ಸತ್ಯಾಗ್ರಹ

0
229

ವರದಿ: ವಿವೇಕ್ ಸಿ
ದಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್  ಇಂದು ದೇಶದ ವೈದ್ಯಕೀಯ ಕ್ಷೇತ್ರದ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತಿದೆ. ‘ಇಂಟರ್ ನ್ಯಾಶನಲ್ ಟಾಲರೆನ್ಸ್ ಡೇ ‘ ದಿನದಂದು ಏಕಕಾಲದಲ್ಲಿ ದೇಶದ 500 ಕ್ಕೂ ಹೆಚ್ಚು ನಗರಗಳಲ್ಲಿ ಬೆಳಗ್ಗೆ 11.00 ಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಐಎಂಎ ಸ್ಟಾಪ್ ಎನ್ಎಂಸಿ ಸತ್ಯಾಗ್ರಹ ನಡೆಯಿತು.
 
 
ಸತ್ಯಾಗ್ರಹದಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ರಾಷ್ಟ್ರೀಯ ಐಎಂಎ ಅಧ್ಯಕ್ಷ ಡಾ.ಎಸ್.ಎಸ್.ಅಗರ್ವಾಲ್ ಮತ್ತು ಮಾಜಿ ಅಧ್ಯಕ್ಷ ಡಾ ಎ. ಮಾರ್ಥಂಡ ಪಿಲೈ , ಇಂಡಿಯನ್ ಮೆಡಿಕಲ್ ಅಸೊಸಿಯೇಶನ್ ನ ಎಲೆಕ್ಟ್ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ. ಕೆ.ಕೆ ಅಗರ್ವಾಲ್ ರಾಜ್ಯ ಐಎಂಎ ಸಂಸ್ಥೆಯ ಅಧ್ಯಕ್ಷ ಡಾ. ಜಿ.ಎನ್. ಪ್ರಭಾಕರ ಹಾಗೂ ಬೆಂಗಳೂರು ಐಎಂಎ ಸಂಸ್ಥೆಯ ಅಧ್ಯಕ್ಷ ಡಾ. ವೀರಣ್ಣ ಸೇರಿ ಪ್ರತಿಭಟನೆಯಲ್ಲಿ ದೇಶದಾದ್ಯಂತ 1 ಲಕ್ಷಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here