"ಸತ್ಯ" ಬ್ರೂಯಾತ್-ಪ್ರಿಯಂ ಬ್ರೂಯಾತ್!"

0
883

ಮಸೂರ ಅಂಕಣ: ಆರ್ ಎಂ ಶರ್ಮ
ಸಂಸ್ಕೃತದ ಮಾತಿದೆ-“ಸತ್ಯಂ ಬ್ರೂಯಾತ್,ಪ್ರಿಯಂ ಬ್ರೂಯಾತ್
ನ ಬ್ರೂಯಾತ್ ಸತ್ಯಮಪ್ರಿಯಂ ಪ್ರಿಯಂಚ ನಾನೃತಂ
ಏತದ್ಧಿ ಸನಾತನಂ”
ಇದರ ಸ್ಪಷ್ಟ ಅಥ೯-ಸತ್ಯವನ್ನೇ ಹೇಳು,ಪ್ರಿಯವಾದುದನ್ನು ಹೇಳು,ಖಂಡಿತವಾಗಿಯೂ-
ಅಪ್ರಿಯವಾದ ಸತ್ಯವನ್ನಾಗಲೀ,ಪ್ರಿಯವಾದ ಸುಳ್ಳನ್ನು ಹೇಳಬೇಡಾ ಎಂತ.
ಇಲ್ಲಿ ದ್ವಂದ್ವವಿಲ್ಲವೇ ಎಂದರೆ-ಖಂಡಿತವಾಗಿ ಇದೇ ಎಂತಲೇ ನಮ್ಮ ಸ್ಪಷ್ಟ ಅಭಿಪ್ರಾಯ.
ಇರಲಿ ನಾವು ಸತ್ಯದ ಬಗೆಗೆ ಚಚಿ೯ಸೋಣ.
ಅಲ್ಲಿ ಸತ್ಯದ ಜತೆಗೆ ಪ್ರಿಯವಾದುದು ಇದೆಯೇ ಎಂತಲೂ ನೋಡೋಣ.
ಈಗ ಭಾರತದಲ್ಲಿ ಪ್ರಧಾನ ಮಂತ್ರಿಗಳ ಅಭಿಯಾನ-ಸ್ವಛ್ಚ ಭಾರತ ಮೇರು ಸಾಧನೆಗೆ ಜನಸ್ಪಂದನ-ಹಿತವಾದ ಪೈಪೋಟಿ,ತಾಕಿ೯ಕ ಚಚೆ೯ ಮುಂತಾದವು ಪ್ರಚಲಿತವಿದೆ.
ಸಾರಾಂಶವೆಂದರೆ ಸತ್ಯವನ್ನು ಮೆಚ್ಚಿಸಲಾಗದಿದ್ದರೂ ಸದಾ ಸುಳ್ಳನ್ನೇ ಪರಮ ಬಂಡಳವನ್ನಾಗಿ ಮಾಡಿಕೊಂಡು ಆಡಳಿತ ಯಂತ್ರಗಳು ಕೆಲಸಗಳನ್ನು ಮಾಡುತ್ತಿವೆ-
ಅವೆಲ್ಲಾ ಎಲ್ಲಾ ರೀತಿಯ ಮಾಧ್ಯಮಗಳಲ್ಲಿಯೂ ಸುದ್ದಿಗಳಾಗಿ-ಮೀರಿ ಕೇಳಿದರೆ ಸ್ಫೋಟಕವಾದ ಸುದ್ದಿಗ್ಳಾಗಿ ಮೆರೆಯುತ್ತಿವೆ.
ಇದು ಯಾರಿಗೆ ಹಿತ-ಏಕೆ ಹಿತ-ಪರಾತ್ಪರಕ್ಕೇ ತಿಳಿದದ್ದು.
ಇಲ್ಲಿ ನೋಡಿರಿ-ಕನಾ೯ಟಕದ ಮುಖ್ಯ ಆಡಳಿತಗಾರರಾದ ಮಾನ್ಯ ಮುಳ್ಯಮಂತ್ರಿಗಳು-ಕನಾ೯ಟಕವು ಸ್ವಛ್ಚ ಭಾರತ ಅಭಿಯಾನದಲ್ಲಿ ಮುಂಚೂಣಿಯಲ್ಲಿದೆ ಎಂತ
ಸುದ್ದಿಗಾರರ ಮುಂದೆ ಪ್ರತಿಪಾದನೆ!
ಆದರೆ ಅಪವಾದವೆಂದರೆ-ಕನಾ೯ಟಕವು ೧೯ ನೇ ಸ್ಥಾನದಲ್ಲಿದೆ ಎಂತ ಖಚಿತವಾದ ಪ್ರತ್ಯುತ್ತರ!
ಮತ್ತೂ ನೋಡಿರಿ ಕೇರಳ=-ದೇವ ನಾಡೆಂತಲೇ ಹೆಸರುವಾಸಿಯಾದ ಈ ನೆಲದ ಹಸಿ ಸುಳ್ಳು-%೯೯ ಗುರಿಸಾಧಿಸಿದೇ ಎಂಬ ಬಲವಾದ ಸಾಕ್ಷ್ಯುತ್ತರಕ್ಕೆ ಸವಾಲಾಗಿ ಮೆರೆದ ಸತ್ಯವನ್ನು-
ಮೊನ್ನೆಯಷ್ಟೇ ವಯಸ್ಸಿನ ಒಬ್ಬ ಸ್ತ್ರೀಯನ್ನು ಕೇರಳದ ತಡಲತಡಿಯಲ್ಲಿ ಬೀದಿನಾಯಿಗಳ ಗಡಣ-ಕಚ್ಚಿ ಕಚ್ಚಿ ಹೆಣಮಾಡಿತು ಎಂಬ ಸತ್ಯಾತ್ ಸತ್ಯದ ಸುದ್ದಿಯನ್ನು.
ಇದು ಇಡೀ ದಿನ ಸುದ್ದಿಮಾಧ್ಯಮಗಳ ಪ್ರಧಾನ ಪ್ರಸಾರದ ಆಂತಯ೯-ಐಶ್ವ್ಯ೯ ಕೂಡಾ.
ಇಲ್ಲಿನ ಸತ್ಯ-ಅನ್ಯರಂತೆ-ಅನನ್ಯವಾಗಿ ಮನೆಗಳಲ್ಲಿ ಸ್ವಂತ ಶೌಚಾಲಯದ ವ್ಯವಸ್ಥೆ ಇಲ್ಲದ ಮನೆಮಂದಿ-ಬಯಲು-ಸಮುದ್ರದ ದಡಗಳು ಇಂತಹವನ್ನೇ ಅವಲಂಬಿಸಿ ತಮ್ಮ ಅಗತ್ಯಗಳನ್ನು ದೈನಿಕವಾಗಿ-ನೈಷ್ಟಿಕವಾಗಿ% ೧೦೦ ಲಾಭಪಡೆಯುತ್ತಿದ್ದಾರೆ ಎಂತ ಅಲ್ಲಿನ ಬಲಾಢ್ಯವಾದಸುದ್ದಿಸಂಸ್ಥೆಗಳ ವಾದ.
ಅವು ಹಾಗಿರಲಿ,ಅಲ್ಲಿನ ಆಡಳಿತದ ಮುಖ್ಯಸ್ಥ-ಮುಖ್ಯಮಂತ್ರಿಮಹೋದಯರ ಮಾತು-ಹಾವಳಿಗೈದ ಬೀದಿ ನಾಯಿಗಳ-ತಥಾಕಥಿತ ಹೆಂಗಸಿನ ಸಾವಿಗೆ ಪ್ರಚೋದಕ-ಶ್ವಾನ ಸಮುದಾಯದವನ್ನೇ ಮಾರಣಹೋಮ ಮಾಡಿಸಿ ಇಲ್ಲವೆನಿಸುವ ಕಾಯ೯ತಂತ್ರ!
ಸ್ವಛ್ಚಸತ್ಯಕ್ಕೆ ಸವಾಲಾದ-ಮಲವಿಸಜ೯ನೆಗೆ ಬಯಲು-ಸುಳ್ಳನ್ನಲವೇ ಬಯಲು ಮಾಡಿದ್ದಿಲ್ಲಿ?
ಅಲ್ಲಿಗೆ %೯೦ ರ ಸಾಧನೆ ಟೊಳ್ಳಲ್ಲದೇ ಗಟ್ಟಿಯೇನು?
ಸತ್ಯವೇ ದೇವರು-ದೇವರನಾಡು-ಕೇರಳ ರಾಜ್ಯ-ಅಲ್ಲಿ ಸುಳ್ಳು ಎಲ್ಲಾ ಮತ್ತೇನಿಲ್ಲ.
ಸುಳ್ಳು ಕಪಟ ಅರಿಯದ ಪರಮ ಸಾಧು ಪ್ರಾಣಿ-ಗೋವು-ಗೋವಿನಹಾಡು-
“ಸತ್ಯವೇ ತಾಯಿ, ಸತ್ಯವೇ ತಂದೆ,
ಸತ್ಯವಾಕ್ಯಕ್ಕೆ ತಪ್ಪಿನಡೆದರೆ ಮೆಚ್ಚನಾ ಪರಮಾತ್ಮ!”
ಎಂಬ ವೇದವಾಕ್ ದೇವರನಾಡಿನಲ್ಲಿ ಮಣ್ಣುಮುಕ್ಕಿತೆ?
ಹೌದು ಇದೇ ಕಣ್ಣು ಕುಕ್ಕುವ ಸಂಗತಿಯು-ಸತ್ಯವಾಗಿಯೂ.
ಭಾರತದ ಏಕಮೇವಾದ್ವಿತೀಯ ಧ್ಯೇಯವಾಕ್-
“ಸತ್ಯಮೇವ ಜಯತೇ!”
ಮಣ್ಣಾಗಿ ಗೋರಿಯಾಯಿತಲ್ಲವೇ?
ಗೋತಿ ಘೋರವೇ-ಹಾರವೇ-ಹರಣವೇ?
ಹೂರಣ-ಪೂರಣ-ತೋರಣ-ಓರಣವೇ-ಒಪ್ಪೇ-ಒಪ್ಪವೇ-
ಬೆಪ್ಪರೇ-ಭ್ರಷ್ಟರೆ-ಶಿಷ್ಟರೆ-ಸ್ಪಷ್ಟವಾಗಿ ಹೇಳಬೇಕು-ಉಳಿದವರು ಕೇಳಬೇಕು ಅಷ್ಟೇ!
ಸತ್ಯದಬಗೆಗೆ ಹೇಳುವುದಾದರೆ-
“ಸತ್ಯಾತ್ ನ ಪ್ರಮದಿತವ್ಯಂ!”
“ಸತ್ಯಮೇವ ಜಯತೇ ನಾನೃತಂ!”
“ಋಚಂ ವಚ್ಮಿ ಸತ್ಯಂ ವಚ್ಮಿ!”
ಸಾಧನೆಗೆ ಸುಳ್ಳು-ಸತ್ಯಕ್ಕೆ ಹುಣ್ಣು-ಅಲ್ಲಿಗೆ ಅನೃತವೇ ಸವ೯ಸ್ವ!
ದೇವರಲ್ಲಿ ಭಯವಿಲ್ಲ,ದೇವರನೆಲದಲ್ಲಿ ಸತ್ಯಕ್ಕೆ ನೆಲೆಯಿಲ್ಲ-ಬೆಲೆಯಿಲ್ಲ-ಬಳಿಯಿಲ್ಲ-ಸುಳ್ಳೆ ಬಳುವಳಿ
ಇದೇ ಆ ನೆಲದ ಸಾಗುವಳಿ!
ಸ್ವಛ್ಚ-ಈಗ-ಆಯಿತು-ಸ್ವೇಛ್ಚ-ಅಭಿಯಾನ-ಅವಮಾನಕ್ಕೆ ಸಂದಿತು.
ಈಗ ಭಾರತದಲ್ಲಿ-ಸುಳ್ಳಿನ-ಅಬ್ಬರ-ಉಬ್ಬರ-ಇದೇ ಗೊಬ್ಬರ-ಅಲ್ಲಿಗೆ ಬೆಳೆ-ಸುಳ್ಳಿನದು-ಬೆಲೆಯಿಲ್ಲದು-ಭಲೆಯಲ್ಲದು.
ಇನ್ನೇನಿದೆ ಕೊಂಡಾಡಲು-ಸತ್ಯವನ್ನೇ ಕೊಂದಮೇಲೆ?
ಸಾವಿನ ನಂತರ-ಹೇಣ-ಹೇಯ-ಎಲ್ಲಿದೆನ್ಯಾಯ?
ಭಾರತದ ಸನಾತನ ಧಮ೯-ಸತ್ಯ ಹೇಳು-ಆಗಿದೆ ಅನಾಥ-
ಕಾರಣ-ಹೇಳುವರಿಲ್ಲ-ಕೇಳುವರಿಲ್ಲ!
ಅಲ್ಲಿಗೆ ಸತ್ಯವಲ್ಲವೇ ಪರಾತ್ಪರದ ಉವಾಚ-
“ಆಸ್ಚ್ಯ೯ವತ್ ಪಶ್ಯತಿ ಕಶ್ಚಿದ್ದೇನಂ
ಆಶ್ಚಯ೯ವತ್ ವದತಿ ಚಾನ್ಯಃ!”
“ಸತ್ಯಂ ಶಿವಂ ಸುಂದರಂ”-
ಇಲ್ಲಿ ಸತ್ಯದ ಕಾಲುಮುರಿಯಿತು-ಮತ್ತೇಲ್ಲಿ-ಶಿವ,ಸುಂದರ? ಹೊಸ ಉದಯಕ್ಕೆ ಕಾಯದೇ
ಯಾವುದು ಬಣ್ಧುರ-ಬಂಧು-ಸತ್ಯವೇ ಬಂಧಿಯಾದಮೇಲೆ?
ಅಲ್ಲಿಗೆ ಸ್ವಛ್ಚ ಅಭಿಯಾನದ ಅಸ್ತಮಾನ!
ಮತ್ತೆ ಹೊಸ ಉದಯಕ್ಕೆ ಕಾಯದೇ ಮತ್ತೇನಿದೆ ಪರಿಹಾರ-ಉಪಾಯ?
ಅಪಾಯ ಆಗದಿರಲು ಆದಾಯ-ಈಗ ಎದ್ದೇಳಬೇಕಿದೆ ಜನಸಮುದಾಯ-ಸ್ವಛ್ಚ ಸತ್ಯಕ್ಕೆ-
ಉಳಿದವನ್ನು ನೇಪಥ್ಯಕ್ಕೆ ಸರಿಸಿ-ಸಲ್ಲಲು-ನಿಲ್ಲಲು ಭದ್ರವಾಗಿ!
ಆರ್.ಎಂ.ಶಮ೯,
[email protected]

LEAVE A REPLY

Please enter your comment!
Please enter your name here