ಸಚಿವ ರಮಾನಾಥ ರೈ ಪ್ರವಾಸ

0
339

 
ಮ0ಗಳೂರು ಪ್ರತಿನಿಧಿ ವರದಿ
ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಏಪ್ರಿಲ್ 8ರಿಂದ 10ರವರೆಗೆ ಜಿಲ್ಲೆಯಲ್ಲಿ ಕೈಗೊಳ್ಳುವ ಪ್ರವಾಸ ವಿವರ ಇಂತಿವೆ;
ಇಂದು ಬೆಳಿಗ್ಗೆ 11 ಪುತ್ತೂರು ಯುವ ಬಂಟರ ಸಂಘದ ಬಂಟರ ದಿನಾಚರಣೆ, ಸಂಜೆ 4.30- ಮುಖ್ಯಮಂತ್ರಿಗಳ ಜಿಲ್ಲಾ ಭೇಟಿ ಬಗ್ಗೆ ಮೂಡಾ ಕಚೇರಿಯಲ್ಲಿ ಪೂರ್ವಭಾವಿ ಸಭೆ, 6 ಗಂಟೆ- ಮೊಗರನಾಡು ಸಾವಿರ ಸೀಮೆಯ ನಿಟಿಲಾಕ್ಷ ದೇವಸ್ಥಾನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, 6.30- ಮಂಚಿ ನಾಟಕೋತ್ಸವ ಉದ್ಘಾಟನೆ.
 
 
ಏ.9ರಂದು ಗೋಳ್ತಮಜಲಿನಲ್ಲಿ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಉದ್ಘಾಟನೆ, 9.30- ಕನ್ಯಾನ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮ, ಸಂಜೆ 4 ಮೂಡಬಿದ್ರೆ ಸೇವಾ ಸಹಕಾರಿ ಬ್ಯಾಂಕ್ ಶತಮಾನೋತ್ಸವ, 5- ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ ರೆಡ್ ಎಫ್ಎಂ ವತಿಯಿಂದ ತುಳು ಫಿಲ್ಮ್ ಅವಾರ್ಡ್ ಕಾರ್ಯಕ್ರಮ, 7.30- ಬೊಳ್ಳಾಯಿ ಕಂಚಿಲ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಇದರ ವಾರ್ಷಿಕೋತ್ಸವ ಅಂಗವಾಗಿ ಬುರ್ದಾ ಮಜ್ಲಿಸ್ ಕಾರ್ಯಕ್ರಮ.
 
 
ಏ.10ರಂದು ಬೆಳಿಗ್ಗೆ 10- ಮಹಾದೇವ ಮಿತ್ರ ಮಂಡಳಿ, ಕಂಚಿಲ ಮಂಚಿ ಇದರ ಕಬಡ್ಡಿ ಪಂದ್ಯಾಟ ಉದ್ಘಾಟನೆ, 11- ಮಂಗಳೂರು ಪುರಭವನದಲ್ಲಿ ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಸಮಾವೇಶ, ಸಂಜೆ 5.30- ದ.ಕ. ಜಿಲ್ಲಾ ಲೇವಾದೇವಿ ಹಾಗೂ ಗಿರವಿದಾರರ ಒಕ್ಕೂಟ ಉದ್ಘಾಟನೆ, ಕದ್ರಿ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರ, ಸಂಜೆ 6- ಏಕತಡ್ಕ ಒಳಮೊಗರು ಹಿ.ಪ್ರಾ.ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here