ಸಚಿವ ರಮಾನಾಥ ರೈ ಆರೋಗ್ಯ ಚೇತರಿಕೆ

0
595

ಮ0ಗಳೂರು ಪ್ರತಿನಿಧಿ ವರದಿ
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
 
ramanath rai varte
ಅವರು ಇಂದು ಸಚಿವ ರಮಾನಾಥ ರೈ ಅವರು ದಾಖಲಾಗಿರುವ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ, ಸಚಿವರ ಆರೋಗ್ಯ ವಿಚಾರಿಸಿದರು. ರಮಾನಾಥ ರೈ ಆರೋಗ್ಯಯುತರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು 3 ದಿನಗಳ ವಿಶ್ರಾಂತಿಗೆ ಸೂಚಿಸಿದ್ದು, ನಂತರ ಆಸ್ಪತ್ರೆಯಿಂದ ಉಸ್ತುವಾರಿ ಸಚಿವರು ಬಿಡುಗಡೆಯಾಗಲಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here