'ಸಂಶೋಧನೆ ನಿರಂತರ ಶೈಕ್ಷಣಿಕ ಪ್ರಕ್ರಿಯೆ'

0
343

ಉಜಿರೆ ಪ್ರತಿನಿಧಿ ವರದಿ
ಶೈಕ್ಷಣಿಕ ವಲಯದಲ್ಲಿ ಸಂಶೋಧನೆಯು ನಿರಂತರ ಪ್ರಕ್ರಿಯೆಯಾಗಿ ನಿರ್ವಹಿಸಲ್ಪಡಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಶ್ರೀಪತಿ ಕಲ್ಲೂರಾಯ ಅಭಿಪ್ರಾಯಪಟ್ಟರು.
 
ಎಸ್ಡಿಎಂ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮಾಜಕಾರ್ಯ ವಿಭಾಗ ಮತ್ತು ಸಿಐಆರ್ ಎಚ್ಎಸ್ ಜಂಟಿಯಾಗಿ ಸಂಶೋಧನಾ ಯೋಜನೆಯ ಪ್ರಸ್ತಾವನೆ ಬರವಣಿಗೆ ಕುರಿತು ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
 
ಶಿಕ್ಷಣ ರಂಗದಲ್ಲಿ ತೊಡಗಿಸಿಕೊಂಡ ಬೋಧಕರು ನಿರಂತರವಾಗಿ ಸಂಶೋಧನಾ ಮನೋಧರ್ಮದೊಂದಿಗೆ ಕಾರ್ಯನಿರ್ವಹಿಸಬೇಕು. ಹಾಗಾದಾಗ ಶೈಕ್ಷಣಿಕ ಕ್ಷೇತ್ರದಲ್ಲಿ ಭಿನ್ನವಾದ ಸಂಶೋಧನಾ ಸಂಸ್ಕೃತಿಯನ್ನು ನೆಲೆಗೊಳಿಸಲು ಸಾಧ್ಯ ಎಂದರು.
 
ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಮಾತನಾಡಿ ಸಂಶೋಧನೆಯೊಂದಿಗೆ ಗುರುತಿಸಿಕೊಂಡ ಬೋಧಕರು ಬೋಧನಾ ವೃತ್ತಿಯನ್ನು ವಿಶಿಷ್ಠವಾಗಿ ನಿರ್ವಹಿಸಬಹುದು ಎಂದರು. ಸಂಶೋಧನೆಯ ಪ್ರಕ್ರಿಯೆ ನಿರಂತರವಾದುದು. ಉಪನ್ಯಾಸಕರು ತಮ್ಮ ವೃತ್ತಿಯ ಗುಣಮಟ್ಟ ಹೆಚ್ಚಿಸಿಕೊಳ್ಳಲು ಸಂಶೋಧನೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈಗಿನ ಶಿಕ್ಷಣ ವ್ಯವಸ್ಥೆ ಅನಗತ್ಯ ಚೌಕಟ್ಟುಗಳಲ್ಲಿ ಬಂಧಿತವಾಗಿದೆ. ಇವುಗಳ ಆಚೆಗೆ ಬೋಧಕರು ಆಲೋಚಿಸಬೇಕು. ಸೀಮಿತ ಚೌಕಟ್ಟುಗಳ ನಡುವೆಯೇ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬಹುದಾದ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಭಿನ್ನತೆಯನ್ನು ಸಾಬೀತುಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ| ಕೆ.ಎಸ್ ಮೋಹನ ನಾರಾಯಣ ಮಾತನಾಡಿ, ಸಂಶೋಧನೆಯ ಉಪಯೋಗ ಸಮಾಜಕ್ಕೆ ಸಿಗುವಂತಾಗಬೇಕು ಎಂದರು. ಸಂಶೋಧನೆಎಂಬುದು ಕೇವಲ ವ್ಯಕ್ತಿಗತವಾದ ಪ್ರಕ್ರಿಯೆಯಲ್ಲ. ಅದೊಂದು ಸಾಮಾಜಿಕ ಪ್ರಕ್ರಿಯೆ. ಸಮಾಜಕ್ಕೆ ಉಪಯುಕ್ತ ಎನ್ನಿಸುವಂಥ ಸಂಶೋಧನೆಗಳು ನಡೆಯಬೇಕು. ಹಾಗಾದಾಗ ಮಾತ್ರ ಶಿಕ್ಷಣ ವಲಯವುಜ್ಞಾನಾಧಾರಿತ ಕೊಡುಗೆ ನೀಡಿದಂತಾಗುತ್ತದೆ ಎಂದರು.
ರವಿಶಂಕರ್ ಕೆ .ಆರ್ ಸ್ವಾಗತಿಸಿದರು. ಡಾ.ಸೂಫಿಯಾ ಪಠಾಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಡಂಕಿನ್ ಜಳ್ಕಿ ವಂದಿಸಿದರು. ಉಪನ್ಯಾಸಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.
 
 
ಕ್ರಾಂತಿ ಕೊನೆಗೊಳಿಸಿ ಶಾಂತಿಯಿಂದಿರೋಣ
ವರದಿ-ಸಿಂಧು ತೃತೀಯ ಬಿ.ಎ.
ದೇಶ ಈಗಾಗಲೇ ಎರಡು ಮಹಾಯುದ್ಧಗಳನ್ನು ಕಂಡಿದೆ, ಅದರ ನೋವನ್ನು ಅನುಭವಿಸಿದೆ. ಇನ್ನು ಮೂರನೇ ಮಹಾಯುದ್ಧ ಸಂಭವಿಸಿದರೆ ಇಡೀ ಪ್ರಪಂಚವೇ ಅಲ್ಲೋಲ ಕಲ್ಲೋಲವಾಗುತ್ತದೆ. ಆದರೂ ಗುಪ್ತವಾಗಿ ಬಯೋತ್ಪಾದಕರು ಪಿತೂರಿ ನಡೆಸುತ್ತಿದ್ದಾರೆ. ದೇಶದ ಶಾಂತಿ ಸೌಹಾರ್ದತೆಗೆ ದಕ್ಕೆ ಉಂಟುಮಾಡುತ್ತಿದ್ದಾರೆ. ಇದು ಹೀಗೆ ಮುಂದುವರೆಯಬಾರದು. ದೇಶದಲ್ಲಿ ಶಾಂತಿ ನೆಲೆಸಲು ನಮ್ಮೆಲ್ಲರ ಬೆಂಬಲ ಅಗತ್ಯ ಎಂದು ಶ್ರೀ.ಧ.ಮಂ.ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಶಲೀಪ್ ಕುಮಾರಿ ಹೇಳಿದರು.
ಇವರು ಇತ್ತೀಚೆಗೆ ಉಜಿರೆ ಶ್ರೀ.ಧ.ಮಂ. ಪದವಿ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಶಾಂತಿ ದಿನಾಚರಣೆ ಕಾರ್ಯಕದರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಬಿ.ಎ.ವಿಭಾಗದ ವಿಶಾಕ್, ಕೌಶಿಕ್, ಅಸ್ರತ್, ಪವನ್, ನವೀನ್, ಹಾಗೂ ಬಿ.ಕಾಂ ವಿದ್ಯಾಥರ್ಿನಿ ಯೋಶಿಕಾ ಅಂತರಾಷ್ಟ್ರೀಯ ಶಾಂತಿ ಕುರಿತು ತಮ್ಮ ವಿಚಾರ ಸಂಕೀರ್ಣವನ್ನು ಮಂಡಿಸಿದರು. ಇದಕ್ಕೆ ಪೂರಕವಾಗುವಂತೆ ವಿಭಾಗದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಂತಿ ನೆಲೆಸಲು ಎಲ್ಲರಲ್ಲೂ ಐಕ್ಯತೆ ಇರಬೇಕು, ದೇಶದ ಎಲ್ಲೆಯೊಳಗೆ ಬೇಧ-ಭಾವವಿದ್ದರೆ ಶಾಂತಿ ಸ್ಥಾಪಿಸುವುದು ಕಷ್ಟ. ಯುದ್ಧ ಎಲ್ಲದಕ್ಕೂ ಪರಿಹಾರವಲ್ಲ. ಯಾವುದೇ ಸಮಸ್ಯೆಗಳನ್ನು ಮೊದಲು ಕುಳಿತು ಚರ್ಚಿಸಿ ಅರಿತುಕೊಳ್ಳಬೇಕು. ಮಾನವೀಯತೆಯನ್ನು ಮೆರೆಸಬೇಕು. ಎಲ್ಲರೂ ಸ್ನೇಹ ವಿಶ್ವಾಸದಿಂದ ಇರಬೇಕೆಂಬುವುದು ಇಲ್ಲಿ ಪ್ರತಿಯೊಬ್ಬರ ಆಶಯವಾಗಿತ್ತು.
ಈ ಕಾರ್ಯಕ್ರಮವನ್ನು ಸಿಂಧು ನಿರೂಪಿಸಿ, ಆಶ್ರಿತಾ ಸ್ವಾಗತಿಸಿ, ಸ್ವಸ್ತಿಕಾ ವಂದಿಸಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಸರಸ್ವತಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಸಾಕ್ಷಿಯಾದರು.

LEAVE A REPLY

Please enter your comment!
Please enter your name here