಾ ನಟರಾಜನ್ ಅವರು ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿದ್ದಾರೆ.

LEAVE A REPLY

Please enter your comment!
Please enter your name here