ಸಂಸತ್ ಭವನದಲ್ಲಿ ರಾಷ್ಟ್ರಪತಿ ಮಾತು

0
367

ನವದೆಹಲಿ ಪ್ರತಿನಿಧಿ ವರದಿ
ಸಂಸತ್ ಭವನಕ್ಕೆ ರಾಷ್ಟ್ರಪತಿ ಆಗಮಿಸಿದ್ದಾರೆ. ಭದ್ರತಾ ಪಡೆಗಳು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಸ್ವಾಗತಿಸಿದ್ದಾರೆ. ಸಾರೋಟಿನಲ್ಲಿ ಸಂಸತ್ ಭವನಕ್ಕೆ ಆಗಮಿಸಿದ್ದಾರೆ. ರಾಷ್ಟ್ರಪತಿಯವರನ್ನು ಪ್ರಧಾನಿ,ಉಪರಾಷ್ಟ್ರಪತಿ ಸ್ವಾಗತಿಸಿದ್ದಾರೆ.
 
 
ನಾಳೆ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು. ವಿತ್ತ ಸಚಿವ ಅರುಣ್ ಜೇಟ್ಲಿ 2017-18ನೇ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಭಾಷಣ ಮಾಡಿದ್ದಾರೆ.
 
 
 
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕೇಂದ್ರ ಸರ್ಕಾರದ ಗುರಿಯಾಗಿದೆ. ಮೊದಲ ಬಾರಿಗೆ ಏಕಕಾಲದಲ್ಲಿ ರೇಲ್ವೆ, ಸಾಮಾನ್ಯ ಬಜೆಟ್ ಆಗುತ್ತಿದೆ. ಸ್ವಾತಂತ್ರ್ಯದ ಬಳಿಕ ಮೊದಲ ಭಾರಿಗೆ ರೇಲ್ವೆ ಬಜೆಟ್ ಸಾಮಾನ್ಯ ಬಜೆಟ್ ನಲ್ಲಿ ವಿಲೀನವಾಗಿದೆ ಎಂದು ರಾಷ್ಟ್ರಪತಿ ಭಾಷಣದಲ್ಲಿ ತಿಳಿಸಿದ್ದಾರೆ.
 
 
2.2 ಕೋಟಿ ಗ್ರಾಹಕರು ಎಲ್ ಪಿಜಿ ಸಬ್ಸಿಡಿಯನ್ನು ತ್ಯಜಿಸಿದ್ದಾರೆ. ಮೂರು ರಾಜ್ಯಗಳು ಬಯಲು ಶೌಚ ಮುಕ್ತ ರಾಜ್ಯ ಅಂತಾ ಘೋಷಿಸಿಕೊಂಡಿದೆ. 26 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ಸ್ವಚ್ಛ ಭಾರತ ಅಭಿಯಾನ ಜನಾಂದೋಲನವಾಯಿತು. ಮನೆ ಇಲ್ಲದವರಿಗೆ ಮನೆ ಕಟ್ಟಿಸುದು ಸರ್ಕಾರದ ಸಂಕಲ್ಪವಾಗಿದೆ.ಮುದ್ರಾ ಯೋಜನೆಯಡಿ ಜನರಿಗೆ ಸಾಲ ಸೌಲಭ್ಯ ನೀಡಲಾಗಿದೆ. ದೇಶದ ಜನಶಕ್ತಿಗೆ ಕೇಂದ್ರ ಸರ್ಕಾರ ಗೌರವ ಸಮರ್ಪಿಸುತ್ತದೆ ಎಂದು ಪ್ರಣಬ್ ಮುಖರ್ಜಿ ವಿವರಿಸಿದ್ದಾರೆ.
 
ಪ್ರಧಾನಿ ಉಜ್ವಲ್ ಯೋಜನೆಯಡಿ ಬಡವರಿಗೆ ಎಲ್ ಪಿಜಿ ನೀಡಲಾಗಿದೆ. ದುಬಾರಿ ಬೆಲೆಯ ನೋಟುಗಳ ಮೇಲೆ ನಿಷೇಧ ಹೇರುವ ಮೂಲಕ ಸರ್ಕಾರ ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದೆ. ಇದು ಗಮನಿಸಬೇಕಾದ ವಿಚಾರವಾಗಿದೆ. ಬೇಳೆ-ಕಾಳುಗಳ ಬೆಲೆ ಏರಿಕೆ ಕಳೆದ ವರ್ಷ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಬೆಲೆ ಏರಿಕೆಗೆ ಸರ್ಕಾರ ನಿಯಂತ್ರಣವನ್ನು ತಂದಿದೆ. ರೈತರ ಜೀವನ ಮಟ್ಟ ಸುಧಾರಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ.
 
 
 
ದೀನ್ ದಯಾಳ್ ಉಪಾಧ್ಯಾಯ್ ಗ್ರಾಮ್ ಜ್ಯೋತಿ ಯೋಜನೆ ಅಡಿಯಲ್ಲಿ 11,000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಯುವಕ ಅಭಿವೃದ್ಧಿಗಾಗಿ ಸರ್ಕಾರ ಉದ್ಯೋಗವಕಾಶಗಳನ್ನು ಕಲ್ಪಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
 
 
 
ಮಹಿಳೆಯರ ಅಭಿವೃದ್ಧಿಗಾಗಿ ಸಮಾನ ಹಕ್ಕು ನೀಡಲಿ ನಾರಿ ಶಕ್ತಿ ಪ್ರಶಸ್ತಿ ಪುರಸ್ಕಾರವನ್ನು ಪ್ರಕಟಿಸಿದೆ. ಪ್ರಧಾನಮಂತ್ರಿ ಸುರಕ್ಷಿತ ಮತ್ರಿತ್ವ ಅಭಿಯಾನ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆ ಮೂಲಕ ಗರ್ಭಿಣಿಯರ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ. ಇದರಲ್ಲಿ ಇಂದ್ರಧನುಷ್ ಅಭಿಯಾನವನ್ನು ಆರಂಭ ಮಾಡಲಾಗಿದ್ದು, ಸರ್ಕಾರ ಈ ಅಭಿಯಾನ 55 ಲಕ್ಷ ಮಕ್ಕಳಿಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
 
ಲೋಕಸಭೆ, ವಿಧಾನಸಭೆಗಳ ಏಕಕಾಲಿಕ ಚುನಾವಣೆ ಕುರಿತಂತೆ ಏರ್ಪಡಿಸಲಾಗಿದ್ದ ರಚನಾತ್ಮಕ ಚರ್ಚೆಯನ್ನು ನಮ್ಮ ಸರ್ಕಾರ ಸ್ವಾಗತಿಸಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here