ರಾಜ್ಯ

ಸಕಲೇಶಪುರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕವಯಿತ್ರಿ ಫರ್ಜಾನ ರಿಜ್ವಾನ್ ನೇಮಕ

ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ), ಹಾಸನ ಸಂಸ್ಥೆಯು ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತನ್ನ ಘಟಕಗಳನ್ನು ಪ್ರಾರಂಭಿಸಿ ಕಾರ್ಯೋನ್ಮುಖವಾಗಿದ್ದು, ಹಾಸನ ಜಿಲ್ಲಾ ಘಟಕವು ಸಮುದ್ರವಳ್ಳಿ ವಾಸುರವರ ನೇತೃತ್ವದಲ್ಲಿ ಕಳೆದ ಒಂದೂವರೆ ವರ್ಷದಿಂದಲೂ ಕೆಲಸ ಮಾಡುತ್ತಾ ಬರುತ್ತಿದೆ. ಈಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಪಸರಿಸುವ ಸಲುವಾಗಿ ತಾಲ್ಲೂಕು ಘಟಕಗಳನ್ನು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕವಯಿತ್ರಿ, ಗಾಯಕಿ ಹಾಗೂ ಸಂಘಟಕಿಯಾದ ಶ್ರೀಮತಿ ಫರ್ಜಾನಾ ರಿಜ್ವಾನ್ ಅವರನ್ನು ಜಿಲ್ಲಾಧ್ಯಕ್ಷರಾದ ವಾಸು ಸಮುದ್ರವಳ್ಳಿ, ಗೌರವಾಧ್ಯಕ್ಷರಾದ ಕುಮಾರ್ ಛಲವಾದಿ, ಉಪಾಧ್ಯಕ್ಷರಾದ ಹೇಮರಾಗ, ಗಂಜಲಗೂಡು ಗೋಪಾಲೇಗೌಡ, ಕೋಶಾಧ್ಯಕ್ಷರಾದ ಗೀತಾ ಕೆ.ವೈ ಮುಂತಾದ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಕಲೇಶಪುರ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ದ್ಯಾವನೂರು ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comment here