ಮಂಗಳೂರು ಪ್ರತಿನಿಧಿ ವರದಿ
ಮಂಗಳೂರಿನಲ್ಲಿ ಭೂಗತ ತೈಲ ಸಂಗ್ರಹಗಾರಕ್ಕೆ ಚಾಲನೆ ನೀಡಲಾಗಿದೆ. ಸಂಸದ ನಳೀನ್ ಕುಮಾರ್ ಕಟೀಲ್ ಅವರು ತಾಲೂಕಿನ ಪೆರ್ಮುದೆಯಲ್ಲಿರುವ ಭೂಗತ ತೈಲ ಸಂಗ್ರಹಗಾರವನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಇದರಲ್ಲಿ ಈಗ ಇರಾನ್ ನಿಂದ ಭಾರತಕ್ಕೆ ಬಂದಿದ್ದ 0.26 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲ ಸಂಗ್ರಹವಾಗಿದೆ. ಯುದ್ಧ,ತುರ್ತು ಪರಿಸ್ಥಿತಿ ವೇಳೆ ಬಳಕೆ ಮಾಡಲು ಸಂಗ್ರಹ ಮಾಡಲಾಗಿದೆ. ದೇಶದ 3ನೇ ತೈಲ ಸಂಗ್ರಹಗಾರಕ್ಕೆ ಸಂಸದರು ಚಾಲನೆ ನೀಡಿದ್ದಾರೆ. ಇದು ದೇಶದ 2ನೇ ಅತಿ ಹೆಚ್ಚು ದೊಡ್ಡ ಭೂಗತ ತೈಲ ಸಂಗ್ರಹಗಾರ ಎಂಬ ಹೆಗ್ಗಳಿಗೆ ಪಾತ್ರವಾಗಿದೆ.
ದೇಶದ ಮೂರು ಭೂಗತ ತೈಲ ಸಂಗ್ರಹಗಾರದ ವಿವರ:
ಆಂಧ್ರದ ವಿಶಾಖಪಟ್ಟಣ
ಉಡುಪಿ ಬಳಿಯ ಪಾದೂರು
ಮಂಗಳೂರು ತಾಲೂಕಿನ ಪೆರ್ಮುದೆ
1.5 ಮಿಲಿಯನ್ ಟನ್ ಸಾಮರ್ಥ್ಯದ ಪೆರ್ಮುದೆ ತೈಲಾಗಾರ:
ಈ ಮೂರು ಘಟಕಗಳಲ್ಲಿ 15 ದಿನಗಳಿಗಾಗುವಷ್ಟು ತೈಲ ಸಂಗ್ರಹವಾಗಲಿದೆ. ಪೆರ್ಮುದೆ, ಪಾದೂರು ತೈಲ ಟ್ಯಾಂಕ್ಗ ಗೆ ಕಚ್ಚಾ ತೈಲ ಪೂರೈಕೆಯನ್ನು ಪಣಂಬೂರಿನಲ್ಲಿರುವ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ ಪಿ ಎಲ್) ನಿರ್ವಹಿಸಲಿದೆ. ವಿಶಾಖಪಟ್ಟಣ ಭೂಗತ ಟ್ಯಾಂಕ್ ಗೆ ಎಚ್ಪಿಸಿಎಲ್ ತೈಲ ತುಂಬಲಿದೆ. ಪೆರ್ಮುದೆಯಲ್ಲಿ 1.5 ಮಿಲಿಯನ್ ಟನ್, ಪಾದೂರಿನಲ್ಲಿ 2.5 ಮಿಲಿಯನ್ ಟನ್ ಹಾಗೂ ವಿಶಾಖಪಟ್ಟಣದಲ್ಲಿ 2.5 ಮಿಲಿಯನ್ ಟನ್ ತೈಲ ಸಂಗ್ರಹ ಸಾಮರ್ಥ್ಯ ಹೊಂದಿದೆ.