ರಾಜ್ಯ

ಸಂಸ್ಕೃತಿ ಭರಿತ ಸಮಾಜ ಕಟ್ಟೋಣ – ಶ್ರೀ ಈಶ ವಿಠಲ ದಾಸ ಸ್ವಾಮೀಜಿ

ಸಂಸ್ಕೃತಿ ಭರಿತ ಸಮಾಜ ಕಟ್ಟೋಣ – ಶ್ರೀ ಈಶ ವಿಠಲ ದಾಸ ಸ್ವಾಮೀಜಿ

ಮುಂಬಯಿ : ಇಂದು ಮಕ್ಕಳಲ್ಲಿ ಸಂಸ್ಕೃತಿಯ ಪ್ರಜ್ನೆ ಇಲ್ಲದಂತಾಗಿದೆ. ಇಲ್ಲಿಯವರು ತುಳು ನಾಡಿನ ಸಂಸ್ಕೃತಿಯನ್ನು ಉಳಿಸುತ್ತಿದ್ದಾರೆ. ತುಳು ನಾಡಿನವರು ಮುಂಬಯಿಗರಾದ ನಿಮ್ಮನ್ನು ನಂಬಿದ್ದಾರೆ. ಮುಂಬಯಿಗರಿಂದ ತುಳು ನಾಡಿನ ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಯಾಗುತ್ತಿದೆ. ಇಂದಿನ ಮಕ್ಕಳಲ್ಲಿ ಧಾರ್ಮಿಕ ಪ್ರಜ್ನೆಯನ್ನು ಮೂಡಿಸಬೇಕಾಗಿದ್ದು ನಾವೆಲ್ಲರೂ ಸೇರಿ ಸಂಸ್ಕೃತಿ ಭರಿತ ಸಮಾಜವನ್ನು ಕಟ್ಟೋಣ ಎಂದು ಕೇಮಾರು ಸಂದೀಪನಿ ಸಾದನ ಆಶ್ರಮದ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಯವರು ನುಡಿದರು.

ಡಿ. 30ರಂದು ದಾದರ್ ಪಶ್ಚಿಮ ಪರೇಲ್ ಕಾಮ್ಗಾರ್ ಮೈದಾನದಲ್ಲಿ ನಡೆದ ವರ್ಲಿಯ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ನ 25ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ ಹಾಗೂ ಬೆಳ್ಳಿ ಹಬ್ಬ ಸಂಭ್ರಮದ ಸತ್ಸಂಗ ಸಮಾರಂಭದಲ್ಲಿ ಆಶೀರ್ವಚನ ಮಾಡಿದ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಯವರು ಮಕ್ಕಳಿಗೆ ಸಂಸ್ಕೃತಿಯ ಪ್ರಜ್ನೆ ಇಲ್ಲದಾಗಿದೆ. ಪರೀಕ್ಷೆಯಲ್ಲಿ ಒಂದಿಷ್ಟು ಮಾರ್ಕು ಕಡೆಮೆಯಾದಲ್ಲಿ ಮಕ್ಕಳು ತಮ್ಮ ಜೀವವನ್ನೇ ಕಳೆಯುವ ಪ್ರಸಂಗವನ್ನು ಕಾಣುತ್ತೇವೆ. ತಾಳ್ಮೆ ಎಂಬುದು ಇಲ್ಲದಾಗಿದೆ. ಮಕ್ಕಳಿಗೆ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡೋಣ. ಜೀವನಕ್ಕೆ ಗುರಿ ಇರಲಿ. ಹಿಂದೂ ಸಂಸ್ಕ್ಟುತಿಯನ್ನು ಉಳಿಸೋಣ. ಶಭರಿಮಲೆಗೆ ಹೋಗುವ ಉದ್ದೇಶ ಹೆಚ್ಚಿನವರಿಗೆ ತಿಳಿದಿಲ್ಲವಾಗಿದ್ದು ಕೆಲವರು ಶಭರಿಮಲೆಯಿಂದ ಹಿಂತಿರುಗಿದ ನಂತರ ಮಧ್ಯ ಸೇವನೆಯಂತಹ ತನ್ನ ಮೊದಲಿನ ದುರಾಭ್ಯಾಸವನ್ನು ಮುಂದುವರಿಸುದನ್ನು ನೋಡುತ್ತಿರುವುದು ಅಸಮದಾನಕರ ಸಂಗತಿಯಾಗಿದೆ. ನಮ್ಮ ಆಚಾರ, ವಿಚಾರ ಹಾಗೂ ಸಂಸೃತಿಯನ್ನು ಉಳಿಸಲು ಮಹಿಳೆಯರೂ ಕ್ರೀಯಾಶೀಲರಾಗಬೇಕಾಗಿದೆ. ನಾವು ಯಾವ ಜಾತಿಯವರಾದಗೂ ನಾವು ತುಳುವರು ಎಂಬ ಅಭಿಮಾನವಿರಲಿ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅಥಿಗಳನ್ನು ಸ್ವಾಮೀಜಿಯವರು ಶಾಲು ಹೊದಿಸಿ ಗೌರವಿಸಿದರು. ಗೌರವ ಅಥಿತಿಗಳಾಗಿ, ಬೋಂಬೆ ಬಂಟ್ಸ ಅಸೋಷಿಯೇಶನಿನ ಅಧ್ಯಕ್ಷ ನ್ಯಾ. ಸುಭಾಶ್ ಶೆಟ್ಟಿ, ಟ್ರಿಕೋನ್ ಪೋಲಿಮರ್ಸ್ ನ ಸಿ.ಎಂ.ಡಿ. ಅನಿಲ್ ಶೆಟ್ಟಿ ಎಳಿಂಜೆ, ಬಂಟ್ಸ್ ಸಂಘ ಮುಂಬಯಿ ಸಿಟಿ ರೀಜಿಯನ್ ನ ಕಾರ್ಯಾಧ್ಯಕ್ಷ ಪ್ರಕಾಶ್ ಶೆಟ್ಟಿ ನಲ್ಯಗುತ್ತು, ಥಾಣೆ ಧೀರಜ್ ಹೋಟೇಲಿನ ಕಡಂದಲೆ ಪರಾರಿ ಶೇಖರ ಎಲ್. ಶೆಟ್ಟಿ, ಮೀರಾ-ದಹಾಣು ಬಂಟ್ಸ ನ ಟ್ರಷ್ಟಿ ಸುರೇಶ್ ಶೆಟ್ಟಿ ಗಂಧರ್ವ, ಬಂಟರ ಸಂಘ ವಸಯಿ-ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ ಪಕ್ಕಳ, ಸಾಯನ್ ಎಸ್. ವಿ. ಎಂಟರ್ ಪ್ರೈಸಸ್ ನ ನಿರ್ದೇಶಕ ಮಧುಕರ್ ಬೋಸ್ಲೆ , ಬಂಟರ ಸಂಘ ಮುಂಬಯಿ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ನಂದಿಕೂರು, , ಮುಂಬಯಿ ಅಜಂತಾ ಕ್ಯಾಟರರ್ಸ್ ನ ಜಯರಾಮ ಶೆಟ್ಟಿ ಇನ್ನ, ಹೋಟೇಲು ಪ್ರಿಯದ ಯಶವಂತ ಶೆಟ್ಟಿ ಬನ್ನಂಜೆ, ಕುಲಾಲ ಸಂಘ ಮುಂಡ್ಕೂರ್ ನ ಗೌರವ ಅಧ್ಯಕ್ಷ ಐತು ಮೂಲ್ಯ ಮುಂಡ್ಕೂರ್, ಸಾಕೀನಾಕ ಬ್ರಮರಿ ದೇವಸ್ಥಾನದ ಗೌರವ ಅಧ್ಯಕ್ಷ ಕೃಷ್ಣ ಶೆಟ್ಟಿ. ಬಿಲ್ಲವ ಚೇಂಬರ್ ಆಫ್ ಕಾಮರ್ಸ ನ ನಿರ್ದೇಶಕ ಗಂಗಾಧರ ಅಮೀನ್ ಕರ್ನಿರೆ, ಸತೀಶ್ ಶೆಟ್ಟಿ ಪೂನಾ, ಕರ್ನಾಟಕ ಮಲ್ಲದ ದಾಮೋದರ ಪೂಜಾರಿ ಬಂಟ್ವಾಳ್, ಜ್ಯೋತಿ ಕ್ರೇಡಿಟ್ ಸೊಸೈಟಿಯ ಅಧ್ಯಕ್ಷ ಗಿರೀಶ್ ಸಾಲ್ಯಾನ್, ಶ್ರೀದೇವಿ ಪ್ರಿಂಟರ್ಸ್ ನ ಪ್ರಸನ್ನ ಶೆಟ್ಟಿ ಕುರ್ಕಾಲ್, ಅಣ್ಣಿ ಶೆಟ್ಟಿ, ಸಾಧು ಶೆಟ್ಟಿ, ಎಣ್ಣೆಹೊಳೆ, ವಸಾಯಿ ಅಶೋಕ ಇಂಡಷ್ಟೀಸ್ ನ ಅಶೋಕ್ ಶೆಟ್ಟಿ. ಕುಲಾಲ ಪ್ರತಿಷ್ಥಾನದ ಅಧ್ಯಕ್ಷ ಸುರೇಶ್ ಕುಲಾಲ್, ವರ್ಲಿ ಹೋಟೇಲು ಕಲ್ಪನಾದ ಶ್ರೀಮತಿ ಸುಜಯ ಆರ್ ಶೆಟ್ಟಿ, ರವೀಂದ್ರ ಪೂಂಜಾ, ಬಿಲ್ಲವರ ಅಸೋಷಿಯೇಶನ್ ಮಲಾಡ್ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ಶೇಖರ ಪೂಜಾರಿ, ಗಜಾನನ ಭಂಡಾರಿ, ಕುಲಾಲ ಸಂಘ ಮುಂಬಯಿಯ ಉಪಾಧ್ಯಕ್ಷ ರಘು ಮೂಲ್ಯ, ಬಂಟರ ಸಂಘ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ, ಕಲಾಪ್ರಕಾಶ ಪ್ರತಿಷ್ಥಾನ ಮುಂಬಯಿಯ ಪ್ರಕಾಶ್ ಎಂ ಶೆಟ್ಟಿ, ಶ್ರೀ ಮದ್ಭಾರತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ಪುತ್ರನ್ ಆಗಮಿಸಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ದಿನೇಶ್ ಶೆಟ್ಟಿ ಅಪ್ಪಾಜಿ ಬೀಡು, ವಿಜಯ್ ಕೆ ಶೆಟ್ಟಿ ಸಹರ್ ಗಾಂವ್ ಮತ್ತು ಮಂಜುನಾಥ ಶೆಟ್ಟಿ ರೇ ರೋಡ್ ಇವರನ್ನು ಈ ಸಂಧರ್ಭದಲ್ಲಿ ಗೌರವಿಸಲಾಯಿತು. ದಿನೇಶ್ ಕುಲಾಲ್, ರಘುನಾಥ ಎನ್. ಶೆಟ್ಟಿ, ಅರ್ಪಿತಾ ಶೆಟ್ಟಿ, ಶಶಿಕಲಾ ಶೆಟ್ಟಿ, ಶಕುಂತಳ ಶೆಟ್ಟಿ ಅತ್ತು ಪ್ರಮೀಳಾ ವಿ. ಕುಲಾಲ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ವೇದಿಕೆಯಲ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ನ ಸ್ಥಾಪಕ ರಮೇಶ್ ಗುರುಸ್ವಾಮಿ, ಟ್ರಷ್ಟಿಗಳಾದ ಶ್ರೀಮತಿ ಶಾಂಭವಿ ಆರ್. ಶೆಟ್ಟಿ, ರತ್ನಾಕರ ಜಿ. ಶೆಟ್ಟಿ, ರಘುನಾಥ ಎನ್. ಶೆಟ್ಟಿ, ಸುಧಾಕರ್ ಎನ್. ಶೆಟ್ಟಿ, ಪುಷ್ಪರಾಜ್ ಎಸ್. ಶೆಟ್ಟಿ, ರತ್ನಾಕರ್ ಆರ್. ಶೆಟ್ಟಿ, ಮೊಹನ್ ಟಿ. ಚೌಟ, ಟ್ರಷ್ಟಿ ಹಾಗೂ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಬಿ. ದಿನೇಶ್ ಜಿ. ಕುಲಾಲ್ ಕಾರ್ಯಾಕಾರಿ ಸಮಿತಿಯ ಅಧ್ಯಕ್ಷ ಸುರೇಶ್ ಎಸ್. ಶೆಟ್ಟಿ ಕೇದಗೆ, ಟ್ರಷ್ಟಿ, ಪ್ರಧಾನ ಕಾರ್ಯದರ್ಶಿ ವಸಂತ ಕೆ. ಪೂಜಾರಿ, ಕೋಶಾಧಿಕಾರಿ ಹರೀಶ್ ಶೆಟ್ಟಿ ನಲ್ಲೂರು, ಉಪಾಧ್ಯಕ್ಷರಾದ ಸಂತೋಶ್ ವಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಜೊತೆ ಕಾರ್ಯದರ್ಶಿ ಭರತ್ ಶೆಟ್ಟಿ ಅತ್ತೂರು, ಜೊತೆ ಕೋಶಾಧಿಕಾರಿ ಶ್ರೀಮತಿ ನೀಮ ರಾಜೇಶ್ ಶೆಟ್ಟಿ, ಸಮಿತಿಯ ಸದಸ್ಯರುಗಳಾದ ಉದಯ ಶೆಟ್ಟಿ ಟಾಟಾ, ಬಲಾಚಂದ್ರ ಡಿ ಶೆಟ್ಟಿ, ಪಾರ್ಥಸಾರತಿ ಆರ್. ಶೆಟ್ಟಿ, ಸನತ್ ಕುಮಾರ್ ಶೆಟ್ಟಿ, ಗಣೇಶ್ ಸಾಲ್ಯಾನ್, ಪದ್ಮನಾಭ ಶೆಟ್ಟಿ, ಜಯಕರ್ ಶೆಟ್ಟಿ, ಶೇಖರ್ ಶೆಟ್ಟಿ, ಸತೀಶ್ ಪೂಜಾರಿ, ಗಣೇಶ್ ಶೆಟ್ಟಿ, ಸತೀಶ್ ಶೆಟ್ಟಿ, ರಾಜೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ವಿಜಯ ಶೆಟ್ಟಿ, ಪ್ರಸಾದ್ ಶೆಟ್ಟಿ, ಸಲಹೆಗಾರರಾದ ಅರುಣ್ ಆಳ್ವ ಕಾಂತಾಡಿಗುತ್ತು, ಬೋಜ ಎಸ್ ಶೆಟ್ಟಿ ಕೇದಗೆ, ಪ್ರವೀಣ್ ಕುಮಾರ್ ಶೆಟ್ಟಿ ಕುರ್ಕಾಲ್, ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಪರವಾಗಿ ಕಾರ್ಯಾಧ್ಯಕ್ಷೆ ಪ್ರಮೀಳಾ ಜೆ. ಶೆಟ್ಟಿ, ಕಾರ್ಯದರ್ಶಿ ವಿನೋದಾ ಜೆ.ಶೆಟ್ಟಿ, ಕೋಶಾಧಿಕಾರಿ ರೋಹಿಣಿ ಎಸ್ ಪೂಜಾರಿ, ಉಪ ಕಾರ್ಯಾಧ್ಯಕ್ಶೆ ವಿಜಯಶ್ರೀ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ದಿವ್ಯ ಪಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಸುಜಾತ ಎನ್. ಪುತ್ರನ್, ಸದಸ್ಯರುಗಳಾದ ಶಾರದಾ ಜೆ. ಶೆಟ್ಟಿ, ನಿರ್ಮಲ ಕೆ. ಶೆಟ್ಟಿ, ಪ್ರಜ್ನ ಎಸ್. ಶೆಟ್ಟಿ, ರಮ್ಯ ಎಸ್. ಶೆಟ್ಟಿ, ರಾಣಿ ಆರ್. ಶೆಟ್ಟಿ, ರಾಗಿಣಿ ಆರ್. ಶೆಟ್ಟಿ, ಸರೋಜಿನಿ ಕೆ. ಕರ್ಕೇರ, ಸುಮಿತ್ರ ಪಿ. ಶೆಟ್ಟಿ, ಶೋಭಾ ವಿ. ಶೆಟ್ಟಿ, ಸಲಹೆಗಾರಗಾದ ಲೀಲಾ ಎಸ್. ಶೆಟ್ಟಿ, ಉಶಾ ಬಿ. ಶೆಟ್ಟಿ, ಯಶೋಧಾ ಎಸ್. ಶೆಟ್ಟಿ, ಕವಿತಾ ಜಿ. ಶೆಟ್ಟಿ, ಅರ್ಪಿತ ಪಿ. ಶೆಟ್ಟಿ, ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಇಂದು ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ಶಬರಿಮಲೆಯಲ್ಲಿ ಆಗುತ್ತಿರುವ ಸಮಸ್ಯೆಯ ಮಧ್ಯೆ ನಾವಿದ್ದೇವೆ. ತುಳುನಾಡಿನವರಾದ ನಮ್ಮ ಸಂಸ್ಕೃತಿ ಮಾಯವಾಗುತ್ತಿದೆ. ಇಂದಿನ ಮಕ್ಕಳು ಹನುಮಾನ್ ದೇವರನ್ನು ಪರಿಚಯಿಸದಂತಾಗಿದೆ. ಸ್ವಾಮೀಜಿಯವರು ಹೇಳಿದಂತೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಳು ಮಹಿಳೆಯರೂ ಮುಂದೆ ಬರಬೇಕಾಗಿದೆ.

ನ್ಯಾಯವಾದಿ ಸುಭಾಶ್ ಶೆಟ್ಟಿ

ಬೋಂಬೆ ಬಂಟ್ಸ್ ಅಸೋಷಿಯೇಶನ್

ಇಂತಹ ಪುಣ್ಯದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರಕಿದ್ದು ನನ್ನ ಸೌಭಾಗ್ಯ. ಇಂದು ಇಲ್ಲಿ ನಿಜವಾದ ಅಯ್ಯಪ್ಪ ಸ್ವಾಮಿ ಯನ್ನು ಪೂಜಿಸಿದಂತಾಗಿದೆ. ಅಪ್ಪಾಜಿ ಬೀಡು ನಲ್ಲಿ ನಡೆಯುವ ಧಾರ್ಮಿಕ ಕಾರ್ಯ ಸದಾ ಮುಂದುವರಿಯಲಿ. ಇದಕ್ಕೆ ನಿಮ್ಮೊಂದಿಗೆ ನಮ್ಮ ಬೆಂಬಲವೂ ಇದೆ.

ಸಂತೋಷ್ ಶೆಟ್ಟಿ,

ಅಧ್ಯಕ್ಷರು – ಬಂಟರ ಸಂಘ ಪುಣೆ

Comment here