ಸಂವಾದ

0
424

ವರದಿ: ಜಯ ಕುಮಾರ್ ಶೆಟ್ಟಿ
ಯಶಸ್ಸು ಗಳಿಸಲು ಹಣ, ವಿದ್ಯಾರ್ಹತೆ ಅಥವಾ ವ್ಯಕ್ತಿಯ ಹಿನ್ನೆಲೆ ಮುಖ್ಯವಾಗುವುದಿಲ್ಲ. ಆತನ ಕನಸು, ಸಾಧಿಸುವ ಛಲ, ಪರಿಶ್ರಮ ಮುಖ್ಯವಾಗುತ್ತದೆ. ಇದರೊಂದಿಗೆ ತಾನು ತೊಡಗಿಸಿಸಿಕೊಂಡ ವೃತ್ತಿಯನ್ನು ಪ್ರೀತಿಸಿ ಅದನ್ನೆ ಪ್ರವೃತ್ತಿಯಾಗಿಸಿಕೊಂಡಾಗ ಯಶಸ್ಸು ಗಳಿಸಲು ಸಾಧ್ಯ ಎಂದು ರುಡ್ ಸೆಟ್ ಸಂಸ್ಥೆಯ ಪ್ರಾಧ್ಯಾಪಕಿ ಅನಸೂಯಾ ಅವರು ತಿಳಿಸಿದರು.
 
 
 
ಉಜಿರೆಯ ಶ್ರೀ. ಧ.ಮಂ ಕಾಲೇಜಿನ ಅರ್ಥಶಾಸ್ತ್ರ ಸಂಘವು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಅನಸೂಯಾ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
 
 
 
ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿಕೊಂಡು ಅದರಲ್ಲಿರುವ ಅವಕಾಶಗಳ ಬಗ್ಗೆ ತಿಳಿದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಇದಕ್ಕೆ ಪ್ರೋತ್ಸಾಹದ ಜೊತೆಗೆ ಉತ್ತಮ ಮಾರ್ಗದರ್ಶನವೂ ಬೇಕು ಎಂದು ಅಭಿಪ್ರಾಯಪಟ್ಟರು.
 
 
ಸಭೆಯ ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಯ ಕುಮಾರ ಶೆಟ್ಟಿ ಮಾತನಾಡುತ್ತಾ ಪದವಿ ಮುಗಿದ ಬಳಿಕ ಮುಂದೇನು ಎಂದು ಚಿಂತಿಸುವ ಬದಲು, ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವ ಉದ್ಯೋಗ ಅವಕಾಶಗಳ ಬಗ್ಗೆ ತಿಳಿದುಕೊಂಡು ತಮ್ಮ ಕಾಲೇಜು ಶಿಕ್ಷಣದ ಸಮಯದಲ್ಲಿ ಅಗತ್ಯ ಸಾಮರ್ಥ್ಯವನ್ನು ಹೆಚ್ಚಿಸಲು ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
 
 
ವೇದಿಕೆಯಲ್ಲಿ ವಿದ್ಯಾರ್ಥಿ ಸಂಯೋಜಕರಾದ ಕಾರ್ತಿಕೇಯಾ ಹಾಗೂ ಕು.ಅಭಿಜ್ಞಾ ಉಪಸ್ಥಿತರಿದ್ದರು. ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸಂಪ್ರೀತಾ ಸ್ವಾಗತಿಸಿ ಕು.ಶುಭಲಕ್ಷ್ಮಿ ವಂದಿಸಿದರು.

LEAVE A REPLY

Please enter your comment!
Please enter your name here