'ಸಕಾನ್' ಜೊತೆ ತಿಳಿವಳಿಕೆ ಒಪ್ಪಂದಕ್ಕೆ ಗೀತಂ ಸಹಿ

0
245

 
ಬೆಂಗಳೂರು ಪ್ರತಿನಿಧಿ ವರದಿ
ಇಕೋಟಾಕ್ಸಿಕಾಲಜಿ ಸಂಶೋಧನೆ ಕ್ಷೇತ್ರದಲ್ಲಿ ‘ಸಕಾನ್’ ಜೊತೆ ತಿಳಿವಳಿಕೆ ಒಪ್ಪಂದಕ್ಕೆ ಗೀತಂ ಸಹಿ
ಗೀತಂ ವಿಶ್ವವಿದ್ಯಾಲಯ ಮತ್ತು ಭಾರತ ಸರಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದ(ಎಂಒಇಎಫ್) ನೈಪುಣ್ಯ ಕೇಂದ್ರವಾದ ಸಲೀಮ್ ಸೆಂಟರ್ ಫಾರ್ ಆರ್ನಿಥಾಲಜಿ ಆಂಡ್ ನ್ಯೂಟ್ರಲ್ ಹಿಸ್ಟರಿ (ಎಸ್ಎಸಿಒಎನ್)ನ ಜೊತೆ ಸಂಶೋಧನೆ ಸಹಯೋಗದ ತಿಳಿವಳಿಕೆ ಒಪ್ಪಂದ ಪತ್ರ(ಎಂಒಯು)ಕ್ಕೆ ಸಹಿ ಹಾಕಿವೆ.
 
 
 
ಇಕೋಟಾಕ್ಸಿಕಾಲಜಿ ಮತ್ತು ಬಯೋಮಾರ್ಕರ್ ಸಂಶೋಧನೆ ಕ್ಷೇತ್ರದಲ್ಲಿ ವೈಜ್ಞಾನಿಕ ಪಾಲ್ಗೊಳ್ಳುವಿಕೆ ಮತ್ತು ಜಂಟಿ ಪ್ರಕಾಶನ, ಈ ಕ್ಷೇತ್ರದಲ್ಲಿ ಸಾಂಸ್ಥಿಕ ಹಾಗೂ ವ್ಯಕ್ತಿಗತ ಬಲವರ್ಧನೆಯನ್ನು ಉದ್ದೇಶವನ್ನು ಈ ತಿಳಿವಳಿಕೆ ಪತ್ರವು ಹೊಂದಿದೆ.
 
 
 
ಗೀತಂ ವಿವಿಯ ಉಪ ಕುಲಪತಿ ಪ್ರೊ ಎಂ. ಎಸ್. ಪ್ರಸಾದ ರಾವ್, ಯುಜಿಸಿ ವ್ಯವಹಾರಗಳ ನಿರ್ದೇಶಕ ಪ್ರೊ ಚಿ. ರಾಮಕೃಷ್ಣ, ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನ ಪ್ರಿನ್ಸಿಪಾಲ್ ಪ್ರೊ. ಎನ್. ಲಕ್ಷ್ಮಣದಾಸ್ ಮತ್ತು ಗೀತಂ ಬೆಂಗಳೂರು ಕ್ಯಾಂಪಸ್ ನಿರ್ದೇಶಕ ಪ್ರೊ. ಕೆ. ವಿಜಯಭಾಸ್ಕರ ರಾಜು ಅವರ ಉಪಸ್ಥಿತಿಯಲ್ಲಿ ರಿಜಿಸ್ಟ್ರಾರ್ ಪ್ರೊ. ಎಂ. ಪೋಥರಾಜು ಮತ್ತು ಸಕಾನ್ ಹಿರಿಯ ಮುಖ್ಯ ವಿಜ್ಞಾನಿ ಡಾ. ಎಸ್. ಮುರಳೀಧರನ್ ತಿಳಿವಳಿಕೆ ಪತ್ರವನ್ನು ಹಸ್ತಾಂತರಿಸಿಕೊಂಡರು.
 
 
 
 
ಕಾರ್ಯಕ್ರಮದಲ್ಲಿ ಮಾತನಾಡಿದ ಸಕಾನ್ ವಿಜ್ಞಾನಿ ಡಾ. ಎಸ್. ಮುರಳೀಧರನ್, ಸಂಶೋಧನೆ, ಶಿಕ್ಷಣ ಮತ್ತು ಹಕ್ಕಿಗಳ ಜೊತೆಗೆ ನಾಗರಿಕರ ಸಹಭಾಗಿತ್ವದ ಮೂಲಕ ಭಾರತದ ಜೀವ ವೈವಿಧ್ಯ ಮತ್ತು ಇದರ ಉಳಿಕೆಯ ಉದ್ದೇಶವನ್ನು ಸಕಾನ್ ಯೋಜನೆ ಹೊಂದಿದೆ ಎಂದು ಹೇಳಿದರು. ಪ್ರಮುಖ ಅರಣ್ಯ ವ್ಯವಸ್ಥಾಪಕರು, ವನ್ಯಜೀವಿ ವಿಜ್ಞಾನಿಗಳು, ಪರಿಸರ ತಜ್ಞರು ಮತ್ತು ನೀತಿ ನಿರೂಪಕರನ್ನು ಒಳಗೊಂಡ ಸಂಶೋಧನೆ ಸಲಹಾ ಸಮಿತಿಯನ್ನು ರಚಿಸಲಾಗಿದ್ದು, ಇದರ ಅಡಿಯಲ್ಲಿ ಸಕಾನ್ ಸಂಶೋಧನೆ ಚಟುವಟಿಕೆ ನಡೆಯುತ್ತಿದೆ ಎಂದವರು ಮಾಹಿತಿ ನೀಡಿದರು. ಏವಿಯನ್ ಇಕಾಲಜಿ, ವೆಟ್ಲ್ಯಾಂಡ್ ಇಕಾಲಜಿ, ಟೆರಿಸ್ಟೇರಿಯಲ್ ಇಕಾಲಜಿ, ಇಕೋಟಾಕ್ಸಿಕಾಲಜಿ, ಪರಿಸರದ ಮೇಲಾಗುವ ಪರಿಣಾಮಗಳ ಅಧ್ಯಯನ, ಜೀವ ವಿಜ್ಞಾನದ ಉಳಿಕೆ, ಗ್ರಂಥಾಲಯ ಮತ್ತು ಮಾಹಿತಿ ಕೂಡ ಸಂಶೋಧನೆಯ ವ್ಯಾಪ್ತಿಗೆ ಬರುತ್ತದೆ ಎಂದವರು ಹೇಳಿದರು.
ಉಪ ಕುಲಪತಿ ಪ್ರೊ. ಎಂ. ಎಸ್. ಪ್ರಸಾದ ರಾವ್, ಎರಡು ಸಂಸ್ಥೆಗಳ ನಡುವಿನ ಈ ಒಪ್ಪಂದವು ಹೊಸ ಕ್ಷೇತ್ರಗಳತ್ತ ಗಮನ ಹರಿಸುವ ಮೂಲಕ ಸಮಾಜಕ್ಕೆ ಒಳಿತನ್ನು ಉಂಟು ಮಾಡಲು ನೆರವಾಗುವ ಭರವಸೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here