ಸಂಸದ ಭಗವಂತ್ ಮಾನ್ ವಿರುದ್ಧ ಸಮನ್ಸ್

0
408

ವರದಿ: ಲೇಖಾ
ರಹಸ್ಯ ಕ್ಯಾಮರಾ ಬಳಸಿ ಸಂಸತ್ ವಿಡಿಯೋ ಚಿತ್ರೀಕರಣ ಮಾಡಿ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿದ್ದ ಆಮ್ ಆದ್ಮಿ ಪಕ್ಷದ ವಿವಾದಾತ್ಮಕ ಸಂಸದ ಭಗವಂತ್ ಮಾನ್ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದೆ.
 
 
ಮನೆಯಿಂದ ಹೊರಟು ಸಂಸತ್ ಭವನ ಪ್ರವೇಶಿಸುವವರೆಗೆ ರಹಸ್ಯ ಕ್ಯಾಮರಾ ಮೂಲಕ ವಿಡಿಯೋ ಚಿತ್ರೀಕರಣ ಮಾಡಿ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿದ್ದ ಭಗವಂತ್ ಮಾನ್ ವಿರುದ್ಧ ಸಂಸತ್ ನ ಉಭಯ ಕಲಾಪಗಳಲ್ಲೂ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳು ತೀವ್ರ ಕೋಲಾಹಲ ನಡೆಸಿದವು.
 
 
ಪಕ್ಷಬೇಧ ಮರೆತು ಎಲ್ಲಾ ಸಂಸದರು ಭಗವಂತ್ ಮಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ವಿಡಿಯೋ ಮಾಡಿದ ಘಟನೆ ಕುರಿತು ವಿವರಣೆ ನೀಡುವಂತೆ ಮಾನ್ ಗೆ ಸಮನ್ಸ್ ನೀಡಿದ್ದಾರೆ.
 
 
ಭಗವಂತ್ ಮಾನ್ ವಿರುದ್ದ ಬಿಜೆಪಿ, ಕಾಂಗ್ರೆಸ್, ಎಡಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದು, ಕೋಲಾಹಲದಿಂದಾಗಿ ಲೋಕಸಭೆ ಮತ್ತು ರಾಜ್ಯ ಸಭೆ ಕಲಾಪ ಕೆಲಕಾಲ ಮುಂದೂಡಲಾಯಿತು.
 
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಭಗವಂತ್ ಮಾನ್, ಶೂನ್ಯ ವೇಳೆ ಚರ್ಚೆಯನ್ನು ಲಕ್ಕಿ ಡ್ರಾ ಮೂಲಕ ನಿರ್ಧರಿಸಲಾಗುತ್ತೆ. ಇದು ನಿಜಕ್ಕೂ ಸರಿಯಾದ ಕ್ರಮವಲ್ಲ. ಹಾಗಾಗಿ ನನ್ನ ಆಯ್ಕೆ ಮಾಡಿದ್ದ ಜನರಿಗೆ ನಾವು ಏನು ಮಾಡುತ್ತೇವೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕಿದೆ ಎಂದು ವಿಡಿಯೋ ಚಿತ್ರೀಕರಣವನ್ನು ಸಮರ್ಥಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here