ಸಂಸತ್ತು ಅಧಿವೇಶನ-ಸಂಸದರ ಸಭೆ

0
205

 
ಬೆಂಗಳೂರು ಪ್ರತಿನಿಧಿ ವರದಿ
ಎಲ್ಲರೂ ಸಂಸತ್ ಅಧಿವೇಶನಕ್ಕೆ ಮುನ್ನ ರಾಜ್ಯ ಸಂಸದರ ಸಭೆ ಕಡೆದಿದ್ದರೆ. ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಅಧಿವೇಶನ ಮುಗಿದ ಮೇಲೆ ಸಭೆ ಕರೆದಿದ್ದು ವಿಚಿತ್ರವಾಗಿದೆ.
 
 
ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಸಂಸತ್ ಬಜೆಟ್ ಅಧಿವೇಶನ ನಿನ್ನೆಗೆ ಪೂರ್ಣಗೊಂಡಿತ್ತು. ನಂತರ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ರಾಜ್ಯ ಸರ್ವಪಕ್ಷ ಸಂಸದರ ಸಭೆ ಕರೆದಿದ್ದು, ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.
 
 
ಅಧಿವೇಶನ ಮುಗಿದ ಮೇಲೆ ಸಂಸದರ ಸಭೆ ಕರೆಯಲಾಗಿದೆ. ಈಗ ನಡೆಸಿ ಪ್ರಯೋಜನವಾದರೂ ಏನು ಎಂದು ಕೆಲವು ಸಂಸದರು ಪ್ರಶ‍್ನಿಸಿದ್ದಾರೆ.
 
 
 
ಸಾಮಾನ್ಯವಾಗಿ ಅಧಿವೇಶನ ಮುನ್ನ ಎಲ್ಲ ರಾಜ್ಯಗಳ ಸಿಎಂ ನೇತೃತ್ವದಲ್ಲಿ ಸಂಸದರ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ರಾಜ್ಯದ ಯಾವ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕು, ಕೇಂದ್ರದ ಯೋಜನೆಗಳಿಗೆ ಹಣಕಾಸು ಅನುದಾನ ಪಡೆದುಕೊಳ್ಳಬೇಕಾ… ಹೀಗೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಲು ಸಭೆ ನಡೆಸುತ್ತಾರೆ.
 
 
 
ಆದರೆ ಬುಧವಾರ ದೆಹಲಿ ಕರ್ನಾಟಕ ಭವನದಲ್ಲಿ ನಡೆದರಾಜ್ಯದಲ್ಲಿರುವ ಬರಗಾಲ ಹಾಗೂ ರಾಜ್ಯದ ವಿವಿಧ ಯೋಜನೆಗಳಿಗೆ ಕೇಂದ್ರದಿಂದ ಬರಬೇಕಿರುವ ಅನುದಾನ ಕುರಿತ ಚರ್ಚಾ ವಿಷಯವಾಗಿತ್ತು. ಈ ಸಭೆಯಲ್ಲಿ ಹಲವು ಸಂಸದರು ಗೈರುಹಾಜರಾಗಿದ್ದರು.

LEAVE A REPLY

Please enter your comment!
Please enter your name here