ಸಂಸದರ ವಿರುದ್ಧ ಎಫ್ ಐಆರ್

0
396

ಕಾರವಾರ ಪ್ರತಿನಿಧಿ ವರದಿ
ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಶಿರಸಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಸಂಸದರ ತಾಯಿ ಚಿಕಿತ್ಸೆಗಾಗಿ ದಾಖಲಾಗಿದ್ದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಈ ಕೃತ್ಯ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಈ ಘಟನೆ ಜನವರಿ 2ರಂದು ನಡೆದಿತ್ತು. ಅದರೆ ತಕ್ಷಣವೇ ಯಾವ ದೂರು ದಾಖಲಾಗಿರಲಿಲ್ಲ.
 
 
ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಐಪಿಸಿ ಸೆಕ್ಷನ್ 341, 323 ಮತ್ತು 504ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ತಮ್ಮ ತಾಯಿಯ ಚಿಕಿತ್ಸೆಗೆ ತಕ್ಷಣ ಸ್ಪಂದಿಸಲಿಲ್ಲ ಎಂದು ಆಕ್ರೋಶಗೊಂಡು ಅನಂತ್ ಕುಮಾರ್ ಹೆಗಡೆ ಅವರು ಇಬ್ಬರು ವೈದ್ಯರು ಸೇರಿದಂತೆ ಖಸಗಿ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಆ ನಂತರ ಅದಕ್ಕಾಗಿ ಕ್ಷಮೆ ಕೇಳಿದ್ದರು.

LEAVE A REPLY

Please enter your comment!
Please enter your name here