ಸಜ್ಜಿಗೆ ರೊಟ್ಟಿ / ರುಲಾವಾ ದೋಡ್ಡಕ

0
661

ವಾರ್ತೆ ರೆಸಿಪಿ
ಬೇಕಾಗುವ ಪದಾರ್ಥಗಳು:
1 ಲೋಟ ಮೀಡಿಯಂ ರವೆ, 1/2 ಲೋಟ ಚಿರೋಟಿ ರವೆ, 2 ಹಸಿಮೆಣಸು, 2ತುಂಡು ಹಸಿ ಶುಂಟಿ, 2 ಈರುಳ್ಳಿ, ಸ್ವಲ್ಪ ಕಾಯಿತುರಿ, ಕೊತ್ತಂಬರಿ ಸೊಪ್ಪು, 1 ಕಳಿತ ಬಾಳೆಹಣ್ಣು 1/2ಲೋಟ ಮೊಸರು/ ಮಜ್ಜಿಗೆ, ರುಚಿಗೆ ಉಪ್ಪು, ಸಕ್ಕರೆ, ಕಲೆಸಲು ನೀರು, ಕಾಯಿಸಲು ಎಣ್ಣೆ.
 
 
 
 ಮಾಡುವ ವಿಧಾನ:
ಈರುಳ್ಳಿ, ಹಸಿಮೆಣಸು, ಶುಂಟಿ ಕೊತ್ತಂಬರಿಸೊಪ್ಪನ್ನು ಸಣ್ಣಗೆ ಹೆಚ್ಚಿಡಬೇಕು. ಒಂದು ಪಾತ್ರೆಯಲ್ಲಿ ಮೊಸರನ್ನು ಹಾಕಿ, ಅದರಲ್ಲಿ ಹೆಚ್ಚಿಟ್ಟಿದನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು. ನಂತರ ಆ ಮಿಶ್ರಣಕ್ಕೆ ರವೆಯನ್ನು ಸೇರಿಸಿ ಹಿಡಿಸುವಸ್ಷ್ಟು ನೀರನ್ನು ಹಾಕಿ, ಜೊತೆಗೆ ಉಪ್ಪು,ಸಕ್ಕರೆ, ಕಾಯಿತುರಿ, ಕೊತ್ತಂಬರಿ ಸೋಪ್ಪನ್ನು ಹಾಕಿ ಮಿಶ್ರಣವನ್ನು ತಯಾರಿಸಿ,  ಹದಿನೈದು ನಿಮಿಷ ಮುಚ್ಚಿಡಬೇಕು. ರವೆ ಚೆನ್ನಾಗಿ ನೆನೆದಿದ್ದಲ್ಲಿ ಹಿಟ್ಟು ತಯಾರಾಗಿದೆ ಎಂದು ಅರ್ಥ. ಈಗ ಕಾವಲಿಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಸವರಿ, ಒಂದು ಸವಟು ಹಿಟ್ಟನ್ನು ಹಾಕಿ, ಕೈಗೆ ಸ್ವಲ್ಪ ನೀರನ್ನು ತಾಗಿಸಿ, ಕೈಯಿಂದ ಹಿಟ್ಟು ತಟ್ಟಿ ಮುಚ್ಚಳ ಮುಚ್ಚಬೇಕು. ಒಂದು ಬದಿ ಬೆಂದ ಬಳಿಕ, ಸ್ವಲ್ಪ ಎಣ್ಣೆಯನ್ನು ಸವರಿ ಮಗುಚಿ ಹಾಕಿ ರೊಟ್ಟಿಯನ್ನು ಕಾಯಿಸಬೇಕು. ಇದನ್ನು ಚಟ್ನಿ, ಸಂಬಾರನೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.

LEAVE A REPLY

Please enter your comment!
Please enter your name here